Get Updates
Get notified of breaking news, exclusive insights, and must-see stories!

ಯಳಂದೂರಿನ ಅಗರ ಕೆರೆಯೀಗ ಸಮಸ್ಯೆಗಳ ಆಗರ!

ಚಾಮರಾಜನಗರ, ಆಗಸ್ಟ್ 30: ಸುಮಾರು ಹತ್ತು ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದ್ದ ಚಾಮರಾಜ ಜಿಲ್ಲೆಯ ಯಳಂದೂರು ತಾಲೂಕಿನ ಅಗರ ಗ್ರಾಮದ ಕೆರೆಯೊಂದು ಇದೀಗ ಗಿಡಗಂಟಿಗಳಿಂದ ಕೂಡಿ ಅವಸಾನದ ಅಂಚಿಗೆ ತಲುಪುತ್ತಿದ್ದರೂ ಇದರ ಅಭಿವೃದ್ಧಿಗೆ ಮುಂದಾಗದಿರುವುದು ಎದ್ದು ಕಾಣುತ್ತಿದೆ.

ಕೆರೆಗಳ ಹೂಳು ತೆಗೆದು ಅಭಿವೃದ್ಧಿ ಮಾಡದ ಕಾರಣದಿಂದಾಗಿ ಇವತ್ತು ಹಲವಾರು ಕೆರೆಗಳು ತಮ್ಮ ಅಸ್ತಿತ್ವ ಕಳೆದುಕೊಂಡು ಒತ್ತುವರಿಯಾಗಿವೆ. ಹೀಗಿರುವಾಗ ಇರುವ ಕೆರೆಯನ್ನು ಅಭಿವೃದ್ಧಿ ಪಡಿಸದೆ ಗಿಡಗಂಟಿಗಳನ್ನು ಬೆಳೆಯಲು ಬಿಟ್ಟಿರುವುದು ಸ್ಥಳೀಯ ಗ್ರಾಮದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೆರೆ ನೀರು ಬಳಕೆದಾರರ ಸಂಘ ಮಾಡಿಕೊಂಡಿದ್ದರೂ ಈ ಸಂಘದ ಮಾತಿಗೆ ಕಿಮ್ಮತ್ತು ಇಲ್ಲದಾಗಿದೆ.

Agara lake in Chamarajanagar district is in serious risk!

ಅಗರ ಗ್ರಾಮದ ಕೆರೆಯನ್ನು ದುರಸ್ತಿಪಡಿಸಿ ಎಂದು ಶಾಸಕ ಎಸ್.ಜಯಣ್ಣ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಅವರು ಸಭೆ ಸಮಾರಂಭಗಳಲ್ಲಿ ಕೆರೆ ಅಭಿವೃದ್ಧಿಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದಾಗಿ ಭಾಷಣ ಬಿಗಿಯುತ್ತಾರೆ. ಆದರೆ ನಮ್ಮ ಊರಿನ ಕೆರೆಯ ಬಗ್ಗೆ ಯಾವುದೇ ರೀತಿಯ ಕಾಳಜಿ ವಹಿಸಿಲ್ಲ ಎಂದು ಕರ್ನಾಟಕ ರೈತ ಸಂಘದ ಮುಖಂಡ ಹಾಗೂ ಅಗರ ಕೆರೆ ನೀರು ಬಳಕೆದಾರರ ಸಂಘದ ಉಪಾಧ್ಯಕ್ಷ ಕಿನಕಹಳ್ಳಿ ಬಸವಣ್ಣ ದೂರಿದ್ದಾರೆ.

ಅವರು ಹೇಳುವಂತೆ ಅಗರ ಗ್ರಾಮದ ಕೆರೆ 999 ಎಕರೆ ವಿಸ್ತೀರ್ಣ ಹೊಂದಿದ್ದು, ಕೆರೆ ನೀರು ತುಂಬಿದರೆ 10 ರಿಂದ 12 ಸಾವಿರ ಎಕರೆ ಪ್ರದೇಶಕ್ಕೆ ನೀರು ದೊರೆಯಲಿದೆಯಂತೆ. ಕೆರೆಯ ನಾಲ್ಕು ದಿಕ್ಕುಗಳಲ್ಲಿ ಜಮೀನುಗಳಿಗೆ ನೀರು ಪೂರೈಕೆ ಮಾಡುವ ತೂಬುಗಳಿವೆ. ಇನ್ನು ಕೆರೆಯಿಂದ ನೀರು ಪೂರೈಕೆ ಮಾಡುವ ರಾಜ ಕಾಲುವೆಗಳು ಒತ್ತುವರಿಯಾಗಿ ಮುಚ್ಚಿ ಹೋಗಿದೆ. ಕಬಿನಿ ನಾಲೆಯಿಂದ ಇತರೆ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆಯಾದರೂ ಅಗರ ಕೆರೆಗೆ ನೀರು ತುಂಬಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ.

Agara lake in Chamarajanagar district is in serious risk!

ಹೊಮ್ಮ ಗ್ರಾಮದ ಕಬಿನಿ ಪಿಕಪ್ ನಾಲೆಯಿಂದ ಸುವರ್ಣಾವತಿ ನದಿ ಮೂಲಕ ಕಟ್ಟೆಗಣಿಗನೂರು ಗ್ರಾಮದ ಬಳಿ ತಡೆಗೋಡೆ ನಿರ್ಮಿಸಿ ಅಗರ ಕೆರೆಗೆ ನೀರು ಪೂರೈಸುವ ಪಿಕಪ್ ಕಾಲುವೆ ಇದೆ. ಆದರೂ ಕೂಡ ಅಧಿಕಾರಿಗಳು ಮಾತ್ರ ಕಾಲುವೆಗಳನ್ನು ಹೂಳು ತೆಗೆಸಿ ಕೆರೆಗೆ ನೀರು ತುಂಬಿಸುವಲ್ಲಿ ವಿಫಲರಾಗಿರುವುದು ಕಂಡು ಬಂದಿದೆ.

ಅಗರ ಗ್ರಾಮದ ಕೆರೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಾಂಬಳ್ಳಿ ನಂಜುಂಡಸ್ವಾಮಿರವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಮತ್ತು ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿರನ್ನು ಕರೆದುಕೊಂಡು ಅಗರ ಕೆರೆ ಪರಿಶೀಲನೆ ನಡೆಸಿ ಕೆರೆ ಅಭಿವೃದ್ಧಿಗೆ ಬೇಕಾದ ಅಗತ್ಯ ಅನುದಾನವನ್ನು ಮಂಜೂರಾತಿ ಮಾಡಿ 3.37 ಕೋಟಿ ರೂ ವೆಚ್ಚದಲ್ಲಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಪ್ರಾರಂಭಿಸಲು ಟೆಂಡರ್ ಕರೆಯಲಾಗಿತ್ತು. ಆದರೆ ಆ ವೇಳೆಗೆ ಚುನಾವಣೆ ಬಂದಿದ್ದರಿಂದ ಅದು ನೆನೆಗುದಿಗೆ ಬಿದ್ದಿದೆ. ಪರಿಣಾಮ ಈಗ ಅಗರ ಕೆರೆ ಗಿಡಗಂಟಿ ಬೆಳೆದು ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+