ಚಾಮರಾಜನಗರ ಜಿಲ್ಲೆಯಲ್ಲಿ ಅಂಚೆ ಸಂತೆಗೆ ತಪ್ಪದೇ ಬನ್ನಿ!
ಮೈಸೂರು. ಜೂನ್ 15 : ನಂಜನಗೂಡು ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ವತಿಯಿಂದ ಚಾಮರಾಜನಗರ ಜಿಲ್ಲೆಯ ಹರವೆ ಹೋಬಳಿಯ ಮುಕ್ಕಡಹಳ್ಳಿ ಗ್ರಾಮದಲ್ಲಿ 'ಅಂಚೆ ಸಂತೆ'ಯನ್ನು ಜೂನ್ 16 ರಂದು ಹಮ್ಮಿಕೊಳ್ಳಲಾಗಿದೆ.
ಈ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣಾ ಅಂಚೆ ಜೀವಾ ವಿಮೆ ಮತ್ತು ಅಂಚೆ ಜೀವಾ ವಿಮೆ ಮುಂತಾದ ಅಂಚೆ ಯೋಜನೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಸ್ವೀಕರಿಸಲಾಗುವುದು.

ರಂಗಸಮುದ್ರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ನಂಜನಗೂಡು ಅಂಚೆ ವಿಭಾಗದ ಅಂಚೆ ಅಧೀಕ್ಷಕ ಜಿ.ಸಿ. ಶ್ರೀನಿವಾಸ್ ಅವರು ಕೋರಿದ್ದಾರೆ.
ಅಂಚೆ ವಿಭಾಗವು 'ಪಿಕ್ ಪೋಸ್ಟ್' ಎಂಬ ಸೇವೆಯನ್ನು ಇಲಾಖೆ ಆರಂಭಿಸಲಿದೆ. ಇದರ ಅನ್ವಯ ಗ್ರಾಹಕರಿಗೆ ಮನೆ ಅಥವಾ ಕಚೇರಿಗೆ ಅಂಚೆ ಸಾಮಗ್ರಿಗಳನ್ನು ತಲುಪಿಸಲಾಗುತ್ತದೆ. ಗ್ರಾಹಕರು ಸಮೀಪದ ಅಂಚೆ ಕಚೇರಿಗೆ ದೂರವಾಣಿ ಕರೆ ಅಥವಾ ಇಮೇಲ್ ಕಳುಹಿಸಿದರೆ ಈ ಸೇವೆ ದೊರೆಯಲಿದೆ.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುವ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಇಲಾಖೆ 'ಕ್ಯಾಡ್ಸ್' (ಕ್ಯಾಷ್ ಡೆಲಿವರಿ ಎಟ್ ದಿ ಡೋರ್ ಸ್ಟೆಪ್) ಸೇವೆಯನ್ನು ಆರಂಭಿಸಲಿದೆ.












Click it and Unblock the Notifications