Ad ನಿಷೇಧ, 82.3 ಬಿಲಿಯನ್ ಡಾಲರ್ ಕಳೆದುಕೊಂಡ FB
ಬೆಂಗಳೂರು, ಜೂನ್ 28: ಅತ್ಯಂತ ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಜಾಹೀರಾತುಗಳನ್ನು ಅನೇಕ ಕಂಪನಿಗಳು ನಿರ್ಬಂಧಿಸಿದ್ದರಿಂದ ಮಾರ್ಕ್ ಝುಕರ್ಬರ್ಗ್ ಗೆ ವೈಯಕ್ತಿಕವಾಗಿ ಹಾಗೂ ಫೇಸ್ಬುಕ್ ಕಂಪನಿಗೆ ಭಾರಿ ನಷ್ಟವುಂಟಾಗಿದೆ.
ಫೇಸ್ಭುಕ್ ಸ್ಥಾಪಕ ಹಾಗೂ ಸಿಇಒ ಮಾರ್ಕ್ ಝುಕರ್ಬರ್ಗ್ ಸುಮಾರು 7 ಬಿಲಿಯನ್ ಡಾಲರ್ ವೈಯಕ್ತಿಕ ನಷ್ಟ ಅನುಭವಿಸಿದ್ದಲ್ಲದೆ, ಬ್ಲೂಮ್ ಬರ್ಗ್ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಆದರೆ, ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಮಾರ್ಕ್ ಝಕರ್ಬರ್ಗ್ ಅವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ದ್ವೇಷಪೂರಿತ ಭಾಷಣಕ್ಕೆ ವೇದಿಕೆ ಒದಗಿಸಿರುವುದರಿಂದ ಫೇಸ್ಬುಕ್ ಒಡೆತನದ ಸಾಮಾಜಿಕ ಜಾಲ ತಾಣಗಳಲ್ಲಿ ಜಾಹೀರಾತು ನೀಡಲು ಅನೇಕ ಕಂಪನಿಗಳು ಹಿಂದೇಟು ಹಾಕಿವೆ.
We will pause all paid advertising on Facebook and Instagram in the US in support of the #StopHateForProfit campaign. Facebook, Inc. must take the clear and unequivocal actions to stop its platform from being used to spread and amplify racism and hate. >>>https://t.co/7OpxtcbDGg pic.twitter.com/I989Uk9V3h
— Ben & Jerry's (@benandjerrys) June 23, 2020
ಇದರಿಂದಾಗಿ ಫೇಸ್ಬುಕ್ ಷೇರುಗಳು ಕಳೆದ ಮಾರುಕಟ್ಟೆ ವಹಿವಾಟಿನಲ್ಲಿ ಶೇ 8.3 ರಷ್ಟು ಕುಸಿತ ಕಂಡಿತ್ತು. ಮಾರ್ಕ್ ಅವರ ಒಟ್ಟಾರೆ ಆಸ್ತಿ ಮೌಲ್ಯದಲ್ಲಿ 82.3 ಬಿಲಿಯನ್ ಡಾಲರ್ ಇಳಿಕೆಯಾಗಿದೆ.
Three weeks ago, I committed to reviewing our policies ahead of the 2020 elections. That work is ongoing, but today I...
Posted by Mark Zuckerberg onFriday, 26 June 2020
ಬ್ರಿಟಿಷ್ ಡಚ್ ಸಂಸ್ಥೆ ಕೂಡಾ ಫೇಸ್ಬುಕ್ ಗೆ ಜಾಹೀರಾತು ನೀಡುವುದಿಲ್ಲ ಎಂಬ ಬಳಿಕ 56 ಮಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಕುಸಿದಿದೆ. ವೇರಿಜಾನ್, ಬೆನ್ ಅಂಡ್ ಜೆರಿ, ದಿ ನಾರ್ಥ್ ಫೇಸ್ ಸೇರಿದಂತೆ ಹಲವು ಕಂಪನಿಗಳು #StopHate4Profit ಅಭಿಯಾನ ನಡೆಸಿವೆ. ನಾಗರಿಕ ಹಕ್ಕು ಸಂಘಟನೆಗಳು ಈ ಅಭಿಯಾನಕ್ಕೆ ಕೈಜೋಡಿಸಿವೆ ಹೀಗಾಗಿ, ಟ್ವಿಟ್ಟರಲ್ಲೂ ಫೇಸ್ಬುಕ್ ನಷ್ಟ ಅನುಭವಿಸಿದೆ.












Click it and Unblock the Notifications