ಚಾಮರಾಜನಗರ: ಚುಮು ಚುಮು ಚಳಿಯಲ್ಲಿ ಓಡಾಡಿದ ಬೆಟ್ಟದ ಹುಲಿ-ವಿಡಿಯೋ ವೈರಲ್
ಚಾಮರಾಜನಗರ, ನವೆಂಬರ್, 07: ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಣಿಗಳ ಹಾವಳಿ ಮಾಡತ್ತಲೇ ಇರುತ್ತವೆ. ಇನ್ನೂ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಲ್ಲಿಯೂ ಸಖತ್ ಟ್ರೆಂಡ್ ಆಗುತ್ತುವೆ. ಇನ್ನು ಗೋಪಾಲಸ್ವಾಮಿ ಬೆಟ್ಟದಲ್ಲಿ ಮಧ್ಯಾಹ್ನದವರೆಗೂ ದಟ್ಟ ಮಂಜು ತಂಪು ತಂಪು ವಾತಾವರಣ ಕವಿದಿರುತ್ತದೆ. ಇದರ ನಡುವೆಯೇ ಬೆಟ್ಟದಲ್ಲಿ ಹುಲಿರಾಯ ಆಗಾಗ ದರ್ಶನ ನೀಡುತ್ತಿದ್ದು, ಇದರಿಂದ ಪ್ರವಾಸಿಗರು, ಭಕ್ತರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಮುಮುತ್ತಲಿನ ಕಾಡಿನಲ್ಲಿ ಆಗಾಗ ಹುಲಿಯೊಂದು ಕಾಣಿಸಿಕೊಳ್ಳುತ್ತಿದೆ. ಹೀಗೆ ಪ್ರವಾಸಿಗರ ಕಣ್ಣಿಗೆ ಕಾಣಿಸಿಕೊಳ್ಳುವ ಮೂಲಕ ಬೆಟ್ಟದ ಹುಲಿ ಅಂತಲೇ ಕರೆಸಿಕೊಳ್ಳುತ್ತಿವೆ.

ಒಟ್ಟಿನಲ್ಲಿ ದಟ್ಟ ಮಂಜಿನ ಆನಂದ ಅನುಭವಿಸುತ್ತಿದ್ದ ಪ್ರವಾಸಿಗರು ಈಗ ಬೆಟ್ಟದ ಹುಲಿಯನ್ನು ಕಂಡು ಖುಷಿಪಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿದು ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಈ ಮೂಲಕ ಈ ವಿಡಿಯೋಗಳು ಸಖತ್ ಟ್ರೆಂಡ್ ಆಗಿಬಿಟ್ಟಿವೆ.
ರಗಡ್ ಲುಕ್ ಕೊಟ್ಟ ಚಿರತೆ: ಚಿರತೆಯೊಂದು ರಸ್ತೆಬದಿಯೇ ಪ್ರವಾಸಿಗರಿಗೆ ದರ್ಶನ ಕೊಟ್ಟ ಘಟನೆ ಪ್ರಸಿದ್ಧ ಪ್ರವಾಸಿ ತಾಣವಾದ ಬಿಳಿಗಿರಿರಂಗನ ಬೆಟ್ಟದ ರಸ್ತೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ತಮಿಳುನಾಡಿನ ಪ್ರವಾಸಿಗರು ತೆರಳುತ್ತಿದ್ದ ವೇಳೆ ರಸ್ತೆಬದಿಯೇ ಚಿರತೆ ಕಂಡಿದ್ದಾರೆ. ಇನ್ನು, ಕಾರಿನಲ್ಲಿದ್ದವರು ತನ್ನನ್ನು ನೋಡುತ್ತಿದ್ದನ್ನು ಕಂಡ ಚಿರತೆ ನಿಂತು ರಗಡ್ ಲುಕ್ ಕೊಟ್ಟಿದ್ದು, ಈ ದೃಶ್ಯ ಪ್ರವಾಸಿಗೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ.
ಕಾರಿನ ಹಿಂದೆ ಬಸ್ ಬಂದಿದೆ. ಈ ವೇಳೆ ಚಿರತೆಯು ಬಂಡೆಕಲ್ಲಿನ ಮೇಲೆ ನಿಂತು ಜನರನ್ನು ಗುರಾಯಿಸಿದ್ದು, ಈ ವೀಡಿಯೋ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ರಸ್ತೆಗಿಳಿದ ಆನೆ: ಕಾಡಾನೆಯೊಂದು ರಸ್ತೆಗಿಳಿದ ಪರಿಣಾಮ ಹೆದ್ದಾರಿಯ ಎರಡೂ ಬದಿ ವಾಹನಗಳು ನಿಂತಲ್ಲೇ ನಿಂತ ಘಟನೆ ಚಾಮರಾಜನಗರ ಸಮೀಪದ ತಾಳವಾಡಿಯ ಚಿಕ್ಕಳ್ಳಿಯಲ್ಲಿ ನಡೆದಿದೆ. ಆಹಾರ ಅರಸಿ ನಾಡಿನತ್ತ ಬಂದ ಆನೆ ರಸ್ತೆಯಲ್ಲಿ ಓಡಾಡಿದ್ದರಿಂದ ಟ್ರ್ಯಾಕ್ಟರ್, ಕಾರು, ಬೈಕ್ ಸವಾರರು ಗಾಬಾರಿಗೊಂಡು ತಪ್ಪಿಕೊಳ್ಳಲು ಹರಸಹಾಸಪಟ್ಟಿದ್ದಾರೆ.
ಇನ್ನು ಆನೆ ಓಡಾಟದ ದೃಶ್ಯವನ್ನು ಟ್ರ್ಯಾಕ್ಟರ್ ಚಾಲಕ ಸೆರೆ ಹಿಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಜಾಗರೂಕತೆಯಿಂದ ವಾಹನ ಚಲಾಯಿಸಿ, ವನ್ಯಜೀವಿಗಳಿಗೆ ಯಾವುದೇ ಹಣ್ಣುಗಳನ್ನು ಕೊಡಬೇಡಿ ಎಂದು ಅರಣ್ಯ ಇಲಾಖೆ ಸಲಹೆ ನೀಡಿದೆ.












Click it and Unblock the Notifications