Get Updates
Get notified of breaking news, exclusive insights, and must-see stories!

ಮಗ ಆರೋಗ್ಯ ಸಮಸ್ಯೆ ಹೇಳಿಕೊಳ್ಳುತ್ತಿದ್ದಂತೆ ಗಳಗಳನೇ ಅತ್ತ ಮುಕೇಶ್ ಅಂಬಾನಿ..!

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಮುಖೇಶ್ ಅಂಬಾನಿ ಕಣ್ಣೀರು ಹಾಕಿರುವುದು ಕಂಡು ಬಂದಿದೆ.

ಮುಕೇಶ್ ಅಂಬಾನಿ ಅತ್ಯಂತ ಶ್ರೀಮಂತ ವ್ಯಕ್ತಿ. ಮನಸ್ಸು ಮಾಡಿದರೆ ಸ್ವರ್ಗವನ್ನೇ ಭೂಮಿ ಮೇಲೆ ಸೃಷ್ಟಿಸುವಂತಹ ಕುಬೇರ. ಯಾವುದಕ್ಕೂ ಕೂಡ ಕಡಿಮೆ ಇಲ್ಲ. ಇಂತಹ ವ್ಯಕ್ತಿ ಕಣ್ಣೀರು ಹಾಕಿದಾಗ ಸಹಜವಾಗಿಯೇ ಆ ವಿಡಿಯೋ ವೈರಲ್ ಆಗಲು ಶುರುವಾಯ್ತು. ಇಂತಹ ದೊಡ್ಡ ವ್ಯಕ್ತಿಗೆ ಅಂತಹ ನೋವು ಸಂಕಟ ಏನು? ಮುಖೇಶ್ ಅಂಬಾನಿ ಹೀಗೆ ಕಣ್ಣೀರು ಹಾಕಲು ಕಾರಣ ಅವರ ಮಗ ಅನಂತ್ ಅಂಬಾನಿ.

Why did Mukesh Ambani shed tears at Anant Ambani s pre-wedding function

ಅನಂತ್ ಅಂಬಾನಿ ತಮಗಿರುವ ಆರೋಗ್ಯ ಸಮಸ್ಯೆ ಹೇಳಿಕೊಳ್ಳುತ್ತಿದ್ದಂತೆ ಮುಕೇಶ್ ಅಂಬಾನಿ ಕಣ್ಣೀರು ಹಾಕಲು ಶುರುಮಾಡಿದ್ರು. ಆ ಕಾರಣಕ್ಕಾಗಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಾದರೆ ಅನಂತ್ ಅಂಬಾನಿಗೆ ಇರುವಂತಹ ಆರೋಗ್ಯ ಸಮಸ್ಯೆ ಏನು? ಅದು ಕುಟುಂಬವನ್ನು ಎಷ್ಟರ ಮಟ್ಟಿಗೆ ಬಾದಿಸಿತ್ತು ಎನ್ನುವುದನ್ನು ನೋಡೋಣ.

108 ಕೆಜಿ ಇಳಿಸಿಕೊಂಡ ಅನಂತ್ ಅಂಬಾನಿ

ಅನಂತ್ ಅಂಬಾನಿಗೆ ಇರುವ ಆರೋಗ್ಯ ಸಮಸ್ಯೆಯನ್ನು ತಿಳಿಯದ ಕೆಲ ಜನ ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಆದರೆ ಇಷ್ಟೊಂದು ತೂಕ ಇರುವ ಮನುಷ್ಯ ತೂಕ ಇಳಿಸಿಕೊಂಡು ಬಿಟ್ಟರು. ಇದಾದ ಬಳಿಕ ಮತ್ತೆ ತೂಕ ಹೆಚ್ಚಾಗುತ್ತಿದೆ. ನೋಡಿ ಅವರ ದೇಹ ಹೀಗಿದೆ ಹಾಗಿದೆ ಅಂತ ಒಂದಿಷ್ಟು ಮಂದಿ ಅಪಹಾಸ್ಯ ಮಾಡ್ತಾಯಿದ್ದಾರೆ. ಹಾಗಾದರೆ ಅನಂತ್ ಅಂಬಾನಿ ತೂಕ ದಿನೇ ದಿನೇ ಹೆಚ್ಚಾಗುತ್ತಿರಲು ಕಾರಣ ಏನು? ಬರೋಬ್ಬರಿ 108 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು ಅನಂತ್ ಅಂಬಾನಿ. ಆದರೆ ಮತ್ತೊಮ್ಮೆ ಈಗ ತೂಕ ವಿಪರೀತವಾಗಿ ಜಾಸ್ತಿ ಆಗ್ತಾಯಿದೆ. ಹಾಗಾದರೆ ಅಂತಹ ಆರೋಗ್ಯ ಸಮಸ್ಯೆ ಏನು ಅವರನ್ನು ಕಾಡುತ್ತಿದೆ? ಹಾಗಾದರೆ ಅನಂತ್ ಅಂಬಾನಿ ಅವರು ಆರೋಗ್ಯಕ್ಕೆ ಸಂಬಂಧಿಸಿದ ಕೆಲ ವಿಚಾರಗಳನ್ನು ಗಮನಿಸುತ್ತಾ ಹೋಗೋಣ.

Why did Mukesh Ambani shed tears at Anant Ambani s pre-wedding function

ಇದರ ಜೊತೆಗೆ ತುಂಬಾ ಜನರ ಕುತೂಹಲ ಏನು ಅಂದರೆ ಅನಂತ್ ಅವರನ್ನು ಮದುವೆಯಾಗುತ್ತಿರುವ ರಾಧಿಕಾ ಮರ್ಚಂಟ್ ಯಾರು ಅಂತ? ಇನ್ನೂ ಅನಂತ್ ಅಂಬಾನಿ ಹಾಗೂ ರಾಧಿಕಾ ಅವರ ಫೋಟೋ ನೋಡಿದ ಜನ ಅಲ್ಲೂ ಕೂಡ ಅಪಾಹಾಸ್ಯ ಮಾಡಿದ್ದಾರೆ. ಈ ಜೋಡಿ ಮಿಸ್ ಮ್ಯಾಚ್ ಆಗಿದೆ. ಜೋಡಿ ನೋಡುವುದಕ್ಕೂ ಕೂಡ ಚೆನ್ನಾಗಿಲ್ಲ. ರಾಧಿಕಾ ಹಣಕ್ಕಾಗಿ ಅನಂತ್ ಅಂಬಾನಿ ಅವರನ್ನು ಮದುವೆ ಆಗ್ತಿರಬಹುದು ಎಂದು ಹೇಳುತ್ತಿದ್ದಾರೆ.

ಹಣವಿದ್ದರೆ ಆರೋಗ್ಯ ಇರಬೇಕೆಂದಿದೆಯೇ?

ಹಣವಿದ್ದ ಮಾತ್ರಕ್ಕೆ ನಾವು ಎಲ್ಲವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ನಾವು ತುಂಬಾ ಬಾರಿ ಅಂದುಕೊಂಡು ಬಿಡ್ತೀವಿ ಹಣವೇ ಖುಷಿ, ಹಣವೇ ಆರೋಗ್ಯ ಅಂತ. ಆದರೆ ಅದು ನಮ್ಮ ತಪ್ಪು ಕಲ್ಪನೆ. ಒಮ್ಮೊಮ್ಮೆ ನಮಗೆ ಅನುಸೋಕೆ ಶುರುವಾಗುತ್ತೆ ಈ ಆರೋಗ್ಯಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ ಅಂತ. ಇದೀಗ ಅಂಬಾನಿ ಕುಟುಂಬದಲ್ಲೂ ಹಾಗೇ ಆಗಿ ಬಿಟ್ಟಿದೆ.

ಹಣ ಇದ್ದ ಮಾತ್ರಕ್ಕೆ ನಾವು ನೆಮ್ಮದಿಯನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಹಣವಿದ್ದ ಮಾತ್ರಕ್ಕೆ ಸಂತೋಷವನ್ನು ಪರ್ಚೇಸ್ ಮಾಡಲು ಆಗುವುದಿಲ್ಲ. ಹಣವಿದ್ದಾಗ ಅನಾರೋಗ್ಯಕ್ಕೆ ಒಳಗಾದಾಗ ಬೆಸ್ಟ್ ಟ್ರೀಟ್‌ಮೆಂಟ್ ಕೊಡಿಸಬಹುದು. ಹಾಗಂದ ಮಾತ್ರಕ್ಕೆ ಹಣದಿಂದಲೇ ಆರೋಗ್ಯ ಸಮಸ್ಯೆಯನ್ನು ನಾವು ಪೂರ್ತಿ ಕಡಿಮೆ ಮಾಡ್ತೀವಿ ಅಂತ ಹೇಳೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ನಾವು ಅರಿತುಕೊಳ್ಳಬೇಕಾದ ಸತ್ಯ ಅಂದರೆ ಹಣವೇ ಎಲ್ಲವೂ ಅಲ್ಲ.

Why did Mukesh Ambani shed tears at Anant Ambani s pre-wedding function

ಕುಬೇರನ ಮಗನಿಗೆ ಇರುವ ಆರೋಗ್ಯ ಸಮಸ್ಯೆ ಯಾವುದು?

ಮುಕೇಶ್ ಅಂಬಾನಿಗೆ ಯಾವುದಕ್ಕೂ ಕಡಿಮೆ ಇಲ್ಲ. ಆದರೆ ಮಗನ ಆರೋಗ್ಯ ಸಮಸ್ಯೆಯನ್ನು ಕಡಿಮೆ ಮಾಡಲು ಮಾತ್ರ ಸಾಧ್ಯ ಆಗ್ತಾಯಿಲ್ಲ. ಅದಕ್ಕೆ ಸಂಬಂಧಪಟ್ಟ ಕೆಲವು ಸಂಗತಿಯನ್ನು ಗಮನಿಸುತ್ತಾ ಹೋಗೋಣ. ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮ ನಡೆಯುತ್ತಿದೆ.

ಈ ಕಾರ್ಯಕ್ರಮಕ್ಕೆ ದೇಶ ವಿದೇಶದಿಂದ ಗಣ್ಯಾತಿ ಗಣ್ಯರು ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಹೀಗಾಗಿ ಇದು ಇಡೀ ದೇಶದ ಗಮನ ಸೆಳೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಮುಖೇಶ್ ಅಂಬಾನಿ ಕಣ್ಣೀರು ಹಾಕಿದರು ಅನ್ನೋ ವಿಚಾರ ಸದ್ಯ ಎಲ್ಲರ ಗಮನ ಸೆಳೆದಿದೆ.

ಅನಂತ್ ಅಂಬಾನಿ ಹೇಳಿದ್ದೇನು?

ಇಲ್ಲಿ ಅನಂತ್ ಅಂಬಾನಿ ವೇದಿಕೆ ಮೇಲೆ ಮಾತನಾಡುವ ಸಂದರ್ಭದಲ್ಲಿ ಅವರ ಅಪ್ಪ, ಅಮ್ಮ ಹಾಗೂ ಅವರ ಆರೋಗ್ಯ ಸಮಸ್ಯೆ ಎಲ್ಲವನ್ನೂ ನೆನಪು ಮಾಡಿಕೊಳ್ಳುತ್ತಾ ಹೋಗ್ತಾರೆ. ಈ ವೇಳೆ ಅವರು ಹೇಳ್ತಾರೆ, 'ನನ್ನ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ನನಗೂ ಆರೋಗ್ಯ ಸಮಸ್ಯೆ ಇತ್ತು. ವಪರೀತ ಬಾದಿಸ್ತಾಯಿತ್ತು.

ಆದರೆ ನನ್ನ ಅಪ್ಪ ಅಮ್ಮ ಅದು ನನಗೆ ಗೊತ್ತಾಗದೇ ಇರೋ ರೀತಿ ಮಾಡಿ ಬಿಟ್ಟರು ಅಂತ' ಈ ಮಾತನ್ನು ಹೇಳುತ್ತಿದ್ದಂತೆ ಮುಕೇಶ್ ಅಂಬಾನಿ ಅವರಿಗೆ ಕಣ್ಣೀರು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಸಾರ್ವಜನಿಕವಾಗಿ ಅವರು ಕಣ್ಣೀರು ಹಾಕಿಬಿಟ್ಟರು. ಯಾಕೆಂದರೆ ಈವರೆಗೆ ಅವರು ಸಾರ್ವಜನಿಕವಾಗಿ ಕಣ್ಣೀರು ಹಾಕಿರಲಿಲ್ಲ. ಆದರೆ ಮಗನ ಮದುವೆ ಸಮಾರಂಭದಲ್ಲಿ ಕಣ್ಣೀರು ಹಾಕಿದ್ರು. ಹೀಗೆ ಕಣ್ಣೀರು ಹಾಕುತ್ತಿದ್ದಂತೆ ಜನರಿಗೆ ಕುತೂಹಲ ಶುರುವಾಯ್ತು. ಅನಂತ್ ಅಂಬಾನಿಗೆ ಏನಾಯ್ತು ಅಂತ.

ಅನಂತ್ ಅಂಬಾನಿ ಎಷ್ಟು ತೂಕವಿದ್ದರು?

ಅನಂತ್ ಅಂಬಾನಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ. ಒಳ್ಳೆ ಶಿಕ್ಷಣ ಪಡೆದ ಅನಂತ್ ಬೇರೆ ಬೇರೆ ಉದ್ಯಮ ಮಾಡಿಕೊಂಡು ಇದ್ದಾರೆ. ಇವರು 2016-17ರಲ್ಲಿ ದೇಶದ ಗಮನ ಸೆಳೆದಿದ್ದರು ಇದಕ್ಕೆ ಕಾರಣ ಏನು ಅಂದರೆ ಅನಂತ್ ಅಂಬಾನಿ ಈ ಮುಂಚೆ ಬರೋಬ್ಬರಿ 208 ಕೆಜಿ ತೂಕ ಇರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಅನಂತ್ ಅಂಬಾನಿ ಫುಲ್ ವೀಕ್ ಆಗಿಬಿಟ್ಟಿರುತ್ತಾರೆ. ಆ ಫೋಟೋ ಕೂಡ ವಿಪರೀತ ವೈರಲ್ ಕೂಡ ಆಗಿದೆ. ಹೇಗಪ್ಪ ಹೀಗಾಗಲು ಸಾಧ್ಯ? ದುಡ್ಡಿದ್ದರೆ ಏನು ಬೇಕಾದರು ಮಾಡಿಬಿಡಬಹುದು ಅಂತ ಜನ ಮಾತನಾಡಿಕೊಳ್ಳಲು ಶುರು ಮಾಡಿದ್ದರು.

ಅನಂತ್ ಅಂಬಾನಿ 18 ತಿಂಗಳಲ್ಲಿ ಬರೋಬ್ಬರಿ 108 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು. ಇದು ನಿಜಕ್ಕೂ ಸಾಮಾನ್ಯ ಸಂಗತಿ ಅಲ್ಲವೇ ಅಲ್ಲ. ಅದೂ ಕೂಡ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದಂತೆ. ಕೇವಲ ಡಯಟ್ ಮೂಲಕವೇ ಅವರು ತೂಕ ಇಳಿಕೆ ಮಾಡಿಕೊಂಡಿದ್ದರು. ಅದಾದ ಬಳಿಕ ಅನಂತ್ ಅಂಬಾನಿ ಎಲ್ಲರ ಕಣ್ಣು ಕುಕ್ಕಿದ್ದು 2023ರಲ್ಲಿ.

ಅನಂತ್ ರಾಧಿಕಾ ಇಬ್ಬರು ಜೋಡಿ

ಅದರಲ್ಲೂ ಎಂಗೇಜ್‌ಮೆಂಟ್ ಫೋಟೋಗಳ ಮೂಲಕ. ಈ ಫೋಟೋಗಳಲ್ಲಿ ಅನಂತ್ ಅಂಬಾನಿ ವಿಪರೀತ ದಪ್ಪ ಕಾಣ್ತಾಯಿದ್ದರೆ ರಾಧಿಕ ತುಂಬಾ ಸ್ಲಿಮ್ ಆಗಿ ಕಾಣಿಸ್ತಾಯಿದ್ದರು. ಆಗ ಮತ್ತೆ ಜನ ಚರ್ಚೆ ಮಾಡಲು ಶುರು ಮಾಡಿದ್ರು. ಅಷ್ಟೋಂದು ತೂಕ ಇಳಿಸಿಕೊಂಡಿದ್ದ ಅವರು ಈಗ ಯಾಕೆ ಮತ್ತೆ ದತ್ತ ಆದರು ಅಂತ ಯೋಚನೆ ಮಾಡಲು ಶುರು ಮಾಡಿದರು. ಈಗ ಮದುವೆ ಸಮಾರಂಭದಲ್ಲೂ ಅವರು ತುಂಬಾ ದಪ್ಪಾಗಿ ಕಾಣುತ್ತಿದ್ದಾರೆ. ಈ ರೀತಿ ಅನಂತ್ ಅಂಬಾನಿ ತೂಕ ಇಳಿಸಿಕೊಂಡರೂ ಸಹ ಮತ್ತೆ ಮತ್ತೆ ಹೆಚ್ಚಾಗುತ್ತಿರುವುದು ಯಾಕೆ ಅನ್ನೋ ಪ್ರಶ್ನೆ ಜನರನ್ನು ಕಾಡತೊಡಗಿದೆ.

ಮಗನ ಆರೋಗ್ಯ ಸಮಸ್ಯೆ ಹೇಳಿಕೊಂಡ ನೀತಾ ಅಂಬಾನಿ...

ಇದಕ್ಕೆ ಕಾರಣ ಏನಪಾ ಅಂದರೆ ಅವರಿಗೆ ಇರುವ ಆರೋಗ್ಯ ಸಮಸ್ಯೆ. ಅನಂತ್ ಅಂಬಾನಿ ತುಂಬಾ ಗಂಭೀರವಾದ ಅಸ್ತಮ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆ ಅಸ್ತಮ ಸಮಸ್ಯೆಯಿಂದ ಹೊರಬರಲು ನಿರಂತರವಾಗಿ ಅವರಿಗೆ ಚಿಕಿತ್ಸೆ(steroid) ನೀಡಲಾಗುತ್ತಿತ್ತು. ಇದರ ಎಫೆಕ್ಟ್‌ನಿಂದಾಗಿ ಎನ್ನುವಂತೆ ಅನಂತ್ ಅಂಬಾನಿ ಎಷ್ಟೇ ಪ್ರಯತ್ನಪಟ್ಟರೂ ಕೂಡ ಆ ತೂಕ ಇಳಿತಾಯಿಲ್ಲ.

ಇದರ ಬದಲಾಗಿ ಮತ್ತೆ ಮತ್ತೆ ತೂಕ ಹೆಚ್ಚಾಗುತ್ತಿದೆ. ಅದು ಯಾವ ಹಂತಕ್ಕೆ ಹೋಗುತ್ತೆ ಅಂತ ಅವರಿಗೆ ಅಂದಾಜು ಕೂಡ ಮಾಡಲು ಸಾಧ್ಯ ಆಗ್ತಾಯಿಲ್ಲ. ಈ ವಿಚಾರವನ್ನು ಅನಂತ್ ಅಂಬಾನಿ ತಾಯಿ ನೀತಾ ಅಂಬಾನಿ ಸಂದರ್ಶವೊಂದರಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದರು.

ಮುಕೇಶ್ ಅಂಬಾನಿ ಕಣ್ಣೀರು ಹಾಕಿದ್ದು ಯಾಕೆ?

ಇದರ ಜೊತೆಗೆ ಅಸ್ತಮ ಸಮಸ್ಯೆಗೆ ಎಷ್ಟೇ ಪ್ರಯತ್ನ ಪಟ್ಟು ಚಿಕಿತ್ಸೆ ನೀಡಿದರು ಅದನ್ನು ಗುಣಪಡಿಸಲು ಸಾರ್ಧಯವಾಗುತ್ತಿಲ್ಲ. ಅಷ್ಟೆಲ್ಲಾ ಹಣವಿದ್ದರೂ ಕೂಡ. ಎಲ್ಲಿ ಬೇಕಾದರೂ ಟ್ರೀಟ್‌ಮೆಂಟ್ ಕೊಡಿಸುವ ಸಾಮಾರ್ಥ್ಯ ಇದ್ದರೂ ಕೂಡ ಅವರಿಗೆ ಅಸ್ತಮಾ ಗುಣಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನಂತ್ ಅಂಬಾನಿ ದೇಹದ ತೂಕ ಕೂಡ ಹೆಚ್ಚಾಗುತ್ತಲೇ ಇದೆ.

ಜನ ಕೂಡ ಅವರ ದೇಹದ ತೂಕದ ಬಗ್ಗೆ ಅಪಹಾಸ್ಯ ಮಾಡ್ತಾಯಿದ್ದಾರೆ. ಅಷ್ಟು ಶ್ರೀಮಂತರ ಮಗ ನೋಡಿ ಎಷ್ಟು ದಪ್ಪ ಇದ್ದಾನೆ ಅಂತ ಜನ ಗುರುಗುರು ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರ ಕುಟುಂಬವೂ ಕೂಡ ಸಾಕಷ್ಟು ಬೇಸರಪಟ್ಟಿದೆ. ಬೇರೆ ಬೇರೆ ರೀತಿ ಪ್ರಯತ್ನಪಟ್ಟರೂ ಅನಂತ್ ಅಂಬಾನಿ ಆರೋಗ್ಯ ಸಮಸ್ಯೆ ಮಾತ್ರ ಸುಧಾರಿಸುತ್ತಿಲ್ಲ. ಈ ಕಾರಣಕ್ಕಾಗಿ ಮುಖೇಶ್ ಅಂಬಾನಿ ಅನಂತ್ ಅಂಬಾನಿ ವಿವಾಹ ಪೂರ್ವ ಮದುವೆ ಸಮಾರಂಭದಲ್ಲಿ ಗಳಗಳನೇ ಕಣ್ಣೀರು ಹಾಕಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+