ಕೊಳ್ಳೇಗಾಲ ನಗರಸಭೆ ಸಿಬ್ಬಂದಿ ಎಡವಟ್ಟು: ಮೃತಪಟ್ಟಿದ್ದು ತಾಯಿ-ಮರಣ ಪ್ರಮಾಣ ಪತ್ರದಲ್ಲಿ ಮಗನ ಹೆಸರು-ಮುಂದೇನಾಯ್ತು ಗೊತ್ತಾ?
ಚಾಮರಾಜನಗರ, ನವೆಂಬರ್, 08: ಸಾಮಾನ್ಯವಾಗಿ ಮರಣ ಹೊಂದಿದವರ ಮರಣ ಪತ್ರವನ್ನು ಕೊಡಲಾಗುತ್ತಿದೆ. ಆದರೆ ಇದೀಗ ವಿಚಿತ್ರ ಎಂಬಂತೆ ಎದುರಿಗೆ ಕುಳಿತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ಕೊಟ್ಟು ಎಲ್ಲರನ್ನೂ ಹೌಹಾರುವಂತೆ ಮಾಡಿರುವ ಘಟನೆ ಕೊಳ್ಳೇಗಾಲ ನಗರಸಭೆಯಲ್ಲಿ ನಡೆದಿದೆ. ಹಾಗಾದರೆ ಮುಂದಾಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕೊಳ್ಳೇಗಾಲ ನಗರಸಭೆ ಸಿಬ್ಬಂದಿಯ ಎಡವಟ್ಟು ಕಂಡು ದಾಖಲೆಯಲ್ಲಿ ಮೃತಪಟ್ಟು ದೈಹಿಕವಾಗಿ ಬದುಕಿರುವ ವ್ಯಕ್ತಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಏನಿದು ಎಡವಟ್ಟು?: ಕೊಳ್ಳೇಗಾಲದ ಕುರುಬರ ಬೀದಿ ನಿವಾಸಿಯಾದ ಶಂಕರ ಎಂಬವರು, ನಿಧನ ಹೊಂದಿದ ತಮ್ಮ ತಾಯಿ ಪುಟ್ಟಮ್ಮ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಕೊಳ್ಳೇಗಾಲ ನಗರಸಭೆಯ ಜನನ-ಮರಣ ನೋಂದಣಿ ವಿಭಾಗದ ಮಹಾದೇವಸ್ವಾಮಿ ಎಂಬವರು ನಿಧನ ಹೊಂದಿದ ಪುಟ್ಟಮ್ಮ ಬದಲಾಗಿ ಬದುಕಿರುವ ಶಂಕರ್‌ಗೆ ಮರಣ ಪ್ರಮಾಣ ಪತ್ರ ಕೊಟ್ಟು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಳಿ ಆಕ್ರೋಶಗೊಂಡ ಶಂಕರ್ ಆತನ ಮುಂದೆ ಜೀವಂತವಾಗಿ ಕೂತಿದ್ದರೂ, ಅರ್ಜಿಯಲ್ಲಿ ಪುಟ್ಟಮ್ಮ ಎಂದು ಬರೆಯಲಾಗಿತ್ತು. ಆದರೂ ಕರ್ತವ್ಯ ಲೋಪ ಎಸಗಿ ಮರಣ ಪ್ರಮಾಣ ಪತ್ರ ಕೊಟ್ಟಿದ್ದನ್ನು ಕೂಡಲೇ ಸರಿಪಡಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
42 ಕೇಸ್‌ನಲ್ಲಿ ಬೇಕಿದ್ದ ಕಳ್ಳ ಅರೆಸ್ಟ್: ಬರೋಬ್ಬರಿ 42 ಕಳವು ಪ್ರಕರಣ ಎಸಗಿದ್ದ ಖತರ್ನಾಕ್ ಕಳ್ಳನನ್ನು ಚಾಮರಾಜನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಚಾಮರಾಜನಗರ ಸೇರಿದಂತೆ ಮಂಡ್ಯ, ಬೆಂಗಳೂರು, ತಮಿಳುನಾಡಿನಲ್ಲೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆನಂದ್ ಎಂಬಾತ ಬಂಧಿತ ಆರೋಪಿ. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಬೇಕಿದ್ದ ನಟ ಕಮ್ ನಿರ್ದೇಶಕನಾಗಿದ್ದ ಈತ ಈಗ ಕಳವು ಪ್ರಕರಣಗಳಲ್ಲಿ ಜೈಲುಪಾಲಾಗಿದ್ದಾನೆ.
ಚಾಮರಾಜನಗರ ಜಿಲ್ಲಾಕೇಂದ್ರ ಹಾಗೂ ಕೊಳ್ಳೇಗಾಲದಲ್ಲಿ ಸರಣಿ ಕಳವು ಎಸಗಿದ್ದ ಈತನನ್ನು ಬರೋಬ್ಬರಿ ಒಂದು ತಿಂಗಳು ಕಾರ್ಯಾಚರಣೆ ನಡೆಸಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 2005ರಲ್ಲಿ ಸಿನಿಮಾವೊಂದರ ನಿರ್ದೇಶನಕ್ಕೆ ಮುಂದಾಗಿದ್ದ ಆನಂದ್ ಆ ವೇಳೆ ಸಿನಿಮಾ ಪೂರ್ತಿಯಾಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ.
ಇದೇ ವೇಳೆ ತನ್ನ ಹೆಂಡತಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರ ತಿಳಿದು ಪತ್ನಿಯ ಪ್ರಿಯತಮನನ್ನು ಕೊಂದು ಜೈಲು ಸೇರಿದ್ದನು. ಜೈಲಿನಲ್ಲಿ ತಮಿಳುನಾಡು ಮೂಲದ ಕಳ್ಳರ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಅವರ ಜೊತೆ ಸೇರಿ ಮೊದಲು ತಮಿಳುನಾಡಿನಲ್ಲಿ ಕಳ್ಳತನ ಮಾಡಿದ್ದ. ಈತ ಇಲ್ಲಿಯವರೆಗೂ ಒಟ್ಟು 42 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.
ಸದ್ಯ, ಚಾಮರಾಜನಗರ ಪಟ್ಟಣ ಪೊಲೀಸರಿಂದ ಆರೋಪಿ ಆನಂದ್ ಬಂಧಿಸಲಾಗಿದೆ. ಎಸ್.ಪಿ ಕವಿತಾ ಹಾಗೂ ಆರೋಪಿ ಆನಂದ್ ವಿಚಾರಣೆ ನಡೆಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.












Click it and Unblock the Notifications