ಬಿಗ್ ಡೀಲ್ : ವೋಡಾಫೋನ್ ಜತೆಗೆ ಐಡಿಯಾ ಸೆಲ್ಯುಲಾರ್ ವಿಲೀನ

Posted By:
Subscribe to Oneindia Kannada

ಲಂಡನ್, ಜನವರಿ 30: ಐಡಿಯಾ ಸೆಲ್ಯುಲಾರ್ ಸಂಸ್ಥೆ ಜತೆಗಿನ ವಿಲೀನ ಪ್ರಕ್ರಿಯೆ ಮಾತುಕತೆ ಬಗ್ಗೆ ಬಂದಿರುವ ಸುದ್ದಿ ನಿಜ ಎಂದು ವೋಡಾಫೋನ್ ಸಂಸ್ಥೆ ಸೋಮವಾರದಂದು ಲಂಡನ್ ಷೇರುಪೇಟೆಗೆ ಮಾಹಿತಿ ನೀಡಿದೆ. ಈ ವಿಲೀನ ಪ್ರಕ್ರಿಯೆ ಮುಕ್ತಾಯವಾದ ಬಳಿಕ ವೊಡಾಫೋನ್ ಭಾರತದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಎನಿಸಲಿದೆ.

ಭಾರತದ ಸುಮಾರು 37 ಬಿಲಿಯನ್ ಡಾಲರ್ ಟೆಲಿಕಾಂ ಸೇವಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಲಂಡನ್ ಮೂಲದ ವೊಡಾಫೋನ್ ಸಂಸ್ಥೆ ಮಹತ್ವ ಹೆಜ್ಜೆ ಇಟ್ಟಿದೆ. ಆದಿತ್ಯಾ ಬಿರ್ಲಾ ಸಮೂಹದ ಐಡಿಯಾ ಸೆಲ್ಯುಲಾರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ.

Vodafone confirms merger talks with Idea Cellular

ಈ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ 23ರಷ್ಟು ಪಾಲು ಹೊಂದಿರುವ ವೊಡಾಫೋನ್ ಹಾಗೂ ಶೇ 19ರಷ್ಟು ಪಾಲು ಹೊಂದಿರುವ ಐಡಿಯಾ ಒಂದಾಗಲಿದೆ. ಹೀಗಾಗಿ, ವೊಡಾಫೋನ್ ಮಾರುಕಟ್ಟೆಯಲ್ಲಿ ಶೇ 43ರಷ್ಟು ಪಾಲು ಹೊಂದಿ ಅಗ್ರಸ್ಥಾನಕ್ಕೇರಲಿದೆ.ಸದ್ಯ ಶೇ 33ರಷ್ಟು ಪಾಲುಹೊಂದಿರುವ ಭಾರ್ತಿ ಏರ್ ಟೆಲ್ ಲಿಮಿಟೆಡ್ ಸಂಸ್ಥೆ ಅಗ್ರಸ್ಥಾನದಲ್ಲಿದೆ.

ರಿಲಯನ್ಸ್ ಜಿಯೋ ಉಚಿತ ಕರೆ ಹಾಗೂ ಡಾಟಾ ಸೇವೆಯನ್ನು ಮಾರ್ಚ್ 2017ರ ತನಕ ವಿಸ್ತರಿಸಿದ ಬಳಿಕ ಇತರೆ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. [ವೊಡಾಫೋನ್ ನೀಡಿದ ಪತ್ರಿಕಾ ಪ್ರಕಟಣೆ ಇಲ್ಲಿದೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vodafone Group Plc has in a statement informed the London Stock Exchange that it is in talks with Idea Cellular Ltd about a potential merger of the two companies.
Please Wait while comments are loading...