ಯೂಟ್ಯೂಬ್ ಗೆ 10, ಜನಪ್ರಿಯತೆಯಲ್ಲಿ ನಂ.3

ಬೆಂಗಳೂರು, ಏ.24: ಅತ್ಯಂತ ಜನಪ್ರಿಯ ವಿಡಿಯೋ ಹಂಚಿಕೆ ವೆಬ್ ತಾಣ ಯೂಟ್ಯೂಬ್ ಗೆ ಮೊದಲ ವಿಡಿಯೋ ಅಪ್ ಲೋಡ್ ಮಾಡಿ 10 ವರ್ಷ ಕಳೆದಿದೆ. ಈ ಮೂಲಕ ಯೂಟ್ಯೂಬ್ ವಿಶಿಷ್ಟ ಮೈಲಿಗಲ್ಲು ದಾಟಿದ್ದು, ಸತತವಾಗಿ ಜನಪ್ರಿಯತೆ ಉಳಿಸಿಕೊಂಡ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2005 ಫೆ.14ರಂದು ಯೂಟ್ಯೂಬ್‌ ಆರಂಭಗೊಂಡಿದ್ದು, ಏ.23ರಂದು ಮೊದಲ ವೀಡಿಯೋ ಅಪ್ಲೋಡ್‌ ಮಾಡಲಾಗಿತ್ತು.ಯೂಟ್ಯೂಬ್‌ ಸಹ ಸ್ಥಾಪಕ ಬಾಂಗ್ಲಾದೇಶ ಮೂಲದ ಜಾವೇದ್‌ ಕರೀಮ್‌ ಅವರು ಮೃಗಾಲಯಕ್ಕೆ ಭೇಟಿ ನೀಡಿದ್ದನ್ನು ಚಿತ್ರೀಕರಿಸಿ ವಿಡಿಯೋ ಅಪ್ ಲೋಡ್ ಮಾಡಿದ್ದರು.

ಸ್ಯಾನ್ ಡಿಯಾಗೋ ಆನೆ ಸಂರಕ್ಷಣಾ ತಾಣದಲ್ಲಿ ಅಂದು 25 ವರ್ಷ ವಯಸ್ಸಿನ ಕರೀಮ್ ತೆಗೆದ 'Me at the Zoo' ಹೆಸರಿನ 19 ಸೆಕೆಂಡುಗಳ ವಿಡಿಯೋ ತುಣುಕು ಏ.23,2005ಕ್ಕೆ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿತ್ತು.

ಇದಾದ ಬಳಿಕ ಕೋಟಿಗಟ್ಟಲೆ ವಿಡಿಯೋಗಳನ್ನು ಯೂಟ್ಯೂಬ್ ಕಂಡಿದೆ. ವಿಶ್ವದ ಅತ್ಯಂತ ಜನಪ್ರಿಯ ತಾಣಗಳ ಪೈಕಿ 3ನೇ ಸ್ಥಾನಕ್ಕೇರಿದೆ. ವಿಡಿಯೋ ಅಪ್ ಲೋಡ್, ಶೇರಿಂಗ್, ಡೌನ್ ಲೋಡ್ ನಿರಂತರವಾಗಿ ಸಾಗಿದೆ.

YouTube attains new milestone on 10th birthday

ಪೇ ಪಾಲ್ ಉದ್ಯೋಗಿ ಚಾಡ್ ಹರ್ಲೆ, ಸ್ಟೀವ್ ಚೆನ್ ಜೊತೆಗೂಡಿ ಕರೀಮ್ ಅವರು ಯೂಟ್ಯೂಬ್ ವೆಬ್ ತಾಣಕ್ಕೆ ಚಾಲನೆ ನೀಡಿದ್ದರು. 2006ರಲ್ಲಿ ಯೂಟ್ಯೂಬ್ ತಾಣವನ್ನು 1.65 ಬಿಲಿಯನ್ ಡಾಲರ್ ನೀಡಿ ಸರ್ಚ್ ಇಂಜಿನ್ ದಿಗ್ಗಜ ಯೂಟ್ಯೂಬ್ ಖರೀದಿಸಿತ್ತು.

ಚಾರ್ಲಿ ಮತ್ತು ಹ್ಯಾರಿ ಇಂಗ್ಲಿಷ್‌ ಸಹೋದರರು ಕೈಕಚ್ಚುವ 55.7 ಸೆಂಕೆಂಡಿನ ವೀಡಿಯೋ ಅತಿ ಹೆಚ್ಚು ಹಿಟ್ಸ್‌ (8.16 ಕೋಟಿ) ಪಡೆದ ವೀಡಿಯೋ ಆಗಿದೆ. ಇದಲ್ಲದೆ ಜಸ್ಟೀನ್ ಬೀಬರ್, ವ್ಲೋಗರ್ ಜೊಯೆಲ್ಲಾ ಸೇರಿದಂತೆ ಹಲವಾರು ಗಾಯಕ, ಗಾಯಕಿಯರಿಗೆ ಕಲಾವಿದರು ಜನಪ್ರಿಯರಾಗಲು ಯೂಟ್ಯೂಬ್ ವೇದಿಕೆ ಒದಗಿಸಿದೆ.

ಸೈ(Psy) ಗಂಗ್ನಮ್ ಸ್ಟೈಲ್ ನೃತ್ಯದ ವಿಡಿಯೋ 2.24 ಮಿಲಿಯನ್ ಬಾರಿ ವೀಕ್ಷಣೆಗೊಂಡಿತ್ತು. ಗೂಗಲ್, ಫೇಸ್ ಬುಕ್ ನಂತರ ಜನಪ್ರಿಯ ವೆಬ್ ತಾಣಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಯೂಟ್ಯೂಬ್ ಗೆ ಪ್ರತಿ ತಿಂಗಳಿಗೆ 800 ಮಿಲಿಯನ್ ಗೂ ಅಧಿಕ ವಿಶಿಷ್ಟ ವೀಕ್ಷಕರಿದ್ದಾರೆ. ಪ್ರತಿ ನಿಮಿಷಕ್ಕೆ 300 ಗಂಟೆ ಅವಧಿಯ ಹೊಸ ವಿಡಿಯೋಗಳು ಅಪ್ ಲೋಡ್ ಆಗುತ್ತಿರುತ್ತದೆ ಎಂದರೆ ಯೂಟ್ಯೂಬ್ ಬಳಕೆ ಪ್ರಮಾಣವನ್ನು ಊಹಿಸಬಹುದು.(ಐಎಎನ್ಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+