ಬಿಜೆಪಿ, ಜೆಡಿಎಸ್‌ನವರು ಹಣ ಕೊಟ್ಟರೆ ತೆಗೆದೊಕೊಳ್ಳಿ, ವೋಟ್‌ ಮಾತ್ರ ಕಾಂಗ್ರೆಸ್‌ಗೆ ಹಾಕಿ: ಜನರಿಗೆ ಡಿ.ಕೆ. ಶಿವಕುಮಾರ್‌ ಮನವಿ

ಜೆಡಿಎಸ್‌, ಬಿಜೆಪಿ ಅಥವಾ ಯಾವುದೇ ಪಕ್ಷದವರು ಹಣ ಕೊಟ್ಟರೂ ತೆಗೆದುಕೊಳ್ಳಿ. ವೋಟ್‌ ಮಾತ್ರ ಕಾಂಗ್ರೆಸ್‌ಗೆ ಹಾಕಿ ಎಂದು ಡಿ.ಕೆ. ಶಿವಕುಮಾರ್ ಹನೂರಿನ ಜನರ ಬಳಿ ಮನವಿ ಮಾಡಿಕೊಂಡು.

ಚಾಮರಾಜನಗರ, ಫೆಬ್ರವರಿ, 21: ಸರ್ಕಾರ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್, 2 ಸಾವಿರ ರೂ‌ಪಾಯಿ ಹಣ ನೀಡುವುದಾಗಿ ಕಾಂಗ್ರೆಸ್‌ ಘೋಷಣೆ ಮಾಡಿತ್ತು. ಇದೀಗ ಮತ್ತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನಮ್ಮ ಕಾರ್ಯಕರ್ತರಿಗೆ ಟಿವಿ ಉಡುಗೊರೆ ಕೊಡುವುದಾಗಿ ಘೋಷಣೆ ಮಾಡಿ ಗಮನ ಸೆಳೆದಿದ್ದಾರೆ. ಹಾಗೆಯೇ ಯಾವುದೇ ಪಕ್ಷದವರು ಹಣ ಕೊಟ್ಟರೂ ತೆಗೆದುಕೊಳ್ಳಿ. ವೋಟ್‌ ಮಾತ್ರ ಕಾಂಗ್ರೆಸ್‌ಗೆ ಹಾಕಿ ಎಂದು ಜನರಿಗೆ ಮನವಿ ಮಾಡಿದರು.

ಹನೂರಿನಲ್ಲಿ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿ, ಕಾಂಗ್ರೆಸ್‌ನ ವಚನವಾದ ಉಚಿತ ವಿದ್ಯುತ್, 2 ಸಾವಿರ ರೂ. ಹಣ, 10 ಕೆ.ಜಿ. ಉಚಿತ ಅಕ್ಕಿ ಗ್ಯಾರಂಟಿ ಚೆಕ್ ಅನ್ನು ಪ್ರತಿ ಮನೆ ಬಾಗಿಲಿಗೆ ತಲುಪಿಸಬೇಕು. ತಾಲೂಕಿನಲ್ಲಿ ಅತಿ ಹೆಚ್ಚು ರಿಜಿಸ್ಟರ್ ಮಾಡಿದ 10 ಮಂದಿಗೆ ಬೊಂಬಾಟ್ ಟಿವಿ ಗಿಫ್ಟ್ ಮಾಡುತ್ತೇನೆ ಎಂದು ಘೋಷಿಸಿದ್ದಾರೆ.

ಪಕ್ಷ ಯಾವುದೇ ಇರಲಿ, ಎಲ್ಲರ ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್ ಪ್ರಣಾಳಿಕೆಯನ್ನು ತಿಳಿಸಬೇಕು. ಪ್ರತಿ ಗ್ರಾಮ ಪಂಚಾಯತ್‌ನಲ್ಲಿ 10 ಮಂದಿ ಕಾರ್ಯಕರ್ತರಿಗೆ ನಾನು ಟಿವಿ ಕೊಡುತ್ತೇನೆ.

Assembly election 2023: Vote for Congress: D.K.Sivakumar appealed to people

ವೋಟ್‌ ಮಾತ್ರ ಕಾಂಗ್ರೆಸ್‌ಗೆ ಹಾಕಿ

ಹೊರಗಿನಿಂದ ಬಂದ ಕೆಲ ಕ್ಷೇತ್ರದ ಜನರಿಗೆ ಹಣ ಮತ್ತಿತ್ತರ ಆಮೀಷ ತೋರಿಸುತ್ತಿದ್ದಾರೆ ಎಂದು ಶಾಸಕ ನರೇಂದ್ರ ಹೇಳಿದ್ದಾರೆ. ನಾನು ನಿಮಗೆ ಹೇಳುವುದು ಇಷ್ಟೇ, ಬಿಜೆಪಿಯವರಾಗಲಿ, ಜೆಡಿಎಸ್‌ನವರಾಗಲಿ ದುಡ್ಡು ಕೊಟ್ಟರೇ ತಗೊಳಿ. ಆದರೆ ವೋಟ್‌ ಮಾತ್ರ ಕಾಂಗ್ರೆಸ್‌ಗೆ ಹಾಕಿ ಎಂದು ಜನರಿಗೆ ಕರೆ ಕೊಟ್ಟರು.

ಈಗಾಗಲೇ 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ 2,000 ಸಾವಿರ ರೂ‌. ಹಣ ಘೋಷಿಸಿದ್ದು, 10 ಕೆ.ಜಿ. ಉಚಿತ ಅಕ್ಕಿಯನ್ನು ಅಧಿಕೃತವಾಗಿ ಘೋಷಿಸುತ್ತೇವೆ. ನಾವು ಏನದಾರೂ ಕೊಟ್ಟ ಭರವಸೆಯನ್ನು ಈಡೇರಿಸದಿದ್ದರೇ ಇನ್ಮುಂದೆ ಮತ ಕೇಳಲು ಬರುವುದಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+