ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಆರ್ ಟಿಐ ಕಾರ್ಯಕರ್ತರಿಂದ ಮೋದಿಗೆ ಪತ್ರ

ಚಾಮರಾಜನಗರದ ಆರ್ ಟಿಐ ಕಾರ್ಯಕರ್ತರೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಅಪನಗದೀಕರಣದ ನಂತರ ಆಗಿರುವ ಬದಲಾವಣೆ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ

By ವೀರಭದ್ರಸ್ವಾಮಿ ಎಸ್.
|
Google Oneindia Kannada News

ಚಾಮರಾಜನಗರ, ಡಿಸೆಂಬರ್ 26: ನೋಟು ನಿಷೇಧದ ವಿಚಾರವಾಗಿ ಚಾಮರಾಜನಗರದ ಆರ್ ಟಿಐ ಕಾರ್ಯಕರ್ತರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಅದರ ಒಕ್ಕಣೆ ಹೀಗಿದೆ. "ನೋಟ್ ಅಮಾನ್ಯ ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮೂಲಕ ಆರ್ಥಿಕ ಕ್ರಾಂತಿ ಉಂಟು ಮಾಡಿ, ವ್ಯವಸ್ಥೆಯನ್ನೇ ಕ್ಯಾಶ್ ಲೆಸ್ ಮಾಡುವ ಯೋಜನೆಗೆ ತುಂಬು ಹೃದಯದ ಅಬಿನಂದನೆಗಳು,

"ಇತ್ತೀಚೆಗಷ್ಟೇ ನನ್ನ ಪುಟ್ಟ ಮನವಿ ಪತ್ರದಲ್ಲಿ 5000 ರುಪಾಯಿಗೆ ತೆರಿಗೆ ಪಾವತಿ ಸಂಬಂಧ ಕೇಳಿದಾಗ, ತಾವು ತಿಳಿಸಿರುವಂತೆ 2000 ನಗದುರಹಿತ ಯೋಜನೆಗೆ 2% ತೆರಿಗೆ ಮಾಡಿದ್ದೀರಾ. ಅಷ್ಟೇ ಅಲ್ಲ, ಚಾಮರಾಜನಗರದಲ್ಲಿ ಬಹುತೇಕ ಎಲ್ಲ ಎಟಿಎಮ್ ಗಳು ಬಾಗಿಲು ಹಾಕಿ ಕನಿಷ್ಠ ತುರ್ತು ಸೇವೆಗೂ ಬೇರೆಯವರನ್ನು ಅವಲಂಬಿಸ ಬೇಕಾಗಿರುವುದರಿಂದ ಕನಿಷ್ಠ ಬಹುತೇಕ ಸಾಮಾನ್ಯರು 2 ಲಕ್ಷ ಹಣ ಇಡಲೇಬೇಕಾದ ಸ್ಥಿತಿ ಇದ್ದೇ ಇದೆ.[ಬಾಗಲಕೋಟೆ ಡಿಸಿಸಿ ಬ್ಯಾಂಕಿನಲ್ಲಿ 5ದಿನದಲ್ಲಿ 162 ಕೋಟಿ ಜಮೆ, ತನಿಖೆ]

"ಪರಿಶೀಲಿಸಿ ಅವರಿಗೆ ಹೆಚ್ಚು ತೆರಿಗೆ ಆಗದಂತೆ 5 ಲಕ್ಷದ ವರೆಗೆ ಮಾಡಿ ಎಂದು ಮನವಿ ಮಾಡಿದ್ದೆ. ಆ ಪತ್ರವನ್ನು ಪುರಸ್ಕರಿಸಿ ಈಗ 4 ಲಕ್ಷದವೆರೆಗೆ ತೆರಿಗೆ ರಹಿತ ಮಾಡಲು ಸಿದ್ದತೆ ಮಾಡುತ್ತೀದ್ದೀರಿ ಎಂದು ಭಾವಿಸಿರುತ್ತೇನೆ. ಇದಕ್ಕೂ ಧನ್ಯವಾದಗಳು. ಇನ್ನೂ ಕೆಲವು ಪ್ರಮುಖ ಬೇಡಿಕೆಗಳು ನನ್ನಲ್ಲಿವೆ. ಅದನ್ನು ಪರಿಶೀಲಿಸಿ ಭ್ರಷ್ಟತೆ ತೊಡೆದು ಹಾಕಿ, ಇಡೀ ವ್ಯವಸ್ಥೆಯನ್ನು ಸರಿದೊಗಿಸಲು ಕೋರುತ್ತೇನೆ".

A letter by Chamarajanagar RTI worker to PM Modi

• ನೋಟ್ ಬ್ಯಾನ್ ಮಾಡುವದರಿಂದ ಭ್ರಷ್ಟತೆ ಕಡಿಮೆ ಆಗುತ್ತದೆ ಎಂದರೆ ಅದು ಮಾತ್ರ ಇನ್ನೂ ನಿಂತಿಲ್ಲ. ಇದನ್ನು ತೊಡೆದು ಹಾಕಬೇಕಾದ ಮಾದ್ಯಮದವರು ಪರೋಕ್ಷವಾಗಿ ಸಹಕಾರಕ್ಕೆ ನಿಂತು, ಅವರೂ ಮನೆ ಮೇಲೆ ಮನೆ ಕಟ್ಟುತ್ತಾ ಬಡವರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.[ಡಿಸೆಂಬರ್ 30ರ ನಂತರವೂ ವಿಥ್ ಡ್ರಾ ಮಿತಿ ಮುಂದುವರಿಕೆ?!]

• ಆರ್ಥಿಕ ಕ್ರಾಂತಿ ನೆಪದಲ್ಲಿ ನೋಟ್ ಬ್ಯಾನ್ ಮಾಡಿದರೂ ಪರೋಕ್ಷವಾಗಿ ಬ್ಯಾಂಕ್ ಸಿಬ್ಬಂದಿ ಕಾಳಧನಿಕರಿಗೆ ಕೈ ಜೋಡಿಸಿ ಕೇಕೆ ಹಾಕುತ್ತಿದ್ದಾರೆ. ಅವರಿಗೆ ಕೇವಲ ವರ್ಗಾವಣೆ, ಅಮಾನತು ಶಿಕ್ಷೆ ಸಾಕೇ.? ಸಂಪೂರ್ಣ ವಜಾ ಯಾಕೆ ಮಾಡಬಾರದು ಹಾಗೂ ಜೈಲು ಶಿಕ್ಷೆ ವಿಧಿಸಬಾರದು.

• ಕೆಲವು ಶಿಕ್ಷಣ ಸಂಸ್ಥೆಗಳು, ಸರ್ಕಾರೇತರ ಸಂಘ-ಸಂಸ್ಥೆಗಳು ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಕೊಳ್ಳದೆ ಬಡವರ ಪಾಲಾಗಬೇಕಾಗಿದ್ದ ಕಡ್ಡಾಯ ಶಿಕ್ಷಣ (ಆರ್ ಟಿಇ) ಶ್ರೀಮಂತರಿಗೆ ಮಾರಿ, ಸುಲಿಗೆ ಮಾಡಿ ಶಿಕ್ಷಣ ಕೇವಲ ಮರಿಚೀಕೆಯಾಗುತ್ತಿದೆ. ಇಷ್ಟು ದಿನ ಮಾಡಿದ ಈ ದಂಧೆಗೂ ತಮ್ಮಿಂದ ಕಡಿವಾಣ ಬೀಳಬೇಕಾಗಿದೆ.[ಚೆಕ್ ಬೌನ್ಸ್ ಆದರೆ ಜೈಲೂಟ ಗ್ಯಾರಂಟಿ, ಬರಲಿದೆ ಹೊಸ ನಿಯಮ]

• ಸದ್ಯದಲ್ಲಿಯೇ ತರಲಿರುವ ಬೇನಾಮಿ ಆಸ್ತಿ ಕಾಯ್ದೆ ಸಂಬಂಧ ನಮ್ಮ ದ್ವನಿ ಬಡವರ ಪರವಾಗಿ ಎಂದಿರುವ ನೀವು, ಆರ್ಥಿಕ ಚೈತನ್ಯ ಇಲ್ಲದವರಿಗೆ ನೀಡಬೇಕಾಗಿರುವ ಕನಿಷ್ಠ ಸವಲತ್ತು ನೀಡಬೇಕಾಗಿದೆ.

English summary
A letter to PM Narendra Modi about Demonetisation by RTI worker from Chamarajanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X