ಕೊಳ್ಳೇಗಾಲ: ಯುವ ರೈತ ಜೋಡಿಯ ಡಿಫ್ರೆಂಟ್ ಪ್ರೀ ವೆಡ್ಡಿಂಗ್ ಶೂಟ್, ಭಾರೀ ವೈರಲ್
ಚಾಮರಾಜನಗರ, ನವೆಂಬರ್, 23: ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಸಾಮಾನ್ಯವಾಗುತ್ತಿದೆ. ಅದರಂತೆಯೇ ಇಲ್ಲೋರ್ವ ರೈತ ಕೃಷಿ ಜೀವನವದ ಮೂಲಕವೇ ಮದುವೆ ಕರೆಯೋಲೆ ನೀಡಿರುವುದು ಸದ್ಯ ಭಾರೀ ಮೆಚ್ಚುಗೆಗೆ ಕಾರಣಾವಾಗಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವ ರೈತ ಅಭಿಲಾಷ್ ಚನ್ನಪಟ್ಟಣದ ಕೃತಿಕಾ ಎಂಬವರೊಟ್ಟಿಗೆ ಬುಧವಾರ ಹೊಸ ಜೀವನಕ್ಕೆ ಕಾಲಿಟಿದ್ದು, ಇವರು ನಡೆಸಿರುವ ಪ್ರೀ ವೆಡ್ಡಿಂಗ್ ವೀಡಿಯೋ ವೈರಲ್ ಆಗುತ್ತಿದೆ.

ಡ್ರೋನ್ ಮೂಲಕ, ಜಲಪಾತ, ಸೇತುವೆ, ನದಿ, ಪಾರಂಪರಿಕ ತಾಣಗಳ ಮುಂದೆ ಪ್ರೀ ವೆಡ್ಡಿಂಗ್ ಶೂಟ್ ನಡೆಸುವವರೇ ಬಹಳ. ಆದರೆ, ಅಭಿಲಾಶ್ ತಾವು ಪ್ರೀತಿಸುವ ಕೃಷಿ ಕಾಯಕವನ್ನೇ ತೋರಿದ್ದಾರೆ. ನೊಗ ಕಟ್ಟಿ ಉಳುಮೆ ಮಾಡುವುದು, ಮಧ್ಯಾಹ್ನದ ಊಟ ಮುದ್ದೆ-ಉಪ್ಸಾರು, ಎತ್ತಿನಗಾಡಿಯಲ್ಲಿ ಭಾವಿ ಪತ್ನಿ ಜೊತೆ ಸವಾರಿ ಮಾಡಿ ಗಮನ ಸೆಳೆದಿದ್ದಾರೆ. ಇನ್ನು, ಇವರ ಮದುವೆ ದಿನ ಕೃಷಿ ಸಂಬಂಧದ ಉಪನ್ಯಾಸವೂ ಇರಲಿದೆ ಎಂದು ತಿಳಿದುಬಂದಿದೆ.
ರೈತರಿಗೆ ಹೆಣ್ಣು ಕೊಡುವುದಿಲ್ಲ ಹಲವರು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದರು. ಈ ನಡುವೆ, ಯುವ ರೈತ ಅಭಿಲಾಶ್ ಕೃಷಿ ಮೂಲಕ ಮದುವೆಗೆ ಕರೆಯೋಲೆ ಕೊಟ್ಟಿರುವುದು ನೆಟ್ಟಗರ ಮೆಚ್ಚುಗೆಗೆ ಪಾತ್ರವಾಗಿದೆ.
ಕಂಕಣಭಾಗ್ಯ ಕರುಣಿಸುವಂತೆ ಕೋರಿ ಪ್ರಾರ್ಥನೆ
ಇನ್ನು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರಬೆಟ್ಟದಲ್ಲಿ ನೆಲೆ ನಿಂತು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಮಾದಪ್ಪನ ಬಳಿಗೆ ಪಾದಯಾತ್ರೆ ಮೂಲಕ ತೆರಳಿದ ಅವಿವಾಹಿತ ಯುವಕರು ತಮಗೆ ಕಂಕಣಭಾಗ್ಯ ಕರುಣಿಸುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಪವಾಡ ಪುರುಷ ಮಲೆ ಮಹದೇಶ್ವರ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬರುತ್ತಿರುವುದರಿಂದ ಆತನ ಸನ್ನಿಧಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ದೀಪಾವಳಿ ಅಮಾವಾಸ್ಯೆಯಂದು ಭಕ್ತರು ಪ್ರವಾಹೋಪಾದಿಯಲ್ಲಿ ಬರುತ್ತಾರೆ. ಕಳೆದ ಹಲವು ದಿನಗಳಿಂದ ಸ್ಥಳೀಯ ಮತ್ತು ದೂರದ ಊರುಗಳಿಂದ ಭಕ್ತರು ವಾಹನ ಮತ್ತು ಪಾದಯಾತ್ರೆ ಮೂಲಕ ಆಗಮಿಸಿ ಮಾದಪ್ಪನ ಸೇವೆಯಲ್ಲಿ ನಿರತರಾಗಿದ್ದಾರೆ.
ಮಾದಪ್ಪನ ಸನ್ನಿಧಿಗೆ ಬರುವ ಭಕ್ತರು ನಾನಾ ಸಂಕಷ್ಟಗಳನ್ನು ಮುಂದಿಟ್ಟು ಅದನ್ನು ನೆರವೇರಿಸಿಕೊಡುವಂತೆ ಹರಕೆ ಕಟ್ಟಿದರೆ, ಮತ್ತೆ ಕೆಲವು ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ಕಾರಣಕ್ಕಾಗಿ ಹರಕೆ ತೀರಿಸಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಹಿಂತಿರುಗುತ್ತಾರೆ. ಇದು ಪ್ರತಿ ದಿನ, ಅಮಾವಾಸ್ಯೆಗಳಲ್ಲಿ ನಡೆಯುತ್ತದೆ. ಆದರೆ ದೀಪಾವಳಿ ಅಮಾವಾಸ್ಯೆ ವಿಶೇಷವಾಗಿದ್ದು, ಈ ವೇಳೆ ಮಾದಪ್ಪನ ದರ್ಶನ ಮಾಡಿ, ಸೇವೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ.
ಮಾದಪ್ಪನ ಸನ್ನಿಧಿಗೆ ಹರಕೆ ಹೊತ್ತು ಪಾದಯಾತ್ರೆ
ಮಾದಪ್ಪನ ಕೃಪೆಯಿಂದ ಸನ್ನಿಧಿಗೆ ತೆರಳಿ ಸೇವೆ ಮಾಡಿದರಿಗೆ ಉತ್ತಮ ಫಲ ದೊರೆಯುವುದರಿಂದಾಗಿ ಭಕ್ತರು ತಮ್ಮ ಸಂಕಷ್ಟಗಳನ್ನು ಸನ್ನಿಧಿಗೆ ಬಂದು ನಿವೇದಿಸಿಕೊಳ್ಳುವುದು ತಲತಲಾಂತರದಿಂದ ನಡೆದು ಬಂದಿದೆ. ಮಳೆ ಬೆಳೆಯಾಗಿ ರಾಜ್ಯ, ದೇಶ ಸುಭೀಕ್ಷೆಯಿಂದ ಕೂಡಿರಲಿ ಎಂದು ಪೂಜಾ ಕೈಂಕರ್ಯಗಳನ್ನು ಜನಪ್ರತಿನಿಧಿಗಳು ಮಾಡಿಸುವುದು ಕೂಡ ಕಂಡು ಬರುತ್ತದೆ. ಮಾದಪ್ಪ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬರುತ್ತಿರುವುದರಿಂದಲೇ ಭಕ್ತರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾಣಿಕೆ ಹಾಕುವುದರಿಂದ ಕೋಟ್ಯಾಧಿಪತಿಯಾಗಿಯೇ ಮುಂದುವರೆಯುತ್ತಿರುವುದನ್ನು ಕಾಣಬಹುದಾಗಿದೆ.
ದೀಪಾವಳಿಗೆ ಮಲೆಮಹದೇಶ್ವರನ ಸನ್ನಿಧಿಗೆ ಭಕ್ತರು ತಮ್ಮದೇ ಆದ ಸಂಕಲ್ಪ ಮಾಡಿಕೊಂಡು ಪಾದಯಾತ್ರೆ ಮಾಡುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಹೀಗೆ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಕಳೆದೊಂದು ದಶಕದಿಂದ ವಿಶೇಷತೆಯೊಂದು ಕಾಣಿಸುತ್ತಿದೆ. ಅದು ಏನೆಂದರೆ ವಿವಾಹವಾಗಲು ವಧು ಸಿಗದೆ ಅವಿವಾಹಿತರಾಗಿ ಉಳಿದ ಯುವಕರು ಮದುವೆಯಾಗಲು ವಧು ಸಿಗುವಂತೆ ಹರಕೆ ಹೊತ್ತು ಪಾದಯಾತ್ರೆಯಲ್ಲಿ ಆಗಮಿಸುತ್ತಿರುವುದು ವಿಶೇಷವಾಗಿದೆ.
ಕಂಕಣ ಭಾಗ್ಯಕ್ಕಾಗಿ ಯುವಕರ ಮೊರೆ
ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಕೃಷಿ ಕುಟುಂಬದಲ್ಲಿರುವ ಯುವಕರಿಗೆ ವಿವಾಹವಾಗಲು ಯುವತಿಯರೇ ಸಿಗದಂತಾಗಿದೆ. ಹೀಗಾಗಿ ಕಳೆದ ಹನ್ನೊಂದು ವರ್ಷಗಳಿಂದ ಮದುವೆಯಾಗದ ಯುವಕರು ಪಾದಯಾತ್ರೆ ಮೂಲಕ ಮಾದಪ್ಪನ ಸನ್ನಿಧಿಗೆ ಆಗಮಿಸುತ್ತಿದ್ದು, ತಮಗೆ ಆದಷ್ಟು ಬೇಗ ಕಂಕಣ ಭಾಗ್ಯ ಕರುಣಿಸುವಂತೆ ಬೇಡಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ವಿವಾಹದ ಸಂಕಲ್ಪ ಹೊತ್ತು ಪಾದಯಾತ್ರೆ ಮಾಡುತ್ತಿದ್ದ ತಂಡದಲ್ಲಿ ಕೇವಲ ಹತ್ತಿಪ್ಪತ್ತು ಯುವಕರು ಇರುತ್ತಿದ್ದರು. ಆದರೀಗ ಆ ಸಂಖ್ಯೆ ಸಾವಿರಾರು ಇದೆ. ಆದರೆ ಕೆಲವರಷ್ಟೆ ಬಹಿರಂಗವಾಗಿ ಪಾದಯಾತ್ರೆ ಮಾಡುತ್ತಿದ್ದು, ತಮ್ಮ ನೋವನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಾ ಕಂಕಣ ಭಾಗ್ಯ ಕರುಣಿಸುವಂತೆ ಮಾದಪ್ಪನಲ್ಲಿ ಬೇಡಿಕೊಳ್ಳುತ್ತಿದ್ದಾರೆ.
ಸದ್ಯ ಚಾಮರಾಜನಗರ ಜಿಲ್ಲೆ ಸೇರಿದಂತೆ ಹಲವಾರು ಜಿಲ್ಲೆಗಳಿಂದ ಯುವಕರು ಆಗಮಿಸುತ್ತಿರುವುದು ಕಂಡು ಬಂದಿದೆ. ಗ್ರಾಮಾಂತರ ಪ್ರದೇಶದಲ್ಲಿನ ರೈತರ ಗಂಡು ಮಕ್ಕಳಿಗೆ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಮಹದೇಶ್ವರ ಕರುಣೆ ತೋರಬೇಕು ಎನ್ನುವುದು ಬ್ರಹ್ಮಚಾರಿ ಯುವಕರ ಹರಕೆಯಾಗಿದೆ. ಕಂಕಣ ಭಾಗ್ಯ ಕೂಡಿ ಬಾರದ ಯುವಕರು ದೀಪಾವಳಿ ಜಾತ್ರೆ ಸಂದರ್ಭ ಮಹದೇಶ್ವರನಿಗೆ ಎಣ್ಣೆ ಮಜ್ಜನ ಹಾಗೂ ರಥೋತ್ಸವ ಸೇವೆ ಸೇರಿದಂತೆ ಹಲವು ರೀತಿಯ ದೇವರ ಕೈಂಕರ್ಯಗಳನ್ನು ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ.
ಮಾದಪ್ಪನ ಸನ್ನಿಧಿಯಲ್ಲಿ ಯುವಕರ ಪ್ರಾರ್ಥನೆ
ಕಳೆದ ಕೆಲ ದಿನಗಳಿಂದ ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಯುವಕರು ಆಗಮಿಸಿದ್ದಾರೆ. ಒಂದೆಡೆ ಕೋಡಹಳ್ಳಿ ಗ್ರಾಮದ ನೀಲಗಾರರು ಹಾಗೂ ಮಹದೇಶ್ವರ ಗುಡ್ಡರು ಸಮುದಾಯದ 100ಕ್ಕೂ ಅಧಿಕ ಯುವಕರು ಪಾದಯಾತ್ರೆಯಲ್ಲಿ ಪಾಲ್ಗೊಂಡು, ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಮದುವೆಗೆ ಹೆಣ್ಣು ಸಿಗಲಿ, ಪ್ರಸ್ತುತ ಇರುವ ಬರಗಾಲ ಹೋಗಲಾಡಿಸಿ ನಾಡಿಗೆ ಉತ್ತಮ ಮಳೆಯಾಗಿ, ನಾಡು ಸಮೃದ್ಧವಾಗಲಿ, ಯಾವುದೇ ರೋಗ ರುಜಿನಗಳು ಬರದೇ ಜನರು ಆರೋಗ್ಯವಾಗಿರುವಂತೆ ಮಾದಪ್ಪನಲ್ಲಿ ಪ್ರಾರ್ಥಿಸುತ್ತಿರುವುದಾಗಿ ಹೇಳಿದ್ದಾರೆ.
ಇನ್ನೊಂದೆಡೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ದೊಡ್ಡಮೂಡು ಗ್ರಾಮದಿಂದ ಪಾದಯಾತ್ರೆಯಲ್ಲಿ ಆಗಮಿಸಿದ ಯುವಕರು, ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. 11 ವರ್ಷಗಳ ಹಿಂದೆ 10 - 20 ಯುವಕರ ತಂಡದೊಂದಿಗೆ ಆರಂಭವಾದ ನಮ್ಮ ಪಾದಯಾತ್ರೆ ಈಗ ನೂರಾರು ಸಂಖ್ಯೆ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಭಾಗ್ಯಗಳನ್ನು ಕೊಟ್ಟಿದ್ದಾರೆ. ಅದೇ ರೀತಿ ರೈತರ ಮಕ್ಕಳಿಗೆ ಹೆಣ್ಣು ಭಾಗ್ಯವನ್ನು ಕೊಡಬೇಕು. ನಮಗೆ ಹಣ ಬೇಡ, ವಿವಾಹ ಭಾಗ್ಯ ಕೊಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
160 ಕಿ.ಮೀ, ಪಾದಯಾತ್ರೆ ಮಾಡಿದ ಯುವಕರು
ಈ ಹಿಂದೆ ದೀಪಾವಳಿ ಹಬ್ಬ ಹಾಗೂ ಕಾರ್ತಿಕ ಮಾಸದ ಪ್ರಯುಕ್ತ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ನೂರಾರು ಯುವಕರು ಕೋಡಹಳ್ಳಿ ಗ್ರಾಮದಿಂದ ಬುತ್ತಿ ಕಟ್ಟಿಕೊಂಡು, ಒಂದು ಬೆತ್ತ ಹಿಡಿದು ಮಹದೇಶ್ವರನ ನಾಮಸ್ಮರಣೆ ಮಾಡುತ್ತಾ, ಮಳೆ ಬರಲಿ ಹಾಗೂ ರೈತರು, ಕೂಲಿ ಕಾರ್ಮಿಕರಿಗೆ ಮದುವೆಗೆ ಹೆಣ್ಣು ಸಿಗಲೆಂದು ಸುಮಾರು 4 ದಿನಗಳ ಕಾಲ 160 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದನ್ನು ಸ್ಮರಿಸಬಹುದಾಗಿದೆ. ಅದು ಏನೇ ಇರಲಿ ಬ್ರಹ್ಮಚಾರಿಗಳ ಮೊರೆಯನ್ನು ಮಾದಪ್ಪ ಆಲಿಸಿ ಎಲ್ಲರಿಗೂ ಕಂಕಣ ಭಾಗ್ಯವನ್ನು ಕರುಣಿಸುವಂತಾಗಲಿ ಎನ್ನುವುದೇ ನಮ್ಮ ಪ್ರಾರ್ಥನೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications