ಬಾವನ ಕಾರು ಪತ್ತೆಯಾದ ಸ್ಥಳಕ್ಕೆ ಸಿಪಿ ಯೋಗೇಶ್ವರ್ ಭೇಟಿ: ಕಾರಿನ ಗ್ಲಾಸ್ ಚೂರು, ರಕ್ತದ ಕಲೆಗಳು ಪತ್ತೆ!?
ಚಾಮರಾಜನಗರ, ಡಿಸೆಂಬರ್, 04: ತೋಟದ ಮನೆಯಿಂದ ಕಾಣೆಯಾಗಿರಯವ ಬಾವ ಮಹಾದೇವಯ್ಯ ಕಾರು ಪತ್ತೆಯಾದ ಮಾಹಿತಿ ತಿಳಿದು ಹನೂರು ತಾಲೂಕಿನ ರಾಮಾಪುರಕ್ಕೆ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ಅವರು ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಭಾನುವಾರ ತಡರಾತ್ರಿ ಮಹಾದೇವಯ್ಯ ಅವರು ಬಳಸುತ್ತಿದ್ದ ಕಾರು ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪತ್ತೆಯಾಗಿದ್ದು, ಸ್ಥಳಕ್ಕೆ ಸಿ.ಪಿ.ಯೋಗೇಶ್ವರ್ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಚನ್ನಪಟ್ಟಣ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು, ಬೆರಳಚ್ಚು ತಜ್ಞರು ಕೂಡ ಕಾರನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ವೇಳೆ ಕಾರಿನ ಗಾಜು ಒಡೆದಿದ್ದು, ರಕ್ತದ ಕಲೆಗಳು ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹಾದೇವಯ್ಯ 3 ದಿನಗಳ ಹಿಂದೆ ಕಾಣೆಯಾಗಿದ್ದರು. ಈ ನಾಪತ್ತೆ ಪ್ರಕರಣ ಕಿಡ್ನಾಪ್ ಎಂಬ ತಿರುವು ಪಡೆದಿದೆ. ಕಾರು ಮಾತ್ರ ಪತ್ತೆಯಾಗಿದ್ದು, ಮಹಾದೇವಯ್ಯ ಅವರ ಸುಳಿವು ಇನ್ನು ಪತ್ತೆಯಾಗಿಲ್ಲ ನ್ನುವ ಮಾಹಿತಿ ಲಭ್ಯವಾಗಿದೆ.
ಕೀಳುಮಟ್ಟದ ಪದಗಳಿಂದ ನಿಂದಿಸಿದ ಭವಾನಿ
ಮೈಸೂರು, ಡಿಸೆಂಬರ್, 04: ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕಾರಿಗೆ ಬೈಕ್ ಡಿಕ್ಕಿಯಾಗಿದ್ದು, ಈ ವೇಳೆ ಭವಾನಿ ರೇವಣ್ಣ ಬೈಕ್ ಸವಾರನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮದ ಬಳಿ ನಡೆದಿದೆ.
ಬೈಕ್ ಸವಾರ ಶಿವಣ್ಣ ಎಂಬಾತ ಭವಾನಿ ರೇವಣ್ಣ ಅವರ KA-03-NK-5 ನಂಬರ್‌ನ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ರೋಷವೇಷಗೊಂಡ ಭವಾನಿ ರೇವಣ್ಣ ಅವರು, ಬೋರ್ಡು ಗೀರ್ಡು ಏನು ಎಲ್ಲಾ ಡ್ಯಾಮೇಜ್ ಆಗಿದೆ. ಎಲ್ಲಿಗೆ ನುಗ್ಗುಸ್ತಿಯಾ ಮಧ್ಯದಲ್ಲಿ, ತೆಗೆದು ಸುಟ್ಟು ಹಾಕ್ರೋ ಈ ಬೇವರ್ಸಿ ಸೂಳೆಮಗನ ಗಾಡಿನಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ನಡೆದಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಭವಾನಿ ರೇವಣ್ಣ ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ರಾಂಪುರ ಗ್ರಾಮದ ಗೇಟ್‌ನಲ್ಲಿ ಈ ಘಟನೆ ನಡೆಸಿದೆ. ಅಂತಹ ಅರ್ಜೆಂಟ್ ಏನಿತ್ತು? ಗಾಡಿಗೆ ಎಷ್ಟು ಡ್ಯಾಮೇಜ್ ಆಗಿದೆ, ರೆಡಿ ಮಾಡಿಸುವುದು ಹೇಗೆ? ಎಂದು ಕೇಳುವ ಮೂಲಕ ಅವಾಜ್ ಹಾಕಿದ್ದಾರೆ.
ಇದೇ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯರನ್ನು 1.50 ಕೋಟಿ ಕಾರ್ ಇದು, 50 ಲಕ್ಷ ರೂಪಾಯಿ ರಿಪೇರಿ ಮಾಡಿಸೋದಕ್ಕೇ ಕೊಡ್ತೀರಾ? ಹಣ ಕೊಡಂಗಿದ್ರೆ ನ್ಯಾಯದ ಬಗ್ಗೆ ಮಾತನಾಡುವುದಕ್ಕೆ ಬನ್ನಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಬೈಕ್ ಸವಾರನ ಮೊಬೈಲ್ ಫೋನ್ ಕಸಿದುಕೊಂಡು, ಗಾಡಿ ಸೀಜ್ ಮಾಡು. ಸಾಲಿಗ್ರಾಮ ಎಸ್‌ಐ ಬರೋಕೆ ಹೇಳಿ ಎಂದು ಸಹಾಯಕರಿಗೆ ತಿಳಿಸಿರುವ ವಿಡಿಯಯೋ ಭಾರೀ ವೈರಲ್ ಆಗಿದೆ.
ಸವಾರ ಹಾಗೂ ಜೊತೆಗಿದ್ದವರನ್ನು ಕಾರ್ ಹಾಗೂ ದ್ವಿಚಕ್ರವಾಹನದ ಬಳಿ ನಿಲ್ಲಿಸಿ ತಮ್ಮ ಮೊಬೈಲ್ ಫೋನ್‌ನಲ್ಲಿ ಫೋಟೋ ತೆಗೆದುಕೊಂಡಿದ್ದಾರೆ. ಇನ್ನು ಸಿಪಿಐ ಜಿ.ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಬೈಕ್ ಸವಾರ ತಂದ್ರೆಕೊಪ್ಪಲು ಗ್ರಾಮದ ಶಿವಣ್ಣ ಅವರ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications