ರಷ್ಯಾ ತೈಲ ಖರೀದಿಸುವ ಭಾರತದ ನಿರ್ಧಾರಕ್ಕೆ ಅಮೆರಿಕ ಆಕ್ಷೇಪ ಯಾಕೆ?
ಭಾರತವು ರಷ್ಯಾಯೊಂದಿಗೆ ತೈಲ ವ್ಯಾಪಾರದಲ್ಲಿ ಅಗ್ಗದ ಬೆಲೆಗೆ ಹಣ ನೀಡಿ ಕಚ್ಚಾ ತೈಲ ಖರೀದಿ ಮಾಡುತ್ತಿದೆ. ಜಾಗತಿಕವಾಗಿ ಅಗ್ಗದ ಬೆಲೆಗೆ ಸಿಗುವ ಕಚ್ಚಾ ತೈಲವನ್ನು ಖರೀದಿ ಮಾಡುತ್ತಿರುವುದು ಭಾರತ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಇದಕ್ಕೆ ಕಾರಣ, ವಿಶ್ವದಲ್ಲಿ ಅತಿ ಹೆಚ್ಚು ವಿವಿಧ ದೇಶಗಳಿಂದ ಅಮದು ಮಾಡಿಕೊಳ್ಳುವ ಭಾರತ, ಯಾವ ದೇಶದಿಂದ ಅಗ್ಗದ ಬೆಲೆಗೆ ತೈಲ ಸಿಗುತ್ತದೆ ಅಲ್ಲಿ ಕಚ್ಚಾ ತೈಲ ಭಾರತ ಅಮದು ಮಾಡಿಕೊಳ್ಳಲು ಸಿದ್ಧವಾಗಿರುತ್ತದೆ.
ಇನ್ನು ಭಾರತ ತನ್ನ ದೇಶದ ಜನ ಜೀವನಕ್ಕೆ ತೈಲ ಬೆಲೆಗಳು ಏರಿಕೆಯಾಗದಿರುವುದನ್ನು ನೋಡಿಕೊಳ್ಳುವುದು ಭಾರತದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಭಾರತ ಹೇಳಿಕೊಂಡಿದೆ. ಆದರೆ, ಅಮೆರಿಕ ಮತ್ತೆ ಆಕ್ಷೇಪ ವ್ಯಕ್ತಪಡಿಸುತ್ತಿದೆ.
ಹೌದು, ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಅನೇಕ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ರಷ್ಯಾದ ತೈಲ ರಫ್ತುಗಳನ್ನು ಅಮೆರಿಕ ಸೇರಿದಂತೆ ಹಲವು ದೇಶಗಳು ನಿಷೇಧಿಸಿವೆ. ಇದರ ಲಾಭ ಪಡೆದ ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಸಿತು. ಅಮೇರಿಕ ಇದೇ ವಿಷಯವನ್ನು ಕೆರಳಿಸುತ್ತಿದೆ. ಇದಕ್ಕೆ ಅಮೆರಿಕ ಕೂಡ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದೆ. ಇದೀಗ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಭಾರತಕ್ಕೆ ಬೇಡದ ಸಲಹೆ ನೀಡುತ್ತಲೇ ಧ್ವನಿ ಎತ್ತಿದ್ದಾರೆ. ಭಾರತ ಕಾಲಕ್ರಮೇಣ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂದು ನೆಡ್ ಪ್ರೈಸ್ ಹೇಳಿದ್ದಾರೆ.

ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಲಿದೆ
ಇತ್ತೀಚೆಗೆ ರಷ್ಯಾದ ವಿದೇಶಾಂಗ ಸಚಿವರು ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಲಿದೆ ಎಂದು ಜೈಶಂಕರ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಜೈಶಂಕರ್ ಪ್ರಕಾರ, ಇದು ಭಾರತಕ್ಕೆ ಲಾಭದಾಯಕ. ಭಾರತ-ರಷ್ಯಾ ಸಂಬಂಧಗಳು ನಮ್ಮ ಅನುಕೂಲಕ್ಕಾಗಿ ಕೆಲಸ ಮಾಡಿರುವುದನ್ನು ನಾವು ನೋಡಿದ್ದೇವೆ ಎಂದು ಜೈಶಂಕರ್ ಹೇಳಿದ್ದಾರೆ. ಆದ್ದರಿಂದ, ಈ ಒಪ್ಪಂದವು ನಮಗೆ ಲಾಭವಾಗಿದ್ದರೆ ನಾವು ಇದನ್ನು ಮುಂದುವರಿಸಲು ಬಯಸುತ್ತೇವೆ ಎಂದರು. ಇನ್ನೂ ಕಚ್ಚಾ ತೈಲದ ವಿಷಯದಲ್ಲಿ ರಷ್ಯಾ ಈಗ ಭಾರತಕ್ಕೆ ಅತಿದೊಡ್ಡ ಪೂರೈಕೆದಾರನಾಗಿ ಮಾರ್ಪಟ್ಟಿದೆ.
ಅಮೆರಿಕದ ವಕ್ತಾರ ನೆಡ್ ಪ್ರೈಸ್, 'ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಹೇಳಿಕೆಯನ್ನು ನಾವು ಕೇಳಿದ್ದೇವೆ. ಅವರ ಹೇಳಿಕೆಯು ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಿಂತ ಭಿನ್ನವಾಗಿರಲಿಲ್ಲ. ಇದು ಯುದ್ಧದ ಸಮಯವಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟವಾಗಿ ಹೇಳಿದ್ದರು. ಭಾರತವು ಈ ಯುದ್ಧಕ್ಕೆ ವಿರುದ್ಧವಾಗಿದೆ ಮತ್ತು ಇದನ್ನು ಕೊನೆಗೊಳಿಸಲು ರಾಜತಾಂತ್ರಿಕತೆ ಮತ್ತು ಮಾತುಕತೆಯನ್ನು ಆಶ್ರಯಿಸಬೇಕು ಎಂದು ಮತ್ತೊಮ್ಮೆ ಪುನರುಚ್ಚರಿಸಿದೆ ಎಂದು ಹೇಳಿದ್ದಾರೆ.
ರಷ್ಯಾ ಇಂಧನ ಮತ್ತು ರಕ್ಷಣಾ ವಿಷಯಗಳಲ್ಲಿ ಸಹಾಯಕ್ಕಾಗಿ ನಂಬಲರ್ಹವಾಗಿಲ್ಲ. ಕಾಲಕ್ರಮೇಣ ಭಾರತ ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು. ಇದು ಉಕ್ರೇನ್‌ನ ಹಿತಾಸಕ್ತಿಗೆ ಮಾತ್ರವಲ್ಲದೆ ಭಾರತದ ಸ್ವಂತ ದ್ವಿಪಕ್ಷೀಯ ಸಂಬಂಧಗಳಿಗೆ ಸಹಾಯ ಮಾಡುತ್ತದೆ. ನಾವು ರಷ್ಯಾದ ಇತಿಹಾಸವನ್ನು ನೋಡಿದ್ದೇವೆ. ರಷ್ಯಾದೊಂದಿಗಿನ ವ್ಯಾಪಾರವನ್ನು ಕಡಿಮೆ ಮಾಡಲು ಮತ್ತು ರಷ್ಯಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತಕ್ಕೆ ಮತ್ತು ವಿಶ್ವದ ಇತರ ದೇಶಗಳಿಗೆ ಸಲಹೆ ನೀಡಿದೆ ಎಂದು ನೆಡ್ ಪ್ರೈಸ್ ಹೇಳಿದರು.












Click it and Unblock the Notifications