ಪಾಕ್ ಪರ ಘೋಷಣೆ ಹಿಂದೆ ಬಿಜೆಪಿ, ಆರ್‌ಎಸ್‌ಎಸ್ ಕೈವಾಡ: ಹೀಗೆ ಆರೋಪ ಮಾಡಿದ್ಯಾರು?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಫೆಬ್ರವರಿ, 28: ನೂತನ ರಾಜ್ಯಸಭಾ ಸದಸ್ಯರ ವಿಜಯೋತ್ಸವದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿರುವವರು ಬಿಜೆಪಿ ಆರ್.ಎಸ್.ಎಸ್‌ನಿಂದ ತರಬೇತಿ ಪಡೆದವರೇ ಆಗಿದ್ದಾರೆ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಕೃಷ್ಣಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಂಡ್ಯದಲ್ಲಿ ನಡೆದ ಹನುಮಧ್ವಜ ವಿವಾದದ ವೇಳೆ ಕೂಡ ಆರ್.ಎಸ್.ಎಸ್ ಬಿಜೆಪಿಯ ಟ್ರೈನ್ಡ್ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಕೋಮು ಗಲಭೆ ಸೃಷ್ಟಿಸಲು ಮುಂದಾಗಿದ್ದರು ಎಂದರು.

ಇತ್ತೀಚೆಗೆ ನಡೆದ ವಿಧಾನಸಭೆ, ವಿಧಾನಪರಿಷತ್, ರಾಜ್ಯಸಭಾ ಚುನಾವಣೆಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿದೆ. ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಒಬ್ಬ ಶಾಸಕ ಕ್ರಾಸ್ ವೋಟಿಂಗ್ ಮಾಡಿದ್ದು, ಮತ್ತೊಬ್ಬ ಶಾಸಕ ಮತದಾನದಿಂದ ದೂರ ಉಳಿದಿದ್ದಾರೆ. ಈ ಮುಖಭಂಗವನ್ನು ಮುಚ್ಚಿಟ್ಟುಕೊಳ್ಳಲು ಪಾಕ್ ಪರ ಘೋಷಣೆ ಹಾಗೂ ಹೋರಾಟದ ಹುನ್ನಾರ ರೂಪಿಸಿರುವ ಗುಮಾನಿ ಇದೆ ಎಂದರು.
ಘೋಷಣೆ ಕೂಗಿಸಿ ಕೋಮುಗಲಭೆ ಸೃಷ್ಟಿಸುವ ಮೂಲಕ ದೇಶದಲ್ಲಿ ಅರಾಜಕತೆ ಉಂಟು ಮಾಡಲು ಮುಂದಾಗಿದ್ದಾರೆ. ಸರ್ಕಾರ ನಿನ್ನೆ ಘೋಷಣೆ ಕೂಗಲಾದ ವೀಡಿಯೋ ಅಸಲಿಯತ್ತು ಪರೀಕ್ಷೆಗೆ ಕಳುಹಿಸಿದ್ದು, ಎಫ್.ಎಸ್.ಎಲ್ ವರದಿ ಬರುವ ಮೊದಲೇ ಬಿಜೆಪಿ ನಾಯಕರು ಸದನದ ಹೊಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆಸುತ್ತಿರುವುದರ ಹಿಂದೆ ಹುನ್ನಾರ ಅಡಗಿದೆ ಎಂದರು.
ಹೀಗಾಗಿ ರಾಜ್ಯ ಸರ್ಕಾರ ನಿನ್ನೆ ನಡೆದ ಪ್ರಕರಣದ ಜೊತೆಗೆ ಮಂಡ್ಯ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣಗಳನ್ನು ವಿಶೇಷ ತನಿಖೆಗೆ ಒಳಪಡಿಸಬೇಕು. ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು. ಇನ್ನು ಪಾಕ್ ಪರ ಘೋಷಣೆ ಕೂಗುವವ ಮೂರ್ಖರು ಕರ್ನಾಟಕದಲ್ಲಿಲ್ಲ ಎಂದರು.
ಒಂದು ವೇಳೆ ಪಾಕ್ ಪರ ಒಲವು ಇಟ್ಟುಕೊಂಡಿದ್ದವರು ಇದ್ದರೇ ಅವರನ್ನು ಪಾಕಿಸ್ತಾನಕ್ಕೇ ಕಳುಹಿಸಲಿ. ಆ ದೇಶಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಕಾಯ್ದೆ ರೂಪಿಸಬೇಕು. ಜನರು ಕೋಮು ಗಲಭೆ ಸೃಷ್ಟಿಸುವವರ ಮಾತಿಗೆ ಮನ್ನಣೆ ನೀಡಬಾರದು ಎಂದು ಮನವಿ ಮಾಡಿದರು.
ಜಗದೀಶ್ ಶೆಟ್ಟರ್ ಫೇಸ್‌ಬುಕ್ ಖಾತೆ ಹ್ಯಾಕ್: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಫೇಸ್ ಬುಕ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಹಾಗಾದರೆ ಕಿಡಿಗೇಡಿಗಳು ಏನೆಲ್ಲ ಸಂದೇಶ ರವಾನೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜಗದೀಶ್ ಶೆಟ್ಟರ್ ಅವರ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಹಣಕಾಸು ವ್ಯವಹಾರದ ಸಂದೇಶ ರವಾನೆ ಮಾಡಿದ್ದಾರೆ. "ಖಾತೆಗೆ 7,50,000 ಲಕ್ಷ ಹಣ ಬಂದಿದ್ದು, ನಾನು ಮಾಡಿದ ವ್ಯವಹಾರದಲ್ಲಿ ಆರಂಭದಲ್ಲಿಯೇ ಲಾಭ ಬಂದಿದೆ. ನೀವು ಸಹ ವ್ಯವಹಾರ ನಡೆಸಿ ಲಾಭ ಮಾಡಿಕೊಳ್ಳಿ," ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನು ಕ್ರಿಸ್ಟಿನಾ ಪನಾಟೆ ಎಂಬುವವರ ಸಲಹೆಯನ್ನೂ ಪಡೆಯಬಹುದು ಎಂದು ಬರೆಯಲಾಗಿದೆ. ಎಫ್‌ಬಿ ಖಾತೆ ಹ್ಯಾಕ್ ಆಗಿರುವ ಬಗ್ಗೆ ಪುತ್ರ ಸಂಕಲ್ಪ ಶೆಟ್ಟರ್ ಮಾಹಿತಿ ನೀಡಿದ್ದು, ಇದನ್ನು ನೋಡಿ ಯಾರೂ ಹಣ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications