ಜಿಯೋಗೆ ಸೆಡ್ಡು ಹೊಡೆಯಲು ಎರಡು ಪ್ಲಾನ್ ಹೊರಹಾಕಿದ ವೋಡಾಫೋನ್

ಬೆಂಗಳೂರು, ನವೆಂಬರ್ 16: ರಿಲಯನ್ಸ್ ಜಿಯೋ ನೀಡುತ್ತಿರುವ 399 ರು ಹಾಗೂ 459 ರು ಪ್ಲಾನ್ ಗೆ ಪೈಪೋಟಿ ನೀಡಲು ವೋಡಾಫೋನ್ ಕೂಡಾ ಎರಡು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ವೋಡಾಫೋನ್ ಸದ್ಯ 458 ಹಾಗೂ 509 ರೂಪಾಯಿಯ ಆಕರ್ಷಕ ಪ್ಲಾನ್ ಶುರುಮಾಡಿದೆ.

ವೋಡಾಫೋನ್ 458 ರೂಪಾಯಿ ಪ್ಲಾನ್ ನಲ್ಲಿ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ, ಉಚಿತ ರೋಮಿಂಗ್, ಪ್ರತಿದಿನ 100 ಎಸ್ಎಂಎಂಗಳನ್ನು ಗ್ರಾಹಕರು ಪಡೆಯಬಹುದು. ಇದಲ್ಲದೆ ಪ್ರತಿದಿನ 1 ಜಿಬಿ ಡೇಟಾ ಸಿಗಲಿದ್ದು, ಈ ಪ್ಲಾನ್ 70 ದಿನಗಳ ವ್ಯಾಲಿಡಿಟಿ ಹೊಂದಿದೆ.

Vodafone announces Rs 509, Rs 458 plans with unlimited calling

ವೋಡಾಫೋನ್ ನ 509 ಯೋಜನೆಯಲ್ಲಿ ಕೂಡ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ, ಉಚಿತ ರೋಮಿಂಗ್, ಪ್ರತಿದಿನ 100 ಎಸ್ಎಂಎಸ್ ಗಳ ಜೊತೆಗೆ 1 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನಿನ ವ್ಯಾಲಿಡಿಟಿ 84 ದಿನಗಳ ತನಕ ಇದೆ. ಆದರೆ, ಎರಡು ಪ್ಲಾನ್ ಗಳ ಅನಿಯಮಿತ ಕರೆಗಳಿಗೆ ಕೆಲವು ಷರತ್ತು ವಿಧಿಸಲಾಗಿದೆ. ಪ್ರತಿದಿನ 250 ನಿಮಿಷ ಹಾಗೂ ವಾರಕ್ಕೆ ಸಾವಿರ ನಿಮಿಷ ಮಾತ್ರ ಉಚಿತ ಕರೆ ಮಾಡಬಹುದಾಗಿದೆ. ಇದಕ್ಕಿಂತ ಹೆಚ್ಚು ಸಮಯ ಮಾತನಾಡಿದ್ರೆ ಹಣ ಕಟ್ ಆಗಲಿದೆ.

ಈ ಯೋಜನೆಗಳಲ್ಲದೆ ವೋಡಾಫೋನ್ 399 ರು ಗಳ 6 ತಿಂಗಳ ಅವಧಿಯ ಯೋಜನೆಯನ್ನು ಅಕ್ಟೋಬರ್ ನಲ್ಲಿ ಪರಿಚಯಿಸಿತ್ತು. 90 ಜಿಬಿಗಳ 4ಜಿ ಡೇಟಾ, ಪ್ರತಿದಿನ 1ಜಿಬಿ ಡೇಟಾದಂತೆ ಸಿಗುವ ಪ್ಲಾನ್ ತಕ್ಕಮಟ್ಟಿನ ಯಶಸ್ಸು ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+