ಸಿದ್ದರಾಮಯ್ಯ ಹುಲಿ, ಡಿ.ಕೆ ಶಿವಕುಮಾರ್ ಸಿಂಹ, ಕಾಂಗ್ರೆಸ್ ಎಲ್ಲರಿಗೂ ತಂದೆ-ತಾಯಿ-ನಟ ಸಾಧುಕೋಕಿಲ
ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಹುಲಿ ಇದ್ದಂತೆ, ಡಿ.ಕೆ.ಶಿವಕುಮಾರ್ ಸಿಂಹ ಇದ್ದಂತೆ ಇವರಿಬ್ಬರು ಇದ್ದ ಮೇಲೆ ಬೇರೆಯವರು ಯಾಕೆ..? ಎಂದು ನಟ ಸಾಧು ಕೋಕಿಲ ಕಾಂಗ್ರೆಸ್ ಪಕ್ಷವನ್ನು ಹೊಗಳಿದ್ದಾರೆ.
ಚಾಮರಾಜನಗರ, ಫೆಬ್ರವರಿ 22: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ಮರಳುಗಾಡಿನಲ್ಲಿದ್ದ ನಮಗೆ ತೊರೆ, ಕೆರೆ, ನದಿ ದಾಟಿಸಿ ಈಗ ಸಮುದ್ರದ ಬಳಿ ಕಾಂಗ್ರೆಸ್ ತಂದು ನಿಲ್ಲಿಸಿದೆ ಎಂದು ನಟ ಸಾಧುಕೋಕಿಲ ಕಾಂಗ್ರೆಸ್ ಪಕ್ಷವನ್ನು ಹೊಗಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ನಟ ಸಾಧುಕೋಕಿಲ, ಈಗ ನಾವು ದೊಡ್ಡ-ದೊಡ್ಡ ಬಿಲ್ಡಿಂಗ್, ಐಷರಾಮಿ ಜೀವನ, ಫ್ಲೈ ಓವರ್ ನೋಡುತ್ತಿದ್ದೇವೆ, ಆದರೆ ಸ್ವಾತಂತ್ರ್ಯ ಬಂದ ಬಳಿಕ ಇಷ್ಟು ದಿನ ನಮ್ಮನ್ನು ಕರೆತಂದಿದ್ದು ಕಾಂಗ್ರೆಸ್, ಕಾಂಗ್ರೆಸ್‌ಗೆ ಮೋಸ ಮಾಡಿದರೆ ತಂದೆ-ತಾಯಿಗೆ ಮೋಸ ಮಾಡಿದಂತೆ, ಕಾಂಗ್ರೆಸ್‌ಗೂ ಮತ್ತು ಜನರಿಗೂ ಇರುವ ಸಂಬಂಧ ಕೇವಲ ರಾಜಕೀಯದ್ದಲ್ಲ, ಹೃದಯದ ಸಂಬಂಧ ಎಂದರು.
ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಹುಲಿ ಇದ್ದಂತೆ, ಡಿ.ಕೆ.ಶಿವಕುಮಾರ್ ಸಿಂಹ ಇದ್ದಂತೆ ಇವರಿಬ್ಬರು ಇದ್ದ ಮೇಲೆ ಬೇರೆಯವರು ಯಾಕೆ..? ಕಾಂಗ್ರೆಸ್‌ನವರಿಗೆ ಮತ ಹಾಕಿ ಎಂದು ಬೇಡಬೇಕಾ? ಕಾಂಗ್ರೆಸ್‌ಗೆ ಮತ ಹಾಕುವುದು ನಮ್ಮ ಕರ್ತವ್ಯ, ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ತಂದೆ-ತಾಯಿಗೆ ಮೋಸ ಮಾಡಿದಂತೆ ಎಂದು ಹೇಳಿದರು.

ಗುಂಡ್ಲುಪೇಟೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ, ಗಣೇಶ್ ಪ್ರಸಾದ್ ಅವರ ಕೈಯನ್ನು ಈ ಬಾರಿ ಬಲಪಡಿಸಿ, ಅತಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಿ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಭ್ರಷ್ಟ, ದರಿದ್ರ ಬಿಜೆಪಿ ಸರ್ಕಾರ ಹೋಗಲಾಡಿಸಲು ಪ್ರತಿಯೊಬ್ಬ ಮತದಾರನೂ ಕೂಡ ಪ್ರತಿಜ್ಞೆ ಮಾಡಬೇಕು. ಈ ಹಿಂದೆ ನಡೆದ ಉಪ ಚುನಾವಣೆಯನ್ನು ನಾನೊಬ್ಬ ಕಾರ್ಯಕರ್ತನಾಗಿ ಕೆಲಸ ಮಾಡಿ ಗೀತಾ ಮಹದೇವಪ್ರಸಾದ್ ಅವರನ್ನು ಗೆಲ್ಲಿಸಿದ್ದೆವು. ಆ ಚುನಾವಣಾ ಗೆಲುವನ್ನು ನಾವು ಉಳಿಸಿಕೊಳ್ಳಲು ಆಗಲಿಲ್ಲ. ಈಗ ನಿಮ್ಮ ಸಮಸ್ಯೆ, ದುಃಖ ದುಮ್ಮಾನ ಕೇಳಲು ನಾವು ಇಲ್ಲಿಗೆ ಬಂದಿದ್ದು ಕಾಂಗ್ರೆಸ್ ಬಲಪಡಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಇನ್ನು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ನಿರಂಜನಕುಮಾರ್ ಯಾವುದೇ ಶಾಶ್ವತ ಯೋಜನೆ ತಂದಿಲ್ಲ. ಒಂದು ಉದ್ಯೋಗ ನೀಡಿಲ್ಲ. ಆಕ್ಸಿಜನ್ ದುರಂತದಲ್ಲಿ ಯಾರಿಗೂ ಸಹಾಯ ಮಾಡಲಿಲ್ಲ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಗಣೇಶ್ ಪ್ರಸಾದ್ ಗೆಲ್ಲಿಸಬೇಕು ಎಂದು ಕರೆಕೊಟ್ಟರು. ರಾಜ್ಯದಲ್ಲಿ 141 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ನಮ್ಮ ರಿಪೋರ್ಟ್ ಹೇಳುತ್ತಿದೆ, ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications