ಲೈನ್‌ ಮ್ಯಾನ್‌ ನಿಂದ ಎಂಜಿನಿಯರ್‌ಗೆ ಮಚ್ಚಿನೇಟು; ತೀವ್ರ ಗಾಯ

ಚಾಮರಾಜನಗರ, ಜನವರಿ 28: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿಯ (ಚೆಸ್ಕಾಂ) ಲೈನ್ ಮ್ಯಾನ್ ಒಬ್ಬ ತನ್ನ ಮೇಲಧಿಕಾರಿ ಎಂಜಿನಿಯರ್‌ ಒಬ್ಬರಿಗೆ ಮಚ್ಚಿನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಬದನಗುಪ್ಪೆ ಗ್ರಾಮದಲ್ಲಿ ಬುಧವಾರ ನಡಿದಿದೆ.

ಬದನಗುಪ್ಪೆ ಚೆಸ್ಕಾಂ ವಲಯ ಕಚೇರಿ ಬಳಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಲೈನ್‌ ಮ್ಯಾನ್‌ ಗೆ ಕರ್ತವ್ಯ ನೀಡುವ ವಿಚಾರದಲ್ಲಿ ಜೂನಿಯರ್‌ ಎಂಜಿನಿಯರ್‌ ಚಂದ್ರ ನಾಯಕ್‌ ಮತ್ತು ಲೈನ್‌ ಮ್ಯಾನ್‌ ಮಹದೇವ ಸ್ವಾಮಿ ನಡುವೆ ಮಾತಿಗೆ ಮಾತು ಬೆಳೆದಿತ್ತು.

ಇದೇ ವಿಷಯವಾಗಿ ಕೂಗಾಡಿದ್ದ ಮಹದೇವಸ್ವಾಮಿ ಆಕ್ರೋಶದಿಂದ ಮಚ್ಚು ತಂದು ಜೆಇ ಚಂದ್ರ ನಾಯಕ್ ಅವರಿಗೆ ಮುಖ, ತಲೆ ಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

Chamarajanagar: Lineman Attacks Engineer With Sword, Severe Injury

ಜೆಇ ಚಂದ್ರ ನಾಯಕ್ ಅವರಿಗೆ ಬಲವಾಗಿ ಏಟು ಬಿದ್ದಿದ್ದು, ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಲೈನ್ ಮನ್ ಮಹಾದೇವಸ್ವಾಮಿಯನ್ನು ಪೊಲೀಸರು ಬಂಧಿಸಿದ್ದು, ಈತ ರಾಮಸಮುದ್ರ ನಿವಾಸಿ ಎಂದು ತಿಳಿದು ಬಂದಿದೆ.

ಚಾಮರಾಜನಗರ ತಾಲ್ಲೂಕಿನ ಬದನಗುಪ್ಪೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+