Get Updates
Get notified of breaking news, exclusive insights, and must-see stories!

ವಿ ಡಯಲ್ಸ್- ಅಪ್: ಅತಿವೇಗದ ಮೊಬೈಲ್ ನೆಟ್‍ವರ್ಕ್‍ಗಾಗಿ ಓಕ್ಲಾ ಸ್ಪೀಡ್‍ಟೆಸ್ಟ್ ಪ್ರಶಸ್ತಿ

ಸ್ಥಿರ ಬ್ರಾಡ್‍ಬ್ಯಾಂಡ್ ಮತ್ತು ಮೊಬೈಲ್ ನೆಟ್‍ವರ್ಕ್ ಪರೀಕ್ಷಾ ಅಪ್ಲಿಕೇಶನ್‍ಗಳಲ್ಲಿ ಜಾಗತಿಕ ನಾಯಕ ಎನಿಸಿರುವ ಓಕ್ಲಾ, ಸ್ಪೀಡ್‍ಟೆಸ್ಟ್ ಇಂಟೆಲಿಜೆನ್ಸ್‍ನಲ್ಲಿ ವಿ ಸಂಸ್ಥೆಯನ್ನು 2021ರ ಮೊದಲ ಎರಡು ತ್ರೈಮಾಸಿಕ ವಧಿಯಲ್ಲಿ ಭಾರತದ ಅತಿವೇಗದ ಮೊಬೈಲ್ ನೆಟ್‍ವರ್ಕ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಗಳಿಸಿದ ಭಾರತದ ಅಗ್ರಗಣ್ಯ ಟೆಲಿಕಾಂ ಸೇವಾ ಸಂಸ್ಥೆಯಾದ ವಿ, ತನ್ನ #ಸ್ಪೀಡ್‍ಸೇಬಧೋ ಅಭಿಯಾನದ ಮುಂದಿನ ಹಂತವನ್ನು ಬಿಡುಗಡೆ ಮಾಡಿದೆ.

ಪ್ರಶಸ್ತಿಯ ಕುರಿತು ಪ್ರತಿಕ್ರಿಯಿಸಿದ ಓಕ್ಲಾ ಸಿಇಒ ಡೌಗ್ ಸಟಲ್ಸ್, "ಓಕ್ಲಾ ಪ್ರಸ್ತುತಪಡಿಸಿದ ಸ್ಪೀಡ್‍ಟೆಸ್ಟ್ ಪ್ರಶಸ್ತಿಗಳನ್ನು ಮಾರುಕಟ್ಟೆಯಲ್ಲಿ ಅಸಾಧಾರಣ ಇಂಟರ್ನೆಟ್ ಕಾರ್ಯಕ್ಷಮತೆ ಮತ್ತು ವ್ಯಾಪ್ತಿಯನ್ನು ಒದಗಿಸಿದ ನೆಟ್‍ವರ್ಕ್ ಆಪರೇಟರ್‍ಗಳ ಗಣ್ಯ ನಿಯೋಗಕ್ಕಾಗಿ ಕಾಯ್ದಿರಿಸಲಾಗಿದೆ. ಭಾರತದಲ್ಲಿ ಅತಿ ವೇಗದ ಮೊಬೈಲ್ ನೆಟ್‍ವರ್ಕ್‍ಗಾಗಿ ವಿಗೆ ಈ ಪ್ರಶಸ್ತಿಯನ್ನು ನೀಡುವುದು ನಮಗೆ ಸಂತಸ ತಂದಿದೆ. ಈ ಗೌರವವು 2021ರ ಮೊದಲ ಎರಡು ತ್ರೈಮಾಸಿಕ ಅವಧಿಯಲ್ಲಿ ಅವರ ಅಸಾಧಾರಣ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ, ಇದು ಸ್ಪೀಡ್‍ಟೆಸ್ಟ್‍ನೊಂದಿಗೆ ತೆಗೆದುಕೊಳ್ಳಲಾದ ಗ್ರಾಹಕ-ಪ್ರಾರಂಭಿತ ಪರೀಕ್ಷೆಗಳ ಓಕ್ಲಾಸ್‍ನ ಕಠಿಣ ವಿಶ್ಲೇಷಣೆಯನ್ನು ಆಧರಿಸಿದೆ" ಎಂದು ಹೇಳಿದರು.

ಕೋವಿಡ್-19 ನಂತರದ ಜಗತ್ತಿನಲ್ಲಿ, ವ್ಯಾಪಾರಗಳು ಮತ್ತು ವ್ಯಕ್ತಿಗಳು ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಪರ್ಕಕ್ಕಾಗಿ ಟೆಲಿಕಾಂ ಆಪರೇಟರ್‍ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಪ್ರಪಂಚವು ಡಿಜಿಟಲ್ ಕಡೆಗೆ ಬದಲಾಗಿದೆ ಮತ್ತು ನೆಟ್‍ವರ್ಕ್ ವೇಗವು ಅತ್ಯಂತ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ. ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜೀವನ ಮತ್ತು ಅಗತ್ಯತೆಗಳೊಂದಿಗೆ, ಇತ್ತೀಚಿನ #ಸ್ಪೀಡ್‍ಸೇಬಧೊ ಅಭಿಯಾನವು ಓಕ್ಲಾದ ಮೌಲ್ಯೀಕರಣವನ್ನು ಗಿಗಾನೆಟ್‍ನಿಂದ ಚಾಲಿತವಾದ ವಿ ಯನ್ನು ಭಾರತದ ಅತ್ಯಂತ ವೇಗದ ಮೊಬೈಲ್ ನೆಟ್‍ವರ್ಕ್ ಎಂದು ಪುನರುಚ್ಚರಿಸಿದೆ.

ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ವಿ ಅಭಿಯಾನವು ಜನರು ತಮ್ಮ ಕೆಲಸವನ್ನು ವೇಗವಾಗಿ ಮಾಡಲು ಮತ್ತು ಜೀವನದಲ್ಲಿ ಮುಂದೆ ಬರಲು ಅನುವು ಮಾಡಿಕೊಡುವ ಮೂಲಕ ಒಬ್ಬರ ಜೀವನದಲ್ಲಿ ನೆಟ್‍ವರ್ಕ್ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಚಿತ್ರಿಸುವ ವಿವಿಧ ಕಥೆಗಳ ಮೇಲೆ ಕೇಂದ್ರೀಕರಿಸಿದೆ.

ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ವಿ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅವನೀಶ್ ಖೋಸ್ಲಾ, "ಓಕ್ಲಾದಿಂದ ದೃಢೀಕರಿಸಲ್ಪಟ್ಟಂತೆ ವಿ ಅನೇಕ ಭಾಗಗಳಿಗೆ ವೇಗವಾಗಿ 4ಜಿ ಅನುಭವವನ್ನು ನೀಡುತ್ತಿದೆ ಮತ್ತು ಉತ್ತಮ ಅನುಭವವನ್ನು ಒದಗಿಸಲು ನಮ್ಮ ನಿರಂತರ ಪ್ರಯತ್ನಗಳೊಂದಿಗೆ, ಇದು ಈಗ ದೇಶದಲ್ಲೇ ಅತ್ಯಂತ ವೇಗದ ಮೊಬೈಲ್ ನೆಟ್‍ವರ್ಕ್ ಆಗಿದೆ ಎಂದು ಹೇಳಿದರು. ಕಲಿಕೆ ಮತ್ತು ಅಭಿವೃದ್ಧಿ, ಕೆಲಸ, ಮನರಂಜನೆ ಅಥವಾ ಯಾವ ವಿಚಾರದಲ್ಲೇ ಆಗಿರಲಿ ನಮ್ಮ ಗ್ರಾಹಕರು ಡಿಜಿಟಲ್ ಯುಗದಲ್ಲಿ ಅಭಿವೃದ್ಧಿ ಹೊಂದಲು ಅದು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ. ನಮ್ಮ ಇತ್ತೀಚಿನ # ಸ್ಪೀಡ್‍ಸೇಬಧೋ ಅಭಿಯಾನದಲ್ಲಿ ನಾವು ವಿ ಗಿಗಾನೆಟ್‍ನ ಮೂಲಕ ಭಾರತದ ಅತ್ಯಂತ ವೇಗದ ಮೊಬೈಲ್ ನೆಟ್‍ವರ್ಕ್, ಸವಾಲುಗಳನ್ನು ಪರಿಹರಿಸುವ ಮೂಲಕ ಮತ್ತು ಅವಕಾಶಗಳನ್ನು ಅನಾವರಣಗೊಳಿಸುವ ಮೂಲಕ ಗ್ರಾಹಕರಿಗೆ ಕೆಲಸಗಳನ್ನು ತ್ವರಿತವಾಗಿ ಮಾಡಲು ಮತ್ತು ಜೀವನದಲ್ಲಿ ಮುಂದೆ ಬರಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ನಾವು ಕಥೆಗಳನ್ನು ವಿವರಿಸುತ್ತೇವೆ. ಯಾವಾಗ ಮತ್ತು ಎಲ್ಲಿ ವೇಗವಿದೆ, ಒಂದು ಮಾರ್ಗವಿದೆ ಎಂಬುದನ್ನು ಈ ಕಥೆಗಳು ನಿರೂಪಿಸುತ್ತವೆ" ಎಂದು ಬಣ್ಣಿಸಿದರು.

ಅಭಿಯಾನವು 3 ಟಿವಿಸಿಗಳನ್ನು ಒಳಗೊಂಡಿದೆ, ಇದು ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ ಕೆಲವು ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವೇಗವಾದ ಮೊಬೈಲ್ ನೆಟ್‍ವರ್ಕ್‍ನ ವಿ ಗಿಗಾನೆಟ್‍ನ ಶಕ್ತಿಯನ್ನು ಪ್ರದರ್ಶಿಸುತ್ತದೆ.

ಮೊದಲ ಟಿವಿಸಿ ಮದುವೆಯ ಯೋಜಕ ಮತ್ತು ಅವಳ ಇಂಟರ್ನ್‍ನ ಮೇಲೆ ಕೇಂದ್ರೀಕರಿಸುತ್ತದೆ, ಅವರು ಕೊನೆಯ ನಿಮಿಷದ ಬದಲಾವಣೆಗಳಲ್ಲಿ ಕೆಲಸ ಮಾಡಬೇಕಾಗುವ ಅಂಶವನ್ನು ಬಣ್ಣಿಸುತ್ತದೆ ಹಾಗೂ ಸಮಯಕ್ಕೆ ಸರಿಯಾಗಿ ಅವರು ಅಲಂಕಾರವನ್ನು ಪೂರ್ಣಗೊಳಿಸುತ್ತಾರೆ. ಭಾರತದ ಅತಿ ವೇಗದ ಮೊಬೈಲ್ ನೆಟ್‍ವರ್ಕ್ ಆಗಿರುವ ವಿ ಸಹಾಯದಿಂದ ಆಕೆ ಮನಬಂದಂತೆ ಮಾಡಲು ಸಾಧ್ಯವಾಗುತ್ತದೆ.
ಪ್ರಚಾರದ ಸಂದರ್ಭದಲ್ಲಿ ಇತರ 2 ಟಿವಿಸಿಗಳನ್ನು ಪ್ರಾರಂಭಿಸಲಾಗುವುದು.

Vi Dials-Up #SpeedSeBadho Campaign with the Ookla Speedtest Award™ for India’s Fastest Mobile Network

ಹೆಚ್ಚಿನ ಗೋಚರತೆಯ 360-ಡಿಗ್ರಿ ಪ್ರಚಾರವು ಒಗಿಲ್ವಿಯಿಂದ ಪರಿಕಲ್ಪನೆಗೊಂಡಿದೆ. ಗ್ರಾಹಕರು ಉತ್ಕೃಷ್ಟತೆಯನ್ನು ಸಾಧಿಸಲು ವಿ ಯ ನಿರಂತರ ಬದ್ಧತೆಯನ್ನು ವಿವರಿಸುತ್ತದೆ ಮತ್ತು ಟಿವಿ, ಓಓಎಚ್ ಮತ್ತು ಡಿಜಿಟಲ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಂಡುಬರುತ್ತದೆ.

ಅಭಿಯಾನದ ಹಿಂದೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಓಗಿಲ್ವಿ ಸೌತ್ ಸಿಇಓ ಕಿರಣ್ ಆಂಟೋನಿ, "ಇದು ನಾವು #ಸ್ಪೀಡ್‍ಸೇಬಾಧೋ ನಲ್ಲಿ ಮಾಡುತ್ತಿರುವ ಮೂರನೇ ಅಭಿಯಾನವಾಗಿದೆ. ಹಿಂದಿನ 2 ಅಭಿಯಾನಗಳು ವಿಭಿನ್ನ ನೋಟ ಮತ್ತು ಭಾವನೆಯನ್ನು ಹೊಂದಿದ್ದವು, ಅಲ್ಲಿ ವಿಯ ನೆಟ್‍ವರ್ಕ್ ಅನ್ನು ಬಳಸಿಕೊಂಡು ಜನರು ಅಭಿವೃದ್ಧಿ ಹೊಂದುತ್ತಿರುವುದನ್ನು ನಾವು ತೋರಿಸಿದ್ದೇವೆ. ಆದ್ದರಿಂದ ಈ ಅಭಿಯಾನದ ವಿಷಯಕ್ಕೆ ಸಂಕ್ಷಿಪ್ತವಾಗಿ ಬಂದಾಗ, ಇತರ 2 ಅಭಿಯಾನಗಳಿಗಿಂತ ವಿಭಿನ್ನವಾಗಿ ಕಾಣುವಂತೆ ಮಾಡುವ ಸವಾಲಾಗಿತ್ತು. 30 ಸೆಕೆಂಡರ್‍ನಲ್ಲಿ ಸುಮಾರು 35 ಶಾಟ್‍ಗಳಿರುವ ಆಸಕ್ತಿದಾಯಕ ವಿಧಾನವನ್ನು ನಾವು ಬಳಸಿದ್ದೇವೆ. ಇದು 30 ಸೆಕೆಂಡುಗಳ ಕಿರುಚಿತ್ರದಂತಿದೆ" ಎಂದು ಹೇಳಿದರು.
ಹತ್ತು ವಾರಗಳ ಅವಧಿಯ ಈ ಅಭಿಯಾನವು 23ನೇ ಅಕ್ಟೋಬರ್ 2021ರಂದು ಐಸಿಸಿ ಪುರುಷರ ಟಿ-20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 12 ಹಂತದ ಪಂದ್ಯಗಳ ಆರಂಭದ ವೇಳೆಗೆ ಆರಂಭವಾಗಿದೆ.
ಗಿಗಾನೆಟ್ ಅನ್ನು 5ಜಿ ಆರ್ಕಿಟೆಕ್ಚರ್‍ನಲ್ಲಿ ನಿರ್ಮಿಸಲಾಗಿದೆ ಮತ್ತು ಇದು ದಾಖಲೆಯ ಸಮಯದಲ್ಲಿ ಪೂರ್ಣಗೊಂಡ ಅತಿದೊಡ್ಡ ನೆಟ್‍ವರ್ಕ್ ಏಕೀಕರಣದ ಫಲಿತಾಂಶವಾಗಿದೆ ಮತ್ತು ವಿಶ್ವದ ಮೊದಲ ರೀತಿಯ ಸ್ಪೆಕ್ಟ್ರಮ್ ಸುಧಾರಣಾ ಕ್ರಮವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+