ರೈತರ ಆದಾಯ ಹೆಚ್ಚಳಕ್ಕೆ ಕೇಂದ್ರದ ಮಾಸ್ಟರ್ ಪ್ಲಾನ್, ಇಲ್ಲಿದೆ ಸಂಪೂರ್ಣ ಮಾಹಿತಿ... Union Budget 2026
ಅನ್ನದಾತ ರೈತರು ದೇಶದ ಬೆನ್ನೆಲುಬು ಎಂಬ ಬಿರುದು ಪಡೆದಿದ್ದು, ರೈತರು ಇಲ್ಲದೆ ಭಾರತದ ಅಭಿವೃದ್ಧಿ ಅಸಾಧ್ಯ ಎಂಬುದು ಇದರ ಅರ್ಥ. ದೇಶದ ಆರ್ಥಿಕತೆಗೆ ಮೊದಲಿನಿಂದ ಕೂಡ ಇದೇ ಕೃಷಿ ವಲಯ ದೊಡ್ಡ ಕೊಡುಗೆ ನೀಡುತ್ತಾ ಬಂದಿದೆ. ಹೀಗಿದ್ದಾಗ ದೇಶದಲ್ಲಿ ರೈತರ ಆದಾಯವು ಕೂಡ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಾ ಬಂದಿದ್ದು, ಸರ್ಕಾರ ಹಲವು ಕ್ರಮ ಜರುಗಿಸುತ್ತಿದೆ. ಇದೇ ರೀತಿ ಕೇಂದ್ರ ಬಜೆಟ್ 2026 ಕೂಡ ರೈತರಿಗೆ ಭರ್ಜರಿ ಸುದ್ದಿ ನೀಡಿದ್ದು, ರೈತರ ಆದಾಯ ಏರಿಕೆಗೆ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಭಾರತದಲ್ಲಿ ಈಗ ಶೇಕಡಾ 45ಕ್ಕೂ ಹೆಚ್ಚು ಪ್ರಜೆಗಳ ಆದಾಯ ಕೃಷಿಯನ್ನೇ ಅವಲಂಬಿಸಿದ್ದು, ಹೀಗೆ ಕೃಷಿಯಿಂದಲೇ ಕುಟುಂಬ ನಿರ್ವಹಣೆ ನಡೆಯುತ್ತಿದೆ. ಹೀಗಾಗಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ದೇಶದ ಆರ್ಥಿಕತೆಗೆ ಬಲ ತುಂಬುವ ಪ್ರಯತ್ನ ಆಗಬೇಕಿದೆ, ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಕೂಡ ಮಹತ್ವದ ಕ್ರಮ ಕೈಗೊಂಡಿದೆ. ಕೇಂದ್ರ ಬಜೆಟ್ 2026 ಮೂಲಕ ಕೃಷಿ ವಲಯಕ್ಕೆ ಭಾರಿ ಕೊಡುಗೆ ನೀಡಲಾಗಿದ್ದು, ಹಲವಾರು ಬೃಹತ್ ಯೋಜನೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಇದೀಗ ಮುಂದಾಗಿದೆ. ಹಾಗಾದರೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಯಾವೆಲ್ಲಾ ಯೋಜನೆಗಳು ಜಾರಿ ಆಗಲಿವೆ? ಬನ್ನಿ ತಿಳಿಯೋಣ.

500 ಜಲಾಶಯಗಳ ಅಭಿವೃದ್ಧಿಗೆ ಕ್ರಮ
ದೇಶದಲ್ಲಿ ನೀರಾವರಿ ವ್ಯಸ್ಥೆಯನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಅಗತ್ಯ ಇರುವ ಕಡೆಗಳಲ್ಲಿ ಹೊಸ ಹೊಸ ಡ್ಯಾಂ ಅಥವಾ ಜಲಾಶಯ ನಿರ್ಮಾಣ ಮಾಡುವುದು ಅನಿವಾರ್ಯ. ನೀರಾವರಿ ಅಭಿವೃದ್ಧಿ ಮಾಡಿದರೆ ಕೃಷಿ ಕ್ಷೇತ್ರದಲ್ಲಿ ಕೂಡ ಅಭಿವೃದ್ಧಿ ಆಗುತ್ತದೆ. ಇದೇ ಕಾರಣಕ್ಕೆ ಕೇಂದ್ರವು ಈಗ ಭಾರತದಲ್ಲಿ ಸುಮಾರು 500 ಜಲಾಶಯಗಳನ್ನು ಅಭಿವೃದ್ಧಿಪಡಿಸಲು ಮಹತ್ವದ ಕ್ರಮವನ್ನು ಕೈಗೊಂಡಿದೆ. ಇದು ಮಾತ್ರವಲ್ಲದೆ ನೀರಾವರಿ ಅಭಿವೃದ್ಧಿಗಾಗಿ ಬೇಕಿರುವ ಇನ್ನಷ್ಟು ಕ್ರಮಗಳನ್ನ ಕೂಡ ಜಾರಿಗೆ ತರಲು ಯೋಜನೆ ಸಿದ್ಧಪಡಿಸಲಾಗಿದೆ. ಹಾಗಾದರೆ ಬೇರೆ ಯಾವೆಲ್ಲಾ ಯೋಜನೆ, ರೈತರ ತಲಾದಾಯ ಹೆಚ್ಚಿಸಲಿವೆ? ಮುಂದೆ ಒದಿ.
ಶ್ರೀಗಂಧ ಮತ್ತು ಗೋಡಂಬಿಗೆ ಉತ್ತೇಜನ
ದೇಶದಲ್ಲಿ 500 ಜಲಾಶಯ ಅಭಿವೃದ್ಧಿ ಜೊತೆಗೆ, ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಕಾರ್ಯಕ್ರಮದ ಮೂಲಕ ಪಶುಸಂಗೋಪನೆಗೆ ಬೆಂಬಲ ನೀಡುವುದು ಕೂಡ ಹೊಸ ಯೋಜನೆಯಲ್ಲಿ ಸೇರಿದೆ. ಹಾಗೇ ಕರಾವಳಿ ಪ್ರದೇಶದಲ್ಲಿ ತೆಂಗಿನಕಾಯಿ, ಶ್ರೀಗಂಧ ಮತ್ತು ಗೋಡಂಬಿ ರೀತಿಯ ಹೆಚ್ಚಿನ ಮೌಲ್ಯದ ಬೆಳೆ ಬೆಳೆದು ರೈತರು ಲಾಭ ಮಾಡುವಂತೆ ಬೆಂಬಲಿಸುವುದು ಕೂಡ ಈ ಯೋಜನೆಯಲ್ಲಿ ಸೇರಿದೆ. ಗುಡ್ಡಗಾಡು ಪ್ರದೇಶದಲ್ಲಿ ವಾಲ್ನಟ್ ಉತ್ಪಾದನೆ ಬೆಂಬಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಅಲ್ಲದೆ ಇದೇ ರೀತಿ ಆಯಾ ಪ್ರದೇಶಗಳಿಗೆ ಅನುಕೂಲ ಆಗುವ ಕೃಷಿ ಚಟುವಟಿಕೆಗೆ ಬಲ ತುಂಬಲು ಕೇಂದ್ರದಿಂದ ವಿಶೇಷ ಯೋಜನೆ ರೆಡಿಯಾಗಿದೆ. ಈ ಯೋಜನೆಗಳು ರೈತರ ಆದಾಯವನ್ನು ಹೆಚ್ಚು ಮಾಡುವ ಜೊತೆಗೆ, ದೇಶದ ಆರ್ಥಿಕತೆಗೂ ಬಲ ತುಂಬಲಿದೆ. ಭವಿಷ್ಯದಲ್ಲಿ ಭಾರತದಿಂದ ಮತ್ತಷ್ಟು ಕೃಷಿ ಪದಾರ್ಥ ರಫ್ತು ಮಾಡಲು ಈ ಕ್ರಮಗಳು ಬೆಂಬಲ ನೀಡಲಿವೆ.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications