ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಗಂಟಲಿನಿಂದ ಮಾತನಾಡುತ್ತಾರೆ, ಹೃದಯದಿಂದ ಅಲ್ಲ: ಸಚಿವ ಸೋಮಣ್ಣ

ಸಿದ್ದರಾಮಯ್ಯನವರು ಹೃದಯದಿಂದ ಮಾತನಾಡುವುದಿಲ್ಲ ಅಂತಾ ಸಚಿವ ವಿ. ಸೋಮಣ್ಣ ಗುಡುಗಿದ್ದೇಕೆ?

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜನವರಿ, 26: ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಟಲಿನಿಂದ ಮಾತನಾಡುತ್ತಾರೆ, ಹೃದಯದಿಂದಲ್ಲ ಎಂದು ಸಚಿವ ವಿ.ಸೋಮಣ್ಣ ಚಾಮರಾಜನಗರದಲ್ಲಿ ವ್ಯಂಗ್ಯವಾಡಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲಿಬಾಬಾ ಮತ್ತು 40 ಕಳ್ಳರು ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿದರು. ನಾನು ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಒಮ್ಮೆ ಶುರುವಾದರೇ ಅದು ಮತ್ತೆಲಿಗೋ ಹೋಗುತ್ತದೆ. ಅವರು ಗಂಟಲಿನಿಂದ ಮಾತನಾಡುತ್ತಿದ್ದಾರೆ, ಹೃದಯದಿಂದಲ್ಲ ಎಂದು ಟಾಂಗ್ ಕೊಟ್ಟರು.

ಸಿದ್ದರಾಮಯ್ಯರನ್ನ ಕಂಡರೇ ಮೋದಿಗೆ ಭಯ: ಕಾಂಗ್ರೆಸ್‌ ಶಾಸಕ ಪುಟ್ಟರಂಗಶೆಟ್ಟಿ ವ್ಯಂಗ್ಯಸಿದ್ದರಾಮಯ್ಯರನ್ನ ಕಂಡರೇ ಮೋದಿಗೆ ಭಯ: ಕಾಂಗ್ರೆಸ್‌ ಶಾಸಕ ಪುಟ್ಟರಂಗಶೆಟ್ಟಿ ವ್ಯಂಗ್ಯ

ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್‌

ಚುನಾವಣೆ ಬರುತ್ತದೆ-ಹೋಗತ್ತದೆ, ಅವರು 70 ವರ್ಷ ಅಧಿಕಾರದಲ್ಲಿದ್ದರು. ನಾವು 5-10 ವರ್ಷದಿಂದ ಅಧಿಕಾರದಲ್ಲಿದ್ದೇವೆ ತಡೆದುಕೊಳ್ಳಿ. ಇನ್ನು ಸೆಸ್ಕ್ ನೌಕರರಿಗೆ ಕೊಡುತ್ತಿದ್ದ ಉಚಿತ ವಿದ್ಯುತ್ ಅನ್ನು ವಾಪಾಸ್ ತೆಗೆದುಕೊಂಡಿದ್ದು ಯಾರು? ಅವರ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ರಾಜಾಸ್ಥಾನದಲ್ಲಿ ಅವರದ್ದೇ ಸರ್ಕಾರ ಇದೆ. ಮೊದಲು ಅಲ್ಲಿ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಿ ಎಂದು ಸವಾಲ್ ಹಾಕಿದರು.

192nd Commemoration of Krantiveer Sangolli Rayanna in Bengaluru

ಚಾಮರಾಜನಗರದಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಚಲಾವಣೆಯಲ್ಲಿರುವ ನಾಣ್ಯ. ರಾಜ್ಯದಲ್ಲಿ ನನಗೇ ಎಂಬ 25-30 ಕ್ಷೇತ್ರಗಳು ಇವೆ. ಬಿಜೆಪಿ ಗೆಲ್ಲಲಾಗಲ್ಲ ಎಂಬ ಕ್ಷೇತ್ರಗಳಲ್ಲಿ ಅತಿಹೆಚ್ಚು ಬಹುಮತದಿಂದ ಬಿಜೆಪಿಯನ್ನು ಗೆಲ್ಲಿಸಿದ್ದೇನೆ. ನನಗೆ ಗೋವಿಂದರಾಜನಗರ ಕ್ಷೇತ್ರ ಇದೆ, ಆದರೆ ಪಕ್ಷ ಎಲ್ಲಿ ಹೇಳುತ್ತದೆಯೋ ಅಲ್ಲಿ ನಿಂತುಕೊಳ್ಳುತ್ತೇನೆ ಎಂದರು.

ಗಮನ ಸೆಳೆದ ಪಥಸಂಚಲನ

ಹಾಗೆಯೇ ಜಿಲ್ಲಾಡಳಿತದ ವತಿಯಿಂದ ನಗರದ ಡಾ.ಬಿ‌.ಆರ್‌.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ 74ನೇ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ‌.ಸೋಮಣ್ಣ ಧ್ವಜಾರೋಹಣ ಮಾಡಿದರು. ಧ್ವಜಾರೋಹಣ ನೆರವೇರಿಸಿದ ಬಳಿಕ ಪೊಲೀಸ್, ಅಬಕಾರಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ತುಕಡಿಗಳು ಆಕರ್ಷಕ ಪಥ ಸಂಚಲನ ನಡೆಸಿ ಗೌರವ ವಂದನೆ ಸಲ್ಲಿಸಿದರು. ಬಳಿಕ, ಗಣರಾಜ್ಯೋತ್ಸವದ ಸಂದೇಶ ಹಂಚಿಕೊಂಡ ಸೋಮಣ್ಣ, ಕರ್ನಾಟಕದ ಪಾಲಿಗೆ ಅಭಿವೃದ್ಧಿಯಲ್ಲಿ ಸುವರ್ಣ ಯುಗ ಆರಂಭಗೊಂಡಿದೆ. ನಮ್ಮ ಸರ್ಕಾರದ ಯೋಜನೆ, ಕಾರ್ಯಕ್ರಮಗಳು ಕರ್ನಾಟಕದ ಚಿತ್ರಣ ಬದಲಿಸಿದೆ ಎಂದರು.

ಗಡಿಜಿಲ್ಲೆ ಅಭಿವೃದ್ಧಿಗೆ ಸದಾ ಸಿದ್ಧ

ಗಡಿಜಿಲ್ಲೆ ಚಾಮರಾಜನಗರ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಬಲಿಷ್ಠ ಭಾರತದ ನಿರ್ಮಾಣದ ಸಂಕಲ್ಪ ತೊಟ್ಟು ದಿನದ 24 ಗಂಟೆ ಪ್ರಜಾ ಸೇವಕನಂತೆ ದುಡಿಯುತ್ತಿರುವ ಪ್ರಧಾನಿ ಮೋದಿ ಕೈ ಬಲಪಡಿಸುವ ಜೊತೆಗೆ ಶಕ್ತಿಶಾಲಿ ಕರ್ನಾಟಕದ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡೋಣ ಎಂದರು. ಇನ್ನು, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೂ ಮುನ್ನ ಚಾಮರಾಜನಗರ ಜಿಲ್ಲಾಡಳಿತ ಭವನ ಆವರಣದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

192nd Commemoration of Krantiveer Sangolli Rayanna in Bengaluru

ರಾತ್ರಿಯೇ ಬಾವುಟ ಕಟ್ಟಿದ "ಕೈ" ಶಾಸಕ

ಚಾಮರಾಜನಗರ ಕಾಂಗ್ರೆಸ್ ಶಾಸಕ ಸಿ. ಪುಟ್ಟರಂಗಶೆಟ್ಟಿ ಕಾರ್ಯಕರ್ತರ ಜೊತೆ ಸೇರಿ ನಗರದ ವಿವಿಧೆಡೆ ಪಕ್ಷದ ಬಾವುಟಗಳನ್ನು ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ. ಶಾಸಕರು ಎಂದರೆ ದುರಹಂಕಾರ ಪ್ರದರ್ಶನ ಮಾಡುತ್ತಾರೆ ಎನ್ನುವ ಮಾತುಗಳನ್ನು ಕೇಳಿದ್ದೇವೆ. ಆದರೆ, ಸಿ. ಪುಟ್ಟರಂಗಶೆಟ್ಟಿ ಮಂಗಳವಾರ ರಾತ್ರಿ 9ರಿಂದ ಮಧ್ಯರಾತ್ರಿ 1ರ ತನಕವೂ ಕಾರ್ಯಕರ್ತರ ಜೊತೆ ಸೇರಿ ನಗರದ ವಿವಿಧೆಡೆ ಬಾವುಟ, ಕಟೌಟ್ ಹಾಕಲು ಸಹಾಯ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಳೆದ ಮೂರು ಬಾರಿಯೂ ಶಾಸಕರಾಗಿ ಆಯ್ಕೆಯಾಗುತ್ತಿರುವ ಸಿ.ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಅವರ ಅನುಯಾಯಿ ಆಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕೆಂದು ಹೇಳಿದ್ದರು‌. ಜೊತೆಗೆ, ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾದರೇ ತಾನು ನಿವೃತ್ತಿ ಆಗುವೆ ಎಂದು ಘೋಷಿಸಿದ್ದರು.

English summary
Siddaramaiah not speaking from heart says Housing and Infrastructure Development department minister v.somanna in Chamarajanagar, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X