ಚಾಮರಾಜನಗರ: ಭಿಕ್ಷುಕಳಿಗೆ ಮಗು ಕೊಟ್ಟ ತಾಯಿ: ಮುಂದೇನಾಯ್ತು ಗೊತ್ತಾ.?
ಚಾಮರಾಜನಗರ, ನವೆಂಬರ್, 16: ಭಿಕ್ಷೆ ಬೇಡುವವಳಿಗೆ ಮಗು ಕೊಟ್ಟ ತಾಯಿಯೊಬ್ಬಳು ಈಗ ಕಂದಮ್ಮನನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ದಕ್ಷಾ (ಎರಡೂವರೆ ವರ್ಷ) ಮಗುವನ್ನು ಅಪರಿಚಿತ ಹೆಂಗಸು ಹೊತ್ತೊಯ್ದಿದ್ದು, ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಿವ ಮಾಹಿತಿ ಲಭ್ಯವಾಗಿದೆ.
ಏನಿದು ತಾಯಿ-ಭಿಕ್ಷುಕಿ ಕಥೆ?: ರಾಮನಗರ ಜಿಲ್ಲೆಯ ಅನಿತಾ (26) ಎಂಬಾಕೆ ಮಾನಸಿಕ ಅಸ್ವಸ್ಥತೆಯಾಗಿದ್ದು, ಈಕೆಗೆ 2.6 ವರ್ಷದ ದಕ್ಷಾ ಎಂಬ ಹೆಣ್ಣು ಮಗುವಿದೆ. ಅನಿತಾ ಆಗಾಗ್ಗೆ ಮನೆ ಬಿಟ್ಟು ಮಹದೇಶ್ವರನ ಬೆಟ್ಟಕ್ಕೆ ಬಂದು 3, 6, 15 ದಿನಗಳು ಇದ್ದು, ವಾಪಾಸ್ ಮನೆಗೆ ಹೋಗುತ್ತಿದ್ದಳು. ಅದೇ ರೀತಿ, ಕಳೆದ ಗುರುವಾರವೂ ಮನೆ ಬಿಟ್ಟು ಮಹದೇಶ್ವರನ ಬೆಟ್ಟಕ್ಕೆ ಮಗುವಿನೊಂದಿಗೆ ಬಂದಿದ್ದಾಳೆ.

ಮಾದಪ್ಪನ ಬೆಟ್ಟದಲ್ಲಿ 30-35 ವರ್ಷದ ಮಹಿಳೆ ಪರಿಚಯವಾಗಿದ್ದು, ಮಗುವನ್ನು ಕೊಡು ಭಿಕ್ಷೆ ಬೇಡಿಕೊಂಡು ಬರುತ್ತೇನೆ ಎಂದು ಕೇಳಿದ್ದಾಳೆ. ಆದರೆ, ಆ ವೇಳೆ ಕೊಟ್ಟಿಲ್ಲ. ಮತ್ತೇ ಶುಕ್ರವಾರವೂ ಕೂಡ ಅವಳೊಟ್ಟಿಗೆ ಚಾಮರಾಜನಗರಕ್ಕೆ ಬಂದಿದ್ದು, ಮಗುವನ್ನು ಕೊಡು ಭಿಕ್ಷೆ ಬೇಡಿಕೊಂಡು ಬರುತ್ತೇನೆ ಎಂದಿದ್ದಾಳೆ.
ಆಗ ಇವಳು ಮಗುವನ್ನು ಕೊಟ್ಟಿದ್ದು, ಮಗುವನ್ನು ಕರೆದೊಯ್ದು ಅಪರಿಚಿತ ಮಹಿಳೆ ಈಗ ಪರಾರಿಯಾಗಿದ್ದಾಳೆ. ಸದ್ಯ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ಧಾರೆ ಎಂದು ತಿಳಿದುಬಂದಿದೆ.
ಬದುಕಿದ್ದವರ ಮರಣ ಪತ್ರ: ಸಾಮಾನ್ಯವಾಗಿ ಮರಣ ಹೊಂದಿದವರ ಮರಣ ಪತ್ರವನ್ನು ಕೊಡಲಾಗುತ್ತಿದೆ. ಆದರೆ ಇದೀಗ ವಿಚಿತ್ರ ಎಂಬಂತೆ ಎದುರಿಗೆ ಕುಳಿತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ಕೊಟ್ಟು ಎಲ್ಲರನ್ನೂ ಹೌಹಾರುವಂತೆ ಮಾಡಿರುವ ಘಟನೆ ಕೊಳ್ಳೇಗಾಲ ನಗರಸಭೆಯಲ್ಲಿ ನಡೆದಿದೆ. ಹಾಗಾದರೆ ಮುಂದಾಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕೊಳ್ಳೇಗಾಲ ನಗರಸಭೆ ಸಿಬ್ಬಂದಿಯ ಎಡವಟ್ಟು ಕಂಡು ದಾಖಲೆಯಲ್ಲಿ ಮೃತಪಟ್ಟು ದೈಹಿಕವಾಗಿ ಬದುಕಿರುವ ವ್ಯಕ್ತಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಏನಿದು ಎಡವಟ್ಟು?: ಕೊಳ್ಳೇಗಾಲದ ಕುರುಬರ ಬೀದಿ ನಿವಾಸಿಯಾದ ಶಂಕರ ಎಂಬವರು, ನಿಧನ ಹೊಂದಿದ ತಮ್ಮ ತಾಯಿ ಪುಟ್ಟಮ್ಮ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಕೊಳ್ಳೇಗಾಲ ನಗರಸಭೆಯ ಜನನ-ಮರಣ ನೋಂದಣಿ ವಿಭಾಗದ ಮಹಾದೇವಸ್ವಾಮಿ ಎಂಬವರು ನಿಧನ ಹೊಂದಿದ ಪುಟ್ಟಮ್ಮ ಬದಲಾಗಿ ಬದುಕಿರುವ ಶಂಕರ್‌ಗೆ ಮರಣ ಪ್ರಮಾಣ ಪತ್ರ ಕೊಟ್ಟು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಳಿ ಆಕ್ರೋಶಗೊಂಡ ಶಂಕರ್ ಆತನ ಮುಂದೆ ಜೀವಂತವಾಗಿ ಕೂತಿದ್ದರೂ, ಅರ್ಜಿಯಲ್ಲಿ ಪುಟ್ಟಮ್ಮ ಎಂದು ಬರೆಯಲಾಗಿತ್ತು. ಆದರೂ ಕರ್ತವ್ಯ ಲೋಪ ಎಸಗಿ ಮರಣ ಪ್ರಮಾಣ ಪತ್ರ ಕೊಟ್ಟಿದ್ದನ್ನು ಕೂಡಲೇ ಸರಿಪಡಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications