ಜ. 1ರಿಂದ ಎಸ್ಬಿಐನ ಯಾವ ಯಾವ ಡೆಬಿಟ್ ಕಾರ್ಡ್ ವರ್ಕ್ ಆಗಲ್ಲ
ಬೆಂಗಳೂರು, ಡಿಸೆಂಬರ್ 05: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಹೊಸ ಡಿಜಿಟಲ್ ಪೇಮೆಂಟ್ ಸೇವೆಯನ್ನು ಒದಗಿಸಲು ಮುಂದಾಗಿದೆ. ಅಕ್ಟೋಬರ್ 31ರ ನಂತರ ಎಸ್ಬಿಐನ ವ್ಯವಹಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿತ್ತು. ಅಕ್ಟೋಬರ್ 31, 2018ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ದಿನದ ವಿಥ್ ಡ್ರಾ ಮಿತಿ ಬದಲಿಸಲಾಯಿತು. ಈಗ ಡೆಬಿಟ್ ಕಾರ್ಡ್ ಸ್ವರೂಪ ಬದಲಾಗಲಿದೆ. ಹೊಸ ಸ್ವರೂಪದ ಉತ್ತಮ ಭದ್ರತಾ ಸೌಲಭ್ಯಯುಳ್ಳ ಕಾರ್ಡ್ ಅಪ್ಗ್ರೇಡ್ ಆಗುವುದು ಗ್ರಾಹಕರಿಗೆ ಅನಿವಾರ್ಯವಾಗಲಿದೆ.
ಅಕ್ಟೋಬರ್ 31ರಿಂದ ಈ ಮಿತಿ 20 ಸಾವಿರಕ್ಕೆ ಕಡಿತ ಮಾಡಲಾಗಿತ್ತು. ಡಿಸೆಂಬರ್ 01ರೊಳಗೆ ಗ್ರಾಹಕರು ತಮ್ಮ ಮೊಬೈಲ್ ಫೋನ್ ನಂಬರ್ ಹಾಗೂ ಬ್ಯಾಂಕ್ ಖಾತೆ ಜತೆ ಜೋಡಣೆ ಮಾಡಬೇಕಾಗಿದೆ. ಇಲ್ಲವಾದಲ್ಲಿ, ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಬಳಸಲು ಸಾಧ್ಯವಾಗುವುದಿಲ್ಲ ಎಂದು ಬ್ಯಾಂಕ್ ಪ್ರಕಟಿಸಿದೆ.
Apply now to change your Magnetic Stripe Debit Cards to the more secure EMV Chip and PIN based SBI Debit card at your home branch by 31st December, 2019. Safeguard yourself with guaranteed authenticity, greater security for online payments and added security against fraud. pic.twitter.com/t9K3TiGTad
— State Bank of India (@TheOfficialSBI) November 30, 2019
ಮಾರ್ಚ್ 2018ರ ಎಣಿಕೆಯಂತೆ ಬ್ಯಾಂಕಿನಿಂದ 39.50 ಕೋಟಿ ಡೆಬಿಟ್ ಕಾರ್ಡ್ ನೀಡಲಾಗಿದೆ. ಈ ಪೈಕಿ 26 ಕೋಟಿ ಕಾರ್ಡ್ ಗಳು ಸಕ್ರಿಯವಾಗಿವೆ. ಡೆಬಿಟ್ ಕಾರ್ಡ್ ಮಾರುಕಟ್ಟೆ ಪೈಕಿ ಎಸ್ಬಿಐ ಶೇ 32.3ರಷ್ಟು ಪಾಲು ಹೊಂದಿದೆ.

ಹಣದ ವಿಥ್ ಡ್ರಾ ಮಿತಿ ಬದಲಾವಣೆ ಮಾಡಲಾಗಿದೆ.
ಹಣದ ವಿಥ್ ಡ್ರಾ ಮಿತಿ(ಅಕ್ಟೋಬರ್ 31ರ ಗಡುವು ಆದೇಶ) ಕ್ಲಾಸಿಕ್ ಹಾಗೂ ಮಾಸ್ಟರ್ ಕಾರ್ಡ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಮಿಕ್ಕ ಕಾರ್ಡ್ ಗಳಿಗೆ ಅನ್ವಯವಾಗುವುದಿಲ್ಲ. ಆದರೆ, ಕ್ಲಾಸಿಕ್ ಡೆಬಿಟ್ ಕಾರ್ಡ್ ಗಳನ್ನು ಉಚಿತವಾಗಿ ಅಪ್ ಗ್ರೇಡ್ ಮಾಡಿಕೊಳ್ಳಬಹುದು. ಡೆಬಿಟ್ ಕಾರ್ಡ್ ಗಳನ್ನು ಇಎಂವಿ ಚಿಪ್ ಹಾಗೂ ಪಿನ್ ಡೆಬಿಟ್ ಕಾರ್ಡ್ ಆಗಿ ಬದಲಾಯಿಸಿಕೊಂಡು ಹೆಚ್ಚಿನ ಸುರಕ್ಷತೆ ಹೊಂದಬಹುದು. ಈ ರೀತಿ ಮ್ಯಾಗ್ನೆಟಿಕ್ ಸ್ಟ್ರಿಪ್ ಎಟಿಎಂ ಕಾರ್ಡ್ ಗಳನ್ನು ಇಎಂವಿ ಚಿಪ್ ಅಂಡ್ ಪಿನ್ ಕಾರ್ಡ್ ಆಗಿ ಬದಲಾಯಿಸಲು ಡಿಸೆಂಬರ್ 31 ಡೆಡ್ ಲೈನ್ ನೀಡಿ ಆರ್ ಬಿಐ ಸೂಚನೆ ನೀಡಿದೆ.

ಎಸ್.ಬಿ.ಐ. Buddy ಮೊಬೈಲ್ ವ್ಯಾಲೆಟ್ ಇನ್ನಿಲ್ಲ
ವೆಂಬರ್ 1ರಿಂದ ತನ್ನ ಎಸ್.ಬಿ.ಐ. Buddy ಮೊಬೈಲ್ ವ್ಯಾಲೆಟ್ ಸೇವೆ ಮುಚ್ಚುತ್ತಿದೆ. ಅದರ ಬದಲು ಈಗಾಗಲೇ ಚಲಾವಣೆಯಲ್ಲಿರುವ ಯುನೋ ವ್ಯಾಲೆಟ್ ಅನ್ನು ಬಳಕೆಗೆ ಪ್ರೋತ್ಸಾಹಿಸುತ್ತದೆ. ಹಾಗೆ ನೋಡಿದರೆ ಜೂನ್ ತಿಂಗಳ ಬಳಿಕ buddy ವ್ಯಾಲೆಟ್ ಸೇವೆ ತಾತ್ಕಲಿಕವಾಗಿ ಸ್ಥಗಿತಗೊಂಡಿತ್ತು. ಎಸ್ಬಿಐ ಮೊಬೈಲ್ ಬ್ಯಾಂಕಿಂಗ್ ಇನ್ನಷ್ಟು ಸೌಲಭ್ಯ ಒದಗಿಸಲು ಮುಂದಾಗಿದೆ.

ಕೆವೈಸಿ ಜತೆ ಮೊಬೈಲ್ ಸಂಖ್ಯೆ ನೋಂದಣಿ ಕಡ್ಡಾಯ
ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನ ವಿವಿಧ ಸೇವೆಗಳೊಡನೆ ನೋಂದಾಯಿಸಬೇಕಿದೆ. ಕೆವೈಸಿ ಜತೆ ಮೊಬೈಲ್ ಸಂಖ್ಯೆ ನೀಡಿದ್ದರೂ, ಇನ್ನೊಮ್ಮೆ ನಿಮ್ಮ ಸಮೀಪದ ಬ್ಯಾಂಕಿಗೆ ಅಥವಾ ನಿಮ್ಮ ಖಾತೆ ಇರುವ ಬ್ಯಾಂಕಿಗೆ ತೆರಳಿ ನಿಮ್ಮ ಅಧಿಕೃತ, ಚಾಲನೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿಸಿ. ಇಲ್ಲದಿದ್ದರೆ ಡಿಸೆಂಬರ್ 1ರಿಂದ ಇಂಟರ್ ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಡಿಸೆಂಬರ್ 01ರಿಂದ ಈ ಸೇವೆ ಪಡೆಯಬೇಕಾದರೆ, ಸಮೀಪದ ಬ್ಯಾಂಕಿಗೆ ತೆರಳಿ ನಂಬರ್ ಜೋಡಣೆ ಮಾಡಿಸಿಕೊಳ್ಳಿ

ಹೊಸ ಡೆಬಿಟ್ ಕಾರ್ಡ್ ಪಡೆಯುವುದು ಹೇಗೆ?
ಗ್ರಾಹಕರು ಬ್ಯಾಂಕಿಗೆ ತೆರಳಿ ಮ್ಯಾಗ್ ಸ್ಟ್ರಿಪ್ ಕಾರ್ಡ್(ಡೆಬಿಟ್ ಕಾರ್ಡ್) ಬದಲಾಯಿಸಿಕೊಳ್ಳಿ ಹೊಸ ಇಎಂವಿ( ಯುರೋಪೇ,ಮಾಸ್ಟರ್ ಕಾರ್ಡ್, ವೀಸಾ) ಕಾರ್ಡ್ ಪಡೆಯಲು ಸೂಚಿಸಲಾಗಿದೆ.
ಯೋನೋ ಆಪ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಸಮೀಪದ ಬ್ರ್ಯಾಂಚಿಗೆ ತೆರಳಿ ಕಾರ್ಡ್ ಬದಲಾಯಿಸಿಕೊಳ್ಳಬಹುದು. ಮ್ಯಾಗ್ ಸ್ಟ್ರಿಪ್ ಕಾರ್ಡ್ ಬದಲಾವಣೆ ಉಚಿತವಾಗಿದೆ. ಇಂಟರ್ನೆಟ್ ಬ್ಯಾಂಕ್ ಅಥವಾ ಸಮೀಪದ ಶಾಖೆಯಲ್ಲಿ ಕಾರ್ಡ್ ಬದಲಾವಣೆಗೆ ಅರ್ಜಿ ಹಾಕಬಹುದು. ಇದಕ್ಕೂ ಮುನ್ನ ಕಾರ್ಡ್ ನಲ್ಲಿರುವ ವಿಳಾಸದಲ್ಲಿ ಬದಲಾವಣೆ ಇದ್ದರೆ ಮೊದಲು ವಿಳಾಸ ಬದಲಾಯಿಸಿ ನಂತರ ಹೊಸ ಕಾರ್ಡಿಗೆ ಅರ್ಜಿ ಹಾಕಬೇಕಾಗುತ್ತದೆ.
ಎಸ್ಬಿಐ ಗ್ಲೋಬಲ್ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್ ಮಿತಿ : 50,000 ರು ಪ್ರತಿದಿನ ಎಸ್ಬಿಐ ಪ್ಲಾಟಿನಂ ಗ್ಲೋಬಲ್ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್ ಮಿತಿ : 100,000ರು ಪ್ರತಿದಿನ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications