ಇನ್ಫೋಸಿಸ್ ಫೌಂಡೇಷನ್ ತೊರೆದ ವಿಶಾಲ್ ಸಿಕ್ಕಾ ಪತ್ನಿ ವಂದನಾ
ವಿಶಾಲ್ ಸಿಕ್ಕಾ ಇನ್ಫೋಸಿಸ್ ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ತ್ಯಜಿಸಿದ ನಂತರ, ಇದೀಗ ಅವರ ಪತ್ನಿ ವಂದನಾ ಸಿಕ್ಕಾ ಇನ್ಫೋಸಿಸ್ ಫೌಂಡೇಷನ್ ನ ಯುಎಸ್ ಎ ಮುಖ್ಯಸ್ಥೆ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಅಂದಹಾಗೆ ಕಂಪೆನಿಯ ಸಮಾಜ ಸೇವಾ ಕಾರ್ಯಕ್ಕೆ ಮೀಸಲಾಗಿರುವಂಥದ್ದು ಇನ್ಫೋಸಿಸ್ ಫೌಂಡೇಷನ್.
Recommended Video

"ಇನ್ಫೋಸಿಸ್ ಫೌಂಡೇಷನ್ ಯುಎಸ್ ಎ ಅಧ್ಯಕ್ಷೆ ಸ್ಥಾನದಿಂದ ಹೊರನಡೆಯಲು ನಿರ್ಧರಿಸಿದ್ದೇನೆ. ಆದ್ದರಿಂದ ಈ ಇಮೇಲ್ ಬರೆಯುತ್ತಿದ್ದೇನೆ. ಆದರೆ ನಮಗೆ ಗೊತ್ತಿದೆ, ಒಬ್ಬ ವ್ಯಕ್ತಿಯ ಘನವಾದ ಪ್ರೀತಿ ಯಾವುದೇ ಒಂದು ಸಂಸ್ಥೆಗೆ ಸೀಮಿತ ಆಗಿರುವುದಿಲ್ಲ. ಆದರೆ ಇದೊಂದು ತಾತ್ಕಾಲಿಕ ಬಿಡುವು" ಎಂದು ರಾಜೀನಾಮೆ ಇಮೇಲ್ ನಲ್ಲಿ ವಂದನಾ ತಿಳಿಸಿದ್ದಾರೆ.

ಇದು ಅಚ್ಚರಿಯ ಬೆಳವಣಿಗೆ ಆಗಿದೆ. ಈ ತಿಂಗಳ ಆರಂಭದಲ್ಲಿ ವಿಶಾಲ್ ಸಿಕ್ಕಾ ಇನ್ಫೋಸಿಸ್ ತ್ಯಜಿಸಿದ್ದರು. ಇಂಥ ನಿರ್ಧಾರದ ಹಿಂದೆ ನಾರಾಯಣಮೂರ್ತಿ ಅವರ ಆರೋಪಗಳು ಕೆಲಸ ಮಾಡಿವೆ ಎಂದು ಆಡಳಿತ ಮಂಡಳಿ ಹಾಗೂ ವಿಶಾಲ್ ಸಿಕ್ಕಾ ಅವರ ಆಕ್ಷೇಪವಾಗಿತ್ತು.
ಈ ಮಧ್ಯೆ ನಂದನ್ ನಿಲೇಕಣಿ ಅವರನ್ನು ನಾನ್ ಎಕ್ಸ್ ಕ್ಯೂಟಿವ್ ಚೇರ್ ಮನ್ ಆಗಿ ಇನ್ಫೋಸಿಸ್ ಗೆ ನೇಮಕ ಮಾಡಲಾಗಿದೆ. ಹೊಸ ಸಿಇಒಗೆ ಹುಡುಕಾಟ ಮುಂದುವರಿದಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications