• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮರಾಜನಗರ; ಕೊರೊನಾ ದೇವಿಯ ಪ್ರತಿಷ್ಠಾಪಿಸಿ ಪೂಜೆ!

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಮೇ 23; ಇವತ್ತು ನಾವು ಪೂಜಿಸುವ ಬಹಳಷ್ಟು ಮಾರಮ್ಮ ದೇಗುಲಗಳು ಹಿಂದಿನ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡಿದಾಗ ಅವುಗಳ ನಿರ್ನಾಮಕ್ಕಾಗಿ ಜನರೇ ಪ್ರತಿಷ್ಠಾಪಿಸಿ ಪೂಜಿಸಿದ ದೇಗುಲಗಳಾಗಿವೆ.

ಮಾರಮ್ಮ ದೇಗುಲಗಳಿಗೆ ಸಾಂಕ್ರಾಮಿಕ ರೋಗವನ್ನು ನಾಶ ಮಾಡುವ ಶಕ್ತಿಯಿದೆ ಎಂಬ ನಂಬಿಕೆ ಇವತ್ತಿಗೂ ಜನರಲ್ಲಿದೆ. ಹೀಗಾಗಿಯೇ ಪ್ರತಿವರ್ಷ ಮಾರಮ್ಮ ದೇಗುಲಗಳಲ್ಲಿ ವಿಶೇಷ ಪೂಜೆ ಜಾತ್ರೆಗಳನ್ನು ಮಾಡಲಾಗುತ್ತದೆ.

ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ

ಬಹುಶಃ ಇವತ್ತಿನ ಕೊರೊನಾ ಮಹಾಮಾರಿ ಹಿಂದೆಂದೂ ಕಾಣದ ಮಹಾ ಸಾಂಕ್ರಾಮಿಕ ರೋಗವಾಗಿದ್ದು ಇಡೀ ಮನುಕುಲವೇ ನಡಗುವಂತಾಗಿದೆ. ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿಪಡೆದಿರುವ ಈ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಭಾರತದಲ್ಲಿ ಕೊರೊನಾ ರೋಗಿಗಳಿಗೆ ಆಮ್ಲಜನಕವೇ ಸಿಗುತ್ತಿಲ್ಲವೇ?ಭಾರತದಲ್ಲಿ ಕೊರೊನಾ ರೋಗಿಗಳಿಗೆ ಆಮ್ಲಜನಕವೇ ಸಿಗುತ್ತಿಲ್ಲವೇ?

ಒಂದು ಕಡೆ ತಜ್ಞರು ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ಇನ್ನಿಲ್ಲದ ಶ್ರಮಪಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ನಿಯಂತ್ರಣವನ್ನಷ್ಟೆ ಮಾಡಲು ಸಾಧ್ಯವಾಗುತ್ತಿದೆಯಷ್ಟೆ. ಆದರೆ ನಿರ್ನಾಮವಂತು ಸಾಧ್ಯವೇ ಇಲ್ಲ ಎಂಬುದರಲ್ಲಿ ಎರಡು ಮಾತಿಲ್ಲ.

ಕೋವಿಡ್ ವ್ಯಾಕ್ಸಿನ್ ಗೊಂದಲ; ಆರೋಗ್ಯ ಇಲಾಖೆ ಸ್ಪಷ್ಟನೆಕೋವಿಡ್ ವ್ಯಾಕ್ಸಿನ್ ಗೊಂದಲ; ಆರೋಗ್ಯ ಇಲಾಖೆ ಸ್ಪಷ್ಟನೆ

ಕೊರೊನಾ ನಿಯಂತ್ರಣ

ಕೊರೊನಾ ನಿಯಂತ್ರಣ

ಒಂದೆಡೆ ಕೊರೊನಾ ಮಹಾಮಾರಿಯನ್ನು ಮಾಸ್ಕ್ ಧರಿಸುವ ಮೂಲಕ, ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ, ಸ್ಯಾನಿಟೈಸ್ ಬಳಸುವುದರೊಂದಿಗೆ ಅಷ್ಟೇ ಅಲ್ಲದೆ ಲಾಕ್ ಡೌನ್ ಮಾಡಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಕೆಲವರು ಈ ಹಿಂದೆ ಪ್ಲೇಗ್, ದಡಾರ, ಕಾಲಾರ ಮುಂತಾದ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗ ಮಾರಮ್ಮ ದೇವಿಯನ್ನು ಪೂಜಿಸಿದಂತೆ ಇದೀಗ ಕೊರೊನಾ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ಪ್ರಾರ್ಥಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕೊರೊನಾ ದೇವಿ ಪ್ರತಿಷ್ಠಾಪನೆ

ಕೊರೊನಾ ದೇವಿ ಪ್ರತಿಷ್ಠಾಪನೆ

ಈಗಾಗಲೇ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾಮಾಚಿಪುರಿ ಅಧೀನ ಪೀಠದ ವತಿಯಿಂದ ಕೊರೊನಾ ದೇವಿಯನ್ನು ಪ್ರತಿಷ್ಠಾಪಿಸಿ ಅರ್ಚಕರನ್ನು ನೇಮಿಸಿ 48 ದಿನಗಳ ಕಾಲ ವಿಶೇಷ ಪೂಜೆ ಪುನಸ್ಕಾರ ಗಳು ನಡೆಸಿದೆ. ಇದರ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಮಧುವನಹಳ್ಳಿ ಬಳಿಯ ಬೋಳು ಗುಡ್ಡೆಯಲ್ಲಿರುವ ಚಾಮುಂಡಿ ದೇವಾಲಯದಲ್ಲಿ ಕೊರೊನಾ ಮಾರಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳನ್ನು ಆರಂಭಿಸಲಾಗಿದೆ.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ

ಕೊರೊನಾ ಮಾರಮ್ಮನ ಆರಾಧಕಿ ಯಶೋದಮ್ಮ. ಮಧುವನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆಯಾಗಿರುವ ಯಶೋಧಮ್ಮ ಚಾಮುಂಡೇಶ್ವರಿ ಆರಾಧಕಿ. ಈಗ ಮಹಾಮಾರಿ ಕೊರೊನಾ ನಿರ್ನಾಮಕ್ಕಾಗಿ ಕಳೆದ ಕೆಲದಿನಗಳಿಂದ ಕೊರೊನಾ ಮಾರಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಇಲ್ಲಿ ದಿನನಿತ್ಯ ವಿಶೇಷ ಹೋಮ, ಹವನ ನಡೆಸುವುದರೊಂದಿಗೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಇನ್ನು ಕೊರೊನಾ ಮಾರಮ್ಮನ ಮೂರ್ತಿಯನ್ನು ಪ್ರತಿಷ್ಠಾಪನೆ ಕುರಿತಂತೆ ಅವರು ಹೇಳುವುದೇನೆಂದರೆ, "ಒಮ್ಮೆ ಕನಸಿನಲ್ಲಿ ಬಂದ ಚಾಮುಂಡೇಶ್ವರಿಯನ್ನು ಕೊರೋನಾ ಸೋಂಕು ಜಗತ್ತಿನಾದ್ಯಂತ ಹೆಚ್ಚಾಗುತ್ತಿರುವ ಬಗ್ಗೆ ಪ್ರಶ್ನಿಸಿದರಂತೆ. ಆಗ ಭೂಮಿಯಲ್ಲಿರುವ ಮರ ಗಿಡಗಳನ್ನು ಮನುಷ್ಯ ಸರ್ವನಾಶ ಮಾಡುತ್ತಿದ್ದಾನೆ" ಎಂದು ಹೇಳಿದರಂತೆ.

  Karnatakaದಲ್ಲಿ ಈಗ ಎಲ್ಲೆಲ್ಲಿ , ಎಷ್ಟು ಲಸಿಕೆ ಉಳಿದಿದೆ ? | Oneindia Kannada
  ಮರಗಿಡಗಳಲ್ಲಿ ಸಕಲ ದೇವತೆಗಳಿದ್ದಾರೆ!

  ಮರಗಿಡಗಳಲ್ಲಿ ಸಕಲ ದೇವತೆಗಳಿದ್ದಾರೆ!

  "ಮರಗಿಡಗಳಲ್ಲಿ ಸಕಲ ದೇವತೆಗಳು ಅಡಗಿರುತ್ತಾರೆ. ಈ ಮರ ಗಿಡಗಳನ್ನು ಕಡಿಯುತ್ತಿರುವುದರಿಂದ ಅವುಗಳ ಉಸಿರಾಟವನ್ನೇ ಕಿತ್ತುಕೊಂಡಂತಾಗಿದ್ದು, ಅದರ ದೋಷ ಮನುಷ್ಯರನ್ನು ಕೊರೊನಾ ರೂಪದಲ್ಲಿ ಕಾಡುತ್ತಿದ್ದು, ಇದರ ಪ್ರಾಯಶ್ಚಿತಕ್ಕಾಗಿ ಕೊರೋನಾ ಮಾರಮ್ಮನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವಂತೆ ಚಾಮುಂಡೇಶ್ವರಿ ದೇವಿ ತಿಳಿಸಿದಂತೆ ಭಾಸವಾಯಿತು" ಎಂದು ಯಶೋಧಮ್ಮ ಹೇಳುತ್ತಾರೆ.

  ತಾನು ಕಂಡಿದ್ದು ಕನಸ್ಸಾಗಿದ್ದರೂ ಅದರಲ್ಲೇನೋ ಮಹಿಮೆಯಿದೆ ಎಂದರಿತ ಅವರು, ಕೂಡಲೇ ಕೊರೊನಾ ಮಾರಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲು ಆರಂಭಿಸಿದ್ದಾರಂತೆ. ಅವರ ಪ್ರಕಾರ ತಮ್ಮ ಪ್ರಾರ್ಥನೆ ದೇವರ ಕಣ್ಣು ತೆರೆಸುವುದು ಖಚಿತವಾಗಿದ್ದು, ಇನ್ನೆರಡು ತಿಂಗಳಲ್ಲಿ ಕೊರೊನಾ ಸರ್ವನಾಶವಾಗುತ್ತೆ ಎಂಬ ನಂಬಿಕೆ ಅವರದ್ದಾಗಿದೆ.

  English summary
  Corona Devi temple built at Madhuvanahalli, Chamarajanagar. Yeshodamma who built the temple offer special prayer to Corona Devi to contain the spread of COVID 19.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X