ಕರ್ನಾಟಕದಲ್ಲಿ ಬಿರ್ಲಾ ಪೇಂಟ್‌ನ ನಾಲ್ಕನೆ ಫ್ಯಾಕ್ಟರಿ ಆರಂಭ; ಹೂಡಿಕೆ ಎಷ್ಟು ಹಾಗೂ ಕನ್ನಡಿಗರಿಗೇನು ಲಾಭ?
ಚಾಮರಾಜನಗರ, ನವೆಂಬರ್, 20: ಪೇಯಿಂಟ್ ಉದ್ಯಮದಲ್ಲಿ 10,000 ಕೋಟಿ ರೂಪಾಯಿ ಹೂಡಿಕೆ ಮಾಡಿರುವ ಅದಿತ್ಯ ಬಿರ್ಲಾ ಗ್ರೂಪ್‌ನ ಓಪಸ್ ಪೇಯಿಂಟ್‌ನ ನಾಲ್ಕನೇ ಕಾರ್ಖಾನೆ ಚಾಮರಾಜನಗರದಲ್ಲಿ ಕಾರ್ಯಾರಂಭ ಮಾಡಿದೆ. ಹಾಗಾದರೆ ಇದು ಎಷ್ಟು ಹೆಕ್ಟೇರ್‌ನಲ್ಲಿದೆ ಹಾಗೂ ಇದರಿಂದ ರಾಜ್ಯಕ್ಕೆ ಏನೆಲ್ಲ ಉಪಯೋಗ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
102 ಹೆಕ್ಟೇರ್ ವಿಶಾಲ ಪ್ರದೇಶದಲ್ಲಿ ನೂತನ ತಂತ್ರಜ್ಞಾನದಿಂದ ಸ್ಮಾರ್ಟ್ ಕಾರ್ಖಾನೆ ನಿರ್ಮಾಣ ಮಾಡಿಲಾಗಿದ್ದು, ಇಂದಿನಿಂದ ಉತ್ಪಾದನೆ ಆರಂಭ ಆಗಿದೆ. ಸಿಮೆಂಟ್, ವೈಟ್ ಸಿಮೆಂಟ್ ಬಳಿಕ ಪೇಂಟ್ ಕ್ಷೇತ್ರಕ್ಕೆ 2021ರಲ್ಲಿ ಕಾಲಿಟ್ಟ ಆದಿತ್ಯ ಬಿರ್ಲಾ ಸಂಸ್ಥೆಯು ದೇಶದ ನಾಲ್ಕು ದಿಕ್ಕುಗಳಲ್ಲೂ ಒಟ್ಟು 6 ಕಾರ್ಖಾನೆ ಆರಂಭಿಸಲಿದೆ. ಇವುಗಳಲ್ಲಿ ದಕ್ಷಿಣ ಭಾರತದಲ್ಲಿ ಚೆನ್ನೈ ಮತ್ತು ಕರ್ನಾಟಕವಿದ್ದ, ಚಾಮರಾಜನಗರದಲ್ಲಿ ನಾಲ್ಕನೇ ಕಾರ್ಖಾನೆ ಕಾರ್ಯಾರಂಭ ಮಾಡಿದೆ.

ಸಾವಿರಾರು ಮಂದಿಗೆ ಉದ್ಯೋಗ: ಪಾಣಿಪತ್, ಲೂದಿಯಾನ, ಚೆನ್ನೈ ಬಳಿಕ ಚಾಮರಾಜನಗರದಲ್ಲಿ ಕಾರ್ಖಾನೆ ಆರಂಭಗೊಂಡಿದ್ದು, ಪ್ರತ್ಯಕ್ಷವಾಗಿ 500ಕ್ಕೂ ಅಧಿಕ ಮಂದಿಗೆ ಮತ್ತು ಪರೋಕ್ಷವಾಗಿ ಸಾವಿರಾರು ಮಂದಿಗೆ ಉದ್ಯೋಗ ಸಿಕ್ಕಂತಾಗಲಿದೆ ಎಂದು ಕಾರ್ಖನೆ ಮೂಗಳು ತಿಳಿಸಿವೆ. ಕಾರ್ಖಾನೆ ಕಾರ್ಯಾರಂಭದ ಬಗ್ಗೆ ಬಿರ್ಲಾ ಓಪಸ್ ಪೇಯಿಂಟ್ಸ್‌ನ ಬಿಸಿನೆಸ್ ಹೆಡ್ ಹಿಮಾಂಶು ಕಂನಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ?: "ಒಪಸ್ ಪೇಯಿಂಟ್ ಬೃಹತ್ ಕಾರ್ಖಾನೆ ಆಗಿದ್ದು, 230 ಮಿಲಿಯನ್ ಲೀಟರ್ ಪೇಯಿಂಟ್ ಅನ್ನು ದೇಶಾದ್ಯಂತ ಸರಬರಾಜು ಮಾಡಲಿದ್ದು, ಎನಾಮೆಲ್ ಸೇರಿದಂತೆ ಎರಡು ವಿಭಿನ್ನ ಪೇಯಿಂಟ್‌ಗಳು ವಿಶೇಷವಾಗಿ ಚಾಮರಾಜನಗರದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಜೀರೋ ಲಿಕ್ವಿಡ್ ಡಿಸ್ಚಾರ್ಚ್ ಇರಲಿದ್ದು, ಸುಧಾರಿತ ತಂತ್ರಜ್ಞಾನ ಬಳಸಿದ್ದೇವೆ. ಸ್ಥಳೀಯರಿಗೂ ಉದ್ಯೋಗ ಕೊಟ್ಟಿದ್ದು. ಶೇಕಡ 70ರಷ್ಟು ಕನ್ನಡಿಗರು ಉದ್ಯೋಗ ಹೊಂದಿದ್ದಾರೆ," ಎಂದರು.
ಮತದಾನ ಕೇಂದ್ರಗಳ ಭೇಟಿ ಪರಿಶೀಲನೆ: ಜಾರ್ಖಂಡ್ 38 ವಿಧಾನಸಭಾ ಸ್ಥಾನಗಳಿಗೆ ಇಂದು ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಈ ಹಿನ್ನೆಲೆ ಜೆಎಂಎಂ ಅಭ್ಯರ್ಥಿ ಹಾಗೂ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಗಿರಿದಿಹ್‌ನಲ್ಲಿ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications