Get Updates
Get notified of breaking news, exclusive insights, and must-see stories!

ಜೊಮಾಟೊದಿಂದ 4,447 ಕೋಟಿಗೆ ಬ್ಲಿಂಕಿಟ್ ಖರೀದಿ; ಏನಿದರ ಮಹತ್ವ?

ಮುಂಬೈ, ಜೂನ್ 25: ಆನ್‌ಲೈನ್‌ನಲ್ಲಿ ಆಹಾರ ಸರಬರಾಜು ಮಾಡುವ ಜೊಮಾಟೊ ಇದೀಗ ದಿನಸಿ ವಸ್ತುಗಳ ಸರಬರಾಜು ಕ್ಷೇತ್ರಕ್ಕೆ ಪೂರ್ಣಪ್ರಮಾಣದಲ್ಲಿ ಧುಮುಕಲು ಸಜ್ಜಾಗಿದೆ. ಗ್ರೋಫರ್ಸ್ ಎಂದು ಈ ಮುಂಚೆ ಚಿರಪರಿಚತವಾಗಿರುವ ಬ್ಲಿಂಕಿಟ್ ಎಂಬ ತ್ವರಿತ ಸರಬರಾಜು ಕಂಪನಿಯನ್ನು ಜೊಮಾಟೊ ಖರೀದಿ ಮಾಡಲಿದೆ.

570 ಮಿಲಿಯನ್ ಯುಎಸ್ ಡಾಲರ್ ಅಥವಾ 4447 ಕೋಟಿ ರೂ ಬೆಲೆಗೆ ಬ್ಲಿಂಕಿಟ್ ಅನ್ನು ಖರೀದಿಸಲು ಜೊಮಾಟೊದ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಈ ಮೂಲಕ ನಿರೀಕ್ಷೆಗಿಂತ ಕಡಿಮೆ ಬೆಲೆಗೆ ಬ್ಲಿಂಕಿಟ್ ಅನ್ನು ಜೊಮಾಟೊ ತನ್ನದಾಗಿಸಿಕೊಳ್ಳುತ್ತಿದೆ. ಇದೆಲ್ಲವೂ ಷೇರುಗಳ ಮಟ್ಟದಲ್ಲಿ ಕುದುರುವ ಒಪ್ಪಂದವಾಗಿದೆ.

ಕೇವಲ ಹತ್ತು ನಿಮಿಷಕ್ಕೆ ವಸ್ತುಗಳನ್ನು ಗ್ರಾಹಕರಿಗೆ ಸರಬರಾಜು ಮಾಡುವ ಬ್ಲಿಂಕಿಟ್ ಬೆಂಗಳೂರು ಸೇರಿದಂತೆ ದೇಶದ 30 ನಗರಗಳಲ್ಲಿ ಕಾರ್ಯಾಚರಿಸುತ್ತದೆ. ಇದು ದಿನಕ್ಕೆ 1.25 ಲಕ್ಷ ಸಂಖ್ಯೆಯಲ್ಲಿ ಆರ್ಡರ್‌ಗಳನ್ನು ಪಡೆದು ಡೆಲಿವರಿ ಮಾಡುತ್ತಿದೆ.

ಬ್ಲಿಂಕಿಟ್ ಖರೀದಿ ಮೂಲಕ ಜೊಮಾಟೊ ಕ್ವಿಕ್ ಡೆಲಿವರಿ ಕ್ಷೇತ್ರಕ್ಕೆ ಗಟ್ಟಿಯಾಗಿ ಧುಮುಕಿದೆ. ಹಿಂದೆ ಈ ಕ್ಷೇತ್ರಕ್ಕೆ ಅಡಿ ಇಡಲು ಯತ್ನಿಸಿ ವಿಪಲವಾಗಿದ್ದ ಜೊಮಾಟೊಗೆ ಈಗ ಬ್ಲಿಂಕಿಟ್ ಸಿಕ್ಕಿರುವುದು ಅಗಾಧ ಸಾಮರ್ಥ್ಯ ದೊರಕಿದಂತಾಗಿದೆ.

 ಕಡಿಮೆ ಬೆಲೆಗೆ ಸಿಕ್ಕಿತು ಬ್ಲಿಂಕಿಟ್:

ಕಡಿಮೆ ಬೆಲೆಗೆ ಸಿಕ್ಕಿತು ಬ್ಲಿಂಕಿಟ್:

ಎಂಟು ವರ್ಷಗಳ ಹಿಂದೆಯೇ ಗ್ರೋಫರ್ಸ್ ಹೆಸರಿನಲ್ಲಿ ಆರಂಭಗೊಂಡ ಬ್ಲಿಂಕಿಟ್ ಈಗಾಗಲೇ ದಿನಸಿ ವಸ್ತುಗಳ ಆನ್‌ಲೈನ್ ಸರಬರಾಜು ಕ್ಷೇತ್ರದಲ್ಲಿ ಪಳಗಿದ ಕೈ ಎನಿಸಿದೆ. 2021ರಲ್ಲಿ ಬ್ಲಿಂಕಿಟ್ ಎಂದು ಹೆಸರು ಬದಲಾದಾಗ ಇದು ಯೂನಿಕಾರ್ನ್ ಕಂಪನಿ ಎನಿಸಿತ್ತು. ಒಂದು ಬಿಲಿಯನ್ ಯುಎಸ್ ಡಾಲರ್ (ಸುಮಾರು 7,800 ಕೋಟಿ ರೂ) ಮೌಲ್ಯದ ಹಾಗೂ ಖಾಸಗಿ ಒಡೆತನದಲ್ಲಿರುವ ಕಂಪನಿಯನ್ನು ಯೂನಿಕಾರ್ನ್ ಎನ್ನುವುದು. ಬ್ಲಿಂಕಿಟ್‌ನಲ್ಲಿ ಜೊಮಾಟೊ ಶೇ. 9ರಷ್ಟು ಷೇರುಗಳನ್ನು ಹೊಂದಿದೆ. ಬ್ಲಿಂಕಿಟ್ ಅನ್ನು ಕೊಳ್ಳುವ ಮಾತುಕತೆ 2020ರಲ್ಲಿ ಮೊದಲಿಟ್ಟಾಗ 5500 ಕೋಟಿ ರೂ ಗೆ ವ್ಯವಹಾರ ಕುದುರುವ ಅಂದಾಜು ಇತ್ತು. ಅಂತಿಮವಾಗಿ ಅದು ಬ್ಲಿಂಕಿಟ್‌ನ ಮೂಲ ಮೌಲ್ಯಕ್ಕಿಂತ ಶೇ. 40ರಷ್ಟು ಕಡಿಮೆ ಬೆಲೆಗೆ ಜೊಮಾಟೋ ಖರೀದಿಸುವಲ್ಲಿ ಯಶಸ್ವಿಯಾಗಿದೆ.

 ಖರೀದಿಯ ಟೈಮ್‌ಲೈನ್:

ಖರೀದಿಯ ಟೈಮ್‌ಲೈನ್:

ಬ್ಲಿಂಕಿಟ್ ಇನ್ನೂ ಗ್ರೋಫರ್ಸ್ ಆಗಿದ್ದ ಸಂದರ್ಭದಲ್ಲಿ, 2020ರ ಏಪ್ರಿಲ್ ತಿಂಗಳಲ್ಲೇ ಅದನ್ನು ಖರೀದಿಸಲು ಜೊಮಾಟೊ ಮಾತುಕತೆಗೆ ಮೊದಲಿಟ್ಟಿತ್ತು. ಆಗ 5500 ಕೋಟಿಗೆ ಡೀಲ್ ಕುದುರಿಸುವದೆಂದು ಲೆಕ್ಕ ಮಾಡಲಾಯಿತು. ಒಂದು ವರ್ಷದ ಬಳಿಕ ಗ್ರೋಫರ್ಸ್‌ಗೆ ಜೊಮಾಟೊ ಒಂದಷ್ಟು ಹೂಡಿಕೆ ಮಾಡಿತು. ಟೈಗರ್ ಗ್ಲೋಬಲ್ ಎಂಬ ಅಮೆರಿಕನ್ ಹೂಡಿಕೆ ಕಂಪನಿಯೂ ಬಂಡವಾಳ ಹಾಕಿತು. ಈ ಮೂಲಕ ಗ್ರೋಫರ್ಸ್ ಯೂನಿಕಾರ್ನ್ ಆಯಿತು.

2021 ಡಿಸೆಂಬರ್‌ನಲ್ಲಿ ಗ್ರೋಫರ್ಸ್ ಕಂಪನಿ ಹೆಸರು ಬ್ಲಿಂಕಿಟ್ ಆಗಿ ಬದಲಾಯಿತು. ಕ್ವಿಕ್ ಕಾಮರ್ಸ್ ಕ್ಷೇತ್ರಕ್ಕೆ ಅಡಿ ಇಟ್ಟಿತು. 2022ರ ಮಾರ್ಚ್ ತಿಂಗಳಲ್ಲಿ ಷೇರು ಬದಲಾವಣೆ ಒಪ್ಪಂದದ ಮೂಲಕ ಬ್ಲಿಂಕಿಟ್ ಅನ್ನು ಖರೀದಿಸಲು ಜೊಮಾಟೊ ಮುಂದಾಯಿತು. ಈ ಒಪ್ಪಂದಕ್ಕೆ ಈಗ ಜೊಮಾಟೊ ಮಂಡಳಿ ಅನುಮೋದನೆ ನೀಡಿದೆ.

 ಒಪ್ಪಂದದ ರೂಪುರೇಖೆ

ಒಪ್ಪಂದದ ರೂಪುರೇಖೆ

ಈ ಷೇರು ಬದಲಾವಣೆ ಅಥವಾ ಷೇರ್ ಸ್ವಾಪಿಂಗ್ ಡೀಲ್‌ನ ಪ್ರಕಾರ ಬ್ಲಿಂಕಿಟ್‌ನ ಷೇರುದಾರರು ಜೊಮಾಟೊದ ಶೇ. 7ರಷ್ಟು ಷೇರುಗಳನ್ನು ಒಂದು ಷೇರಿಗೆ 70.76 ರೂ ಬೆಲೆಯಂತೆ ಖರೀದಿ ಮಾಡಬೇಕು. ಬ್ಲಿಂಕಿಟ್‌ನ ಹೂಡಿಕೆದಾರರು ಜೊಮಾಟೊದ ಷೇರುಗಳನ್ನು 12 ತಿಂಗಳವರೆಗಾದರೂ ಮಾರದೇ ಇಟ್ಟುಕೊಳ್ಳಬೇಕು. ಬ್ಲಿಂಕಿಟ್‌ನ ಸಂಸ್ಥಾಕ ಅಲ್ಬಿಂದರ್ ಧಿಂಡಸಾ ಅವರು ಬ್ಲಿಂಕಿಟ್‌ನಲ್ಲಿ ಹೊಂದಿರುವ ಷೇರುಗಳ ಪೈಕಿ ಶೇ. 50ರಷ್ಟು ಷೇರುಗಳನ್ನು 24 ತಿಂಗಳಾದರೂ ಉಳಿಸಿಕೊಳ್ಳಬೇಕು. ಇನ್ನುಳಿದ ಷೇರುಗಳನ್ನು 12 ತಿಂಗಳು ಇಟ್ಟುಕೊಳ್ಳಬೇಕು ಎಂದು ಹೇಳಲಾಗಿದೆ.

ಹಾಗೆಯೇ, ಈ ಒಪ್ಪಂದದ ಪ್ರಕಾರ, ಹಿಂದೆ ಬ್ಲಿಂಕಿಟ್‌ಗೆ ಜೊಮಾಟೊ ನೀಡಿದ ಸಾಲವನ್ನು ಈ ಒಪ್ಪಂದದ ಹಣದಲ್ಲೇ ಮುರಿದುಕೊಳ್ಳಲಾಗುತ್ತದೆ. ಉಳಿದ ಹಣವನ್ನು ಮುಂದಿನ ದಿನಗಳಲ್ಲಿನ ಕಾರ್ಯಾಚರಣೆಗೆ ಬಳಸಿಕೊಳ್ಳಲು ಜೊಮಾಟೊ ನಿರ್ಧರಿಸಿದೆ.

 ಬ್ಲಿಂಕಿಟ್ ಶಕ್ತಿ

ಬ್ಲಿಂಕಿಟ್ ಶಕ್ತಿ

ತ್ವರಿತ ಡೆಲಿವರಿ ಕ್ಷೇತ್ರಕ್ಕೆ ಇಳಿದ ಬಳಿಕ ಜನವರಿ ತಿಂಗಳಲ್ಲಿ ಬ್ಲಿಂಕಿಟ್ 22.1 ಕೋಟಿ ರೂ ಆದಾಯ ಗಳಿಸಿತ್ತು. ಮೇ ತಿಂಗಳಲ್ಲಿ ಆದಾಯ 58 ಕೋಟಿ ರೂಗೆ ಹೆಚ್ಚಾಗಿದೆ. ಅದರ ಗ್ರಾಸ್ ಆರ್ಡರ್ ವ್ಯಾಲ್ಯೂ 402 ಕೋಟಿ ರೂ ಮುಟ್ಟಿದೆ. ಸರಾಸರಿ ಆರ್ಡರ್ ವ್ಯಾಲ್ಯೂನಲ್ಲಿ ಜೊಮಾಟೊಗಿಂತ ಬ್ಲಿಂಕಿಟ್ ಹೆಚ್ಚು ಇದೆ.

 ಜೊಮಾಟೊಗೆ ಪುಷ್ಟಿ:

ಜೊಮಾಟೊಗೆ ಪುಷ್ಟಿ:

ಜೊಮಾಟೊದ್ದು ಫುಡ್ ಡೆಲಿವರಿ ಕ್ಷೇತ್ರ. ಸ್ವಿಗ್ಗಿ ಇದರ ಪ್ರಮಖ ಎದುರಾಳಿ. ಈಗ ಅನೇಕ ಕಂಪನಿಗಳು ದಿನಸಿ ವಸ್ತುಗಳ ಡೆಲಿವರಿ ಕ್ಷೇತ್ರಕ್ಕೆ ಧುಮುಕಿವೆ. ಸ್ವಿಗ್ಗಿ ಕೂಡ ಇನ್‌ಸ್ಟಾಮಾರ್ಟ್ ಮೂಲಕ ಈ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಹಿಂದೆ ಜೊಮಾಟೊ ಕೂಡ ಕಳೆದ ಎರಡು ವರ್ಷಗಳಿಂದ ಈ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಯತ್ನಿಸಿ ಸುಮ್ಮನಾಗಿದೆ. ಗ್ರೋಫರ್ಸ್ ಅಥವಾ ಬ್ಲಿಂಕಿಟ್ ಖರೀದಿಯು ಜೊಮಾಟೊದ ತಲೆಯಲ್ಲಿ ಉಳಿದಿದ್ದಿರಬೇಕು.

ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲಿ ದೊಡ್ಡ ಪೈಪೋಟಿ ಇದೆ. ರಿಲಾಯನ್ಸ್ ಬೆಂಬಲಿತ ಡುಂಜೋ ಇದೆ. ಜೆಪ್ಟೋ, ಬಿಗ್ ಬ್ಯಾಸ್ಕೆಟ್ ಕಂಪನಿಗಳು ಸಾಕಷ್ಟು ವ್ಯವಹಾರ ನಡೆಸುತ್ತಿವೆ. ಈ ಕ್ಷೇತ್ರದಲ್ಲಿರುವ ಕಂಪನಿಗಳಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲವಾದರೂ ಮಾರುಕಟ್ಟೆ ದೊಡ್ಡದಾಗಿರುವುದರಿಂದ ಕಂಪನಿಗಳ ಉತ್ಸಾಹ ಬತ್ತಿಲ್ಲ.

"ಭಾರತದಲ್ಲಿ ಆನ್‌ಲೈನ್ ವಾಣಿಜ್ಯ ಚಟುವಟಿಕೆ ಇನ್ನೂ ಕಡಿಮೆಯೇ ಇದೆ. ಹೀಗಾಗಿ ಪೈಪೋಟಿ ಹೆಚ್ಚಾದಷ್ಟೂ ಒಳ್ಳೆಯದು" ಎಂದು ಜೊಮಾಟೊದ ಸಿಇಒ ದೀಪಿಂದರ್ ಗೋಯಲ್ ಹೇಳುತ್ತಾರೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+