ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಐಸಿಐ -ವಿಡಿಯೋಕಾನ್ ಕೇಸ್: ದೀಪಕ್ ಜಾಮೀನು ಅರ್ಜಿ ವಜಾ

|
Google Oneindia Kannada News

ಮುಂಬೈ, ಸೆ. 7: ಸರಿ ಸುಮಾರು 3,250 ಕೋಟಿ ರು ಮೌಲ್ಯದ ಐಸಿಐಸಿಐ -ವಿಡಿಯೋಕಾನ್ ಸಾಲ ಅವ್ಯವಹಾರ ಪ್ರಕರಣದ ಆರೋಪಿ ದೀಪಕ್ ಕೊಚ್ಚಾರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯವು ಗುರುವಾರದಂದು ರದ್ದುಗೊಳಿಸಿದೆ.

ಐಸಿಐಸಿಐನ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೆಪ್ಟೆಂಬರ್ 8ರಂದು ಬಂಧಿಸಿದ್ದರು.

ಐಸಿಐಸಿಐ ಬ್ಯಾಂಕ್ 2,810 ಕೋಟಿ ಎನ್ ಪಿಎ ಕೇಸಿನ ಥ್ರಿಲ್ಲಿಂಗ್ ಡೀಟೇಲ್ಸ್!ಐಸಿಐಸಿಐ ಬ್ಯಾಂಕ್ 2,810 ಕೋಟಿ ಎನ್ ಪಿಎ ಕೇಸಿನ ಥ್ರಿಲ್ಲಿಂಗ್ ಡೀಟೇಲ್ಸ್!

ಈ ಪ್ರಕರಣದ ಪ್ರಮುಖ ಆರೋಪಿಗಳಾದ ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಹಾಗೂ ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ವಿಚಾರಣೆ ಇನ್ನು ಜಾರಿಯಲ್ಲಿದೆ.

Videocon-ICICI bank case: Deepak Kochhar bail plea rejected

ಪ್ರಕರಣ ದಾಖಲಿಸಿಕೊಂಡ 90 ದಿನಗಳಲ್ಲಿ ಜಾರಿ ನಿರ್ದೇಶನಾಲಾಯವು ದೋಷಾರೋಪಣ ಪಟ್ಟಿ ಸಲ್ಲಿಸಿಲ್ಲ ಎಂದು ಆರೋಪಿಸಿ, ಜಾಮೀನು ಜೋರಿ ದೀಪಕ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪಿಎಂಎಲ್ ಎ ವಿಶೇಷ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿ ಮುಂದಿನ ವಿಚಾರಣೆಯನ್ನು ನವೆಂಬರ್ 23ಕ್ಕೆ ಮುಂದೂಡಿದೆ.

ಬ್ಯಾಂಕ್ ನ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಕಾನ್ ಗ್ರೂಪ್ ಗೆ ಸುಮಾರು 3,250 ಕೋಟಿರೂ.ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಅವ್ಯವಹಾರದ ಹಗರಣ ಇದಾಗಿದೆ. ಐಸಿಐಸಿಐನ ಮಾಜಿ ಎಂಡಿ ಚಂದಾ ಕೊಚ್ಚಾರ್ ಹಾಗೂ ಕುಟುಂಬಕ್ಕೆ ಕಿಕ್ ಬ್ಯಾಕ್ ರೂಪದಲ್ಲಿ 500 ಕೋಟಿ ರು ಗೂ ಅಧಿಕ ಮೊತ್ತ ಸಿಕ್ಕಿದೆ. ಇದು ಸದ್ಯದ ಲೆಕ್ಕಾಚಾರವಾಗಿದ್ದು, ಕಿಕ್ ಬ್ಯಾಕ್ ಮೊತ್ತ ಇನ್ನು ಅಧಿಕವಾಗಿರುವ ಸಾಧ್ಯತೆಯಿದೆ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.

ಧೂತ್ ಹಾಗೂ ಇದೇ ಚಂದಾ ಕೊಚ್ಚರ್ ಪತಿ ದೀಪಕ್ ಕೊಚ್ಚರ್ ಮತ್ತಿಬ್ಬರು ಸಂಬಂಧಿಕರ ಜತೆ ಸೇರಿ 2008ರಲ್ಲಿ ಆರಂಭಿಸಿದ್ದ ಕಂಪೆನಿ. ಆ ನಂತರ ಈ ಕಂಪೆನಿಯ ಮಾಲೀಕತ್ವವನ್ನು ಕೊಚ್ಚರ್ ಗೆ ಸೇರಿದ ಟ್ರಸ್ಟ್ ಗೆ ಹಸ್ತಾಂತರಿಸಲಾಗಿದೆ. ಈ ಪ್ರಕ್ರಿಯೆ ನಡೆಯುವ ಆರು ತಿಂಗಳ ಮುಂಚೆ ಐಸಿಐಸಿಐ ಬ್ಯಾಂಕ್ ನಿಂದ ವಿಡಿಯೋಕಾನ್ ಗ್ರೂಪ್ ಗೆ 3,250 ಕೋಟಿ ರುಪಾಯಿ ಸಾಲ ಮಂಜೂರಾಗಿದ್ದು, 2017ರಲ್ಲಿ ಆ ಸಾಲದ ಪೈಕಿ ಹತ್ತಿರ ಹತ್ತಿರ 2,810 ಕೋಟಿ ರುಪಾಯಿಯನ್ನು ನಾನ್ ಪರ್ಫಾಮಿಂಗ್ ಅಸೆಟ್ (ಎನ್ ಪಿಎ) ಎಂದು ಘೋಷಿಸಿದ್ದು, ಮರು ಪಾವತಿಸಿಲ್ಲ ಎಂದು ಆರೋಪಿಸಲಾಗಿತ್ತು.

English summary
Videocon-ICICI bank case: Special PMLA Court rejected the bail plea of businessman Deepak Kochhar who was arrested by ED.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X