2018ರ ಏಪ್ರಿಲ್ವರೆಗೆ ಮಲ್ಯ ಆಸ್ತಿ ಬಳಸುವಂತಿಲ್ಲ!
ಲಂಡನ್, ಡಿಸೆಂಬರ್ 15: ಭಾರತದಲ್ಲಿ 13ಕ್ಕೂ ಅಧಿಕ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ 9 ಸಾವಿರ ಕೋಟಿ ರು ಗಳಿಗೂ ಅಧಿಕ ಸಾಲ ಮಾಡಿಕೊಂಡು ಲಂಡನ್ನಿಗೆ ಹಾರಿದ್ದ ಮಲ್ಯಗೆ ಅಲ್ಲೂ ಕೂಡಾ ನೆಮ್ಮದಿ ಸಿಕ್ಕಿಲ್ಲ. ಯುಕೆಯಲ್ಲಿರುವ ಆಸ್ತಿಯನ್ನು ಬಳಸದಂತೆ, ಪರಭಾರೆ ಮಾಡದಂತೆ ಅಲ್ಲಿನ ಹೈಕೋರ್ಟ್ ಆದೇಶಿಸಿದೆ.
ಬ್ರಿಟನ್ನಲ್ಲಿ ಹೊಂದಿರುವ ಆಸ್ತಿಗಳನ್ನು 2018ರ ಏಪ್ರಿಲ್ವರೆಗೆ ತಡೆಹಿಡಿಯಲಾಗಿದೆ. ಮಲ್ಯ ಅವರಿಗೆ ವಾರಕ್ಕೆ ಐದು ಸಾವಿರ ಪೌಂಡ್ ಭತ್ಯೆ ನೀಡಲು ಅನುಮತಿಯನ್ನು ಕೋರ್ಟ್ ಕೊಟ್ಟಿದೆ.

ವಿಚಾರಣೆ ಮುಂದಕ್ಕೆ : 2018ರ ಏಪ್ರಿಲ್ನಲ್ಲಿ ಅರ್ಜಿ ವಿಚಾರಣೆ ಆರಂಭಿಸಲಾಗುತ್ತದೆ. ಅಲ್ಲಿ ತನಕ ಆಸ್ತಿಯನ್ನು ಪರಭಾರೆ ಮಾಡಬಾರದು, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮಲ್ಯ ಅವರಿಗೆ ಹೈಕೋರ್ಟ್ ಷರತ್ತು ವಿಧಿಸಿದೆ.
ಈ ನಡುವೆ ವೆಸ್ಟ್ಮಿನ್ಸ್ಟರ್ ನ್ಯಾಯಾಲಯದಲ್ಲಿ ಡಿಸೆಂಬರ್ 4 ರಿಂದ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಅರ್ಜಿ ವಿಚಾರಣೆ ನಡೆದಿದೆ. ವಿಚಾರಣೆ ಡಿಸೆಂಬರ್ 20ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications