ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UPI ಪಾವತಿ ಮಿತಿ: ಒಂದೇ ಬಾರಿಗೆ ಎಷ್ಟು ಹಣ ವರ್ಗಾಯಿಸಬಹುದು? ತಿಳಿಯಿರಿ

|
Google Oneindia Kannada News

ಯುಪಿಐ ಅಂದರೆ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಬಳಕೆ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಡಿಜಿಟಲ್ ಪಾವತಿ ಪರಿಹಾರಗಳ ಬೆನ್ನೆಲುಬಾಗಿರುವ ಯುಪಿಐ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (NPCI) ಕಳೆದ ಆಗಸ್ಟ್ ವರದಿಯ ಪ್ರಕಾರ, ದೇಶದಲ್ಲಿ ಮೊದಲ ಬಾರಿಗೆ ಯುಪಿಐ ವಹಿವಾಟುಗಳ ಸಂಖ್ಯೆ 650 ಕೋಟಿಗಳನ್ನು ದಾಟಿದೆ. ಒಂದೇ ವರ್ಷದಲ್ಲಿ ವಹಿವಾಟುಗಳ ಸಂಖ್ಯೆಯಲ್ಲಿ ನೇರವಾಗಿ 85% ಹೆಚ್ಚಳವಾಗಿದೆ.

ವಹಿವಾಟಿನ ಮೌಲ್ಯದಲ್ಲೂ ಗಣನೀಯ ಏರಿಕೆಯಾಗಿದೆ. ಡಿಜಿಟಲ್ ಪಾವತಿಗಳ ಸ್ವೀಕಾರದ ಹೆಚ್ಚಳದೊಂದಿಗೆ ನೀವು UPI ಪಾವತಿಗಳನ್ನು ಸಹ ಮಾಡುತ್ತಿರಬೇಕು. ನಿಮ್ಮ ಬ್ಯಾಂಕ್ ನಿಮ್ಮ ವಹಿವಾಟಿನ ಮೇಲೆ ಮಿತಿಯನ್ನು ಹಾಕುತ್ತದೆ ಎಂದು ನಿಮಗೆ ತಿಳಿದಿದೆಯೇ? ನೀವು ಯುಪಿಐಯೊಂದಿಗೆ ಮಿತಿಯವರೆಗೆ ಮಾತ್ರ ಪಾವತಿಸಬಹುದು.

ಪ್ರತಿದಿನ 200 ಮಿಲಿಯನ್‌ಗಿಂತಲೂ ಹೆಚ್ಚು ಯುಪಿಐ(UPI) ವಹಿವಾಟುಗಳು ನಡೆಯುತ್ತವೆ. ಪ್ರಸ್ತುತ ಯುಪಿಐ ಪೇಮೆಂಟ್‌ ಅತ್ಯಂತ ಸುಲಭವಾದ ಮತ್ತು ಜನಪ್ರಿಯ ಪಾವತಿ ವಿಧಾನವಾಗಿದೆ. ನೀವು ಕೆಲವೇ ಸೆಕೆಂಡುಗಳಲ್ಲಿ ಎಲ್ಲಿ ಬೇಕಾದರೂ ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು. ಪ್ರತಿದಿನ 200 ಮಿಲಿಯನ್‌ಗಿಂತಲೂ ಹೆಚ್ಚು ಯುಪಿಐ ವಹಿವಾಟುಗಳು ನಡೆಯುತ್ತವೆ ಯುಪಿಐ ಪೇಮೆಂಟ್‌ ಬೆಳವಣಿಗೆಯ ಪ್ರವೃತ್ತಿಯು ಹೆಚ್ಚಾಗುತ್ತಿದ್ದು, ಇದರೊಂದಿಗೆ ಯುಪಿಐಗಳ ವಹಿವಾಟುಗಳನ್ನು ಮಾಡಲು ಮಿತಿಯನ್ನು ಸಹ ನಿಗದಿಪಡಿಸಲಾಗಿದೆ ಎಂದು ತಿಳಿಯುವುದು ಮುಖ್ಯವಾಗಿದೆ.

 ಬೀಮ್‌ ಯುಪಿಐ ಪೇಮಿಂಟ್‌ ಮಿತಿ 1 ಲಕ್ಷ ರೂ.

ಬೀಮ್‌ ಯುಪಿಐ ಪೇಮಿಂಟ್‌ ಮಿತಿ 1 ಲಕ್ಷ ರೂ.

ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಒಂದು ಬಾರಿಗೆ ಯುಪಿಐ ಮೂಲಕ ಗರಿಷ್ಠ 2 ಲಕ್ಷ ರೂಪಾಯಿ ವಹಿವಾಟು ಮಾಡಬಹುದು. BHIMನ UPI ಸಹಾಯದಿಂದ ಬಳಕೆದಾರರು ವರ್ಗಾವಣೆ ಮಾಡಿದರೆ, ಅವರು ಒಂದು ವಹಿವಾಟಿನಲ್ಲಿ ಗರಿಷ್ಠ 1 ಲಕ್ಷ ರೂ. ಪೇಮಿಂಟ್‌ ಮಿತಿ ಆಗಿರುತ್ತದೆ.

ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ನೀವು ಬ್ಯಾಂಕ್ UPI ಸಹಾಯದಿಂದ ದಿನಕ್ಕೆ 10 ಬಾರಿ ಯುಪಿಐ ಮೂಲಕ ಪಾವತಿಗಳನ್ನು ಮಾಡಬಹುದು, ಇದರ ಒಟ್ಟು ವೆಚ್ಚವು 1 ಲಕ್ಷ ರೂಪಾಯಿಗಳನ್ನು ಮೀರುವುದಿಲ್ಲ ಅಂದರೆ ದಿನಕ್ಕೆ 1 ಲಕ್ಷಕ್ಕಿಂತ ಹೆಚ್ಚು ಹಣ ತೆಗೆಯಲು ಸಾಧ್ಯವಾಗುವುದಿಲ್ಲ.
 ಮೂರು ವಿಧದ ಮಿತಿಗಳಿವೆ

ಮೂರು ವಿಧದ ಮಿತಿಗಳಿವೆ

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಎಲ್ಲಾ ಬ್ಯಾಂಕ್‌ಗಳು ತಮ್ಮ ಅನುಕೂಲಕ್ಕೆ ಅನುಗುಣವಾಗಿ UPI ಪಾವತಿಗಳಿಗೆ ಮಿತಿಯನ್ನು ಹೊಂದಿಸಲು ಅವಕಾಶ ನೀಡಿದೆ. ವಿವಿಧ ಬ್ಯಾಂಕ್‌ಗಳಿಗೆ ಈ ಮಿತಿ ವಿಭಿನ್ನವಾಗಿರಬಹುದು. UPI ಪಾವತಿಗೆ ಮುಖ್ಯವಾಗಿ ಮೂರು ವಿಧದ ಮಿತಿಗಳಿವೆ. ಮೊದಲ ಮಿತಿಯು ಒಂದು ದಿನದ ಗರಿಷ್ಠ ವಹಿವಾಟು ಮೌಲ್ಯವಾಗಿದೆ. ಎರಡನೇ ಮಿತಿಯು ಒಂದು ಸಮಯದಲ್ಲಿ ಗರಿಷ್ಠ ಸಂಖ್ಯೆಯ ವಹಿವಾಟುಗಳು ಮತ್ತು ಮೂರನೇ ಮಿತಿಯು ಒಂದು ದಿನದಲ್ಲಿ ಗರಿಷ್ಠ ಸಂಖ್ಯೆಯ ವಹಿವಾಟುಗಳಾಗಿರುತ್ತದೆ.

 ಎಸ್‌ಬಿಐ ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ನ UPI ಮೇಲಿನ ಮಿತಿ ಎಷ್ಟು

ಎಸ್‌ಬಿಐ ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ನ UPI ಮೇಲಿನ ಮಿತಿ ಎಷ್ಟು

ಎಸ್‌ಬಿಐನ ಯುಪಿಐ ವಹಿವಾಟಿನ ಮಿತಿಯಲ್ಲಿ ಹೊಸ ಖಾತೆ ಬಳಕೆದಾರರಿಗೆ 24 ಗಂಟೆಗಳವರೆಗೆ ರೂ 5,000 ಮಿತಿಯನ್ನು ಇರಿಸಲಾಗಿದೆ. ಇದರಲ್ಲಿ ಯುಪಿಐ ವಹಿವಾಟಿನ ಮಿತಿ 1 ಲಕ್ಷ ರೂ. ದೈನಂದಿನ ಮಿತಿಯು 1 ಲಕ್ಷ ರೂ. ಹೊಂದಿದೆ. ಐಸಿಐಸಿಐ ಬ್ಯಾಂಕ್ ತನ್ನ ಬಳಕೆದಾರರಿಗೆ ಯುಪಿಐನ ವಹಿವಾಟಿನ ಮಿತಿಯನ್ನು 10,000 ರೂ. ಪ್ರತಿ ಬಳಕೆದಾರರಿಗೆ ದೈನಂದಿನ ಮಿತಿ 10,000 ರೂ. ಒಂದು ವೇಳೆ ನೀವು Google Pay ಅಪ್ಲಿಕೇಶನ್ ಮೂಲಕ ಪಾವತಿಸುತ್ತಿದ್ದರೆ ಈ ಮಿತಿಯು ನಿಮಗೆ 25,000 ರೂ.ಗೆ ಹೆಚ್ಚಾಗುತ್ತದೆ.

 IPO ಅಪ್ಲಿಕೇಶನ್‌ನಲ್ಲಿ 5 ಲಕ್ಷ ರೂ. ಮಿತಿ

IPO ಅಪ್ಲಿಕೇಶನ್‌ನಲ್ಲಿ 5 ಲಕ್ಷ ರೂ. ಮಿತಿ

ಎಚ್‌ಡಿಎಫ್‌ಸಿ ಗ್ರಾಹಕರು ಒಂದು ದಿನದಲ್ಲಿ 1 ಲಕ್ಷದವರೆಗೆ ಅಥವಾ 10 ವಹಿವಾಟುಗಳವರೆಗಿನ ವಹಿವಾಟುಗಳನ್ನು ಅಧಿಕೃತಗೊಳಿಸಬಹುದು. 10 ವಹಿವಾಟುಗಳ ಮಿತಿಯು ನಿಧಿ ವರ್ಗಾವಣೆಯ ಮೇಲೆ ಮಾತ್ರ ಎಂಬುದನ್ನು ಇಲ್ಲಿ ಗಮನಿಸಿಬೇಕು ನೀವು ಯಾವುದೇ ಬಿಲ್ ಪಾವತಿಗಳನ್ನು ಮಾಡಿದರೆ ಅಥವಾ ವ್ಯಾಪಾರಿ ವಹಿವಾಟುಗಳನ್ನು ಮಾಡಿದರೆ, ಇವುಗಳನ್ನು ಅದರಲ್ಲಿ ಪರಿಗಣಿಸಲಾಗುವುದಿಲ್ಲ. ಹೊಸ ಗ್ರಾಹಕರು ಅಥವಾ ತಮ್ಮ ಸಾಧನ/ಸಿಮ್ ಕಾರ್ಡ್/ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ ಹೊಸ ಯುಪಿಐ ಬಳಕೆದಾರರು ಮೊದಲ 24 ಗಂಟೆಗಳಲ್ಲಿ ರೂ.5,000 ವರೆಗೆ ಮಾತ್ರ ವಹಿವಾಟು ನಡೆಸಬಹುದು. ಐಫೋನ್ ಬಳಕೆದಾರರಿಗೆ ಈ ಮಿತಿಯು 72 ಗಂಟೆಗಳಾಗಿರುತ್ತದೆ. ಇನ್ನು ಯುಪಿಐ ಮೂಲಕ ಐಪಿಒ(IPO) ಅಪ್ಲಿಕೇಶನ್‌ನಲ್ಲಿ ಪ್ರತಿ ವಹಿವಾಟಿಗೆ 5 ಲಕ್ಷ ರೂಪಾಯಿಗಳ ಮಿತಿ ಇದೆ.

English summary
UPI Transaction Limit For SBI, HDFC, ICICI, AXIS Bank & More: Everything You Need To Know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X