ಸಿ.ಪಿ.ವೈ ಬಾವ ನಾಪತ್ತೆ ಕೇಸ್; ಹನೂರಿನ ರಾಮಾಪುರದಲ್ಲಿ ಕಾರು ಪತ್ತೆ
ಚಾಮರಾಜನಗರ, ಡಿಸೆಂಬರ್, 04: ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆ ಗ್ರಾಮದ ತೋಟದ ಮನೆಯಿಂದ ನಾಪತ್ತೆಯಾಗಿದ್ದ ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಅವರ ಬಾವ ಅವರ ಕಾರು ಹನೂರು ತಾಲೂಕಿನ ರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಪತ್ತೆಯಾಗಿದೆ.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಬಾವ ಚಕ್ಕರೆ ಗ್ರಾಮದ ಮಹದೇವಯ್ಯ ಎಂಬುವರು ಮೂರು ದಿನಗಳ ಹಿಂದೆ ಬಿಳಿ ಬಣ್ಣದ ಬ್ರಿಜಾ ಕಾರು ಸಮೇತ (ka-42 N0012) ಕಾಣೆಯಾಗಿದ್ದರು. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶನಿವಾರ ಬೆಳಗ್ಗೆ ಮೊಬೈಲ್ ಟವರ್ ಲೊಕೇಶನ್‌ನಲ್ಲಿ ಪರಿಶೀಲನೆ ನಡೆಸಿದಾಗ ಮಲೆಮಾದೇಶ್ವರ ಬೆಟ್ಟದ ಸುತ್ತಮುತ್ತಲು ಇರುವುದಾಗಿ ತಿಳಿದು ಬಂದಿತ್ತು. ಇದೀಗ ರಾಮಾಪುರ ಪೊಲೀಸ್ ಠಾಣೆ ಸಮೀಪದ ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಅವರು ಬಳಸುತ್ತಿದ್ದ ಕಾರು ಪತ್ತೆಯಾಗಿದೆ.

ಈಗಾಗಲೇ ರಾಮಾಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಕೇವಲ ಕಾರು ಮಾತ್ರ ಆಸ್ಪತ್ರೆಯ ಮುಂಭಾಗ ನಿಂತಿದೆ. ಈ ವಿಚಾರವನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಚನ್ನಪಟ್ಟಣ ಪೊಲೀಸರು ಕೂಡ ಈಗ ಸ್ಥಳಕ್ಕೆ ಆಗಮಿಸಿದ್ದಾರೆ.












Click it and Unblock the Notifications