ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2022; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿನ ಪ್ರಮುಖ ನಿರೀಕ್ಷೆಗಳೇನು?

|
Google Oneindia Kannada News

ನವದೆಹಲಿ, ಜನವರಿ 25: ಭಾರತದ ಮುಂದಿನ ಒಂದು ವರ್ಷದ ಅಭಿವೃದ್ಧಿ ಮುನ್ನೋಟವನ್ನಿಟ್ಟುಕೊಂಡು ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ನಾಲ್ಕನೇ ಆಯವ್ಯಯ ಮಂಡಿಸಲಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಬಿಕ್ಕಟ್ಟಿನಿಂದ ತತ್ತರಿಸಿರುವ ದೇಶದ ಆರ್ಥಿಕತೆ ಇದೀಗ ಚೇತರಿಕೆಯ ಹಾದಿಯಲ್ಲಿದೆ. ಹಣದುಬ್ಬರ, ಸಾಮಾನ್ಯ ಜನರ ನಿರೀಕ್ಷೆಗಳು, ಉದ್ಯಮಿಗಳ ಕೋರಿಕೆಗಳ ಮಧ್ಯೆ ಈ ಬಾರಿಯ ಬಜೆಟ್ ಪ್ರಮುಖ ವಹಿಸಲಿದೆ. ಜನಸಾಮಾನ್ಯರಿಂದ ಹಿಡಿದು ರೈತರು, ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗ, ಕಾರ್ಪೋರೇಟ್‌ಗಳು, ಷೇರು ಮಾರುಕಟ್ಟೆಯವರೆಗೆ ಎಲ್ಲರ ದೃಷ್ಟಿ ಇದೀಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್‌ನತ್ತ ನೆಟ್ಟಿದೆ.

ಕೇಂದ್ರ ಬಜೆಟ್ ಮಂಡನೆಗೆ ಕೇವಲ ಒಂದು ವಾರ ಬಾಕಿ ಇದ್ದು, 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಬಜೆಟ್ ಆಗಿದ್ದರೆ, ಹಣಕಾಸು ಸಚಿವರಾಗಿ ಸೀತಾರಾಮನ್ ಅವರ ವೈಯಕ್ತಿಕ ನಾಲ್ಕನೇ ಬಜೆಟ್ ಇದಾಗಿದೆ.

Union Budget 2022; What Are the Key Expectations on Finance Minister Nirmala Sitharaman?

ಕೋವಿಡ್-19 ಸಾಂಕ್ರಾಮಿಕ ರೋಗದ ಮೂರನೇ ಅಲೆ ಮತ್ತು ಏರುತ್ತಿರುವ ಹಣದುಬ್ಬರದ ಮಧ್ಯೆ ಈ ಬಾರಿಯ ಬಜೆಟ್ ಜನಪರವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ತೆರಿಗೆ ವಿನಾಯಿತಿ
* ಎರಡು ವರ್ಷಗಳಿಂದ ಕೊರೊನಾ ಸೋಂಕಿನಿಂದಾಗಿ ಲಾಕ್‌ಡೌನ್ ಆಗಿದ್ದರಿಂದ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ (WFH) ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್, ಇಂಟರ್ನೆಟ್ ಶುಲ್ಕ, ಬಾಡಿಗೆ, ಪೀಠೋಪಕರಣ ಇತ್ಯಾದಿಗಳ ಮೇಲಿನ ಖರ್ಚು ಹೆಚ್ಚಾಗಿದೆ. ಹೀಗಾಗಿ ಮನೆಯಿಂದ ಕೆಲಸ ಮಾಡುವವರಿಗೆ ಹೆಚ್ಚುವರಿ ತೆರಿಗೆ ವಿನಾಯಿತಿ ನೀಡಲು ಸಲಹೆ ನೀಡಿದ್ದು, ಈ ಬಗ್ಗೆ ಹಣಕಾಸು ಸಚಿವೆ ಯಾವ ನಿರ್ಧಾರ ಕೈಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.

ಜಿಎಸ್‌ಟಿ ಕಡಿತ
* ಸಾಂಕ್ರಾಮಿಕ ಕೊರೊನಾ ರೋಗ ಪ್ರಾರಂಭವಾದಾಗಿನಿಂದ ಆರೋಗ್ಯ ವಿಮೆಯು ಜನರ ಪಟ್ಟಿಯಲ್ಲಿ ಆದ್ಯತೆಯಾಗಿದೆ. ಆರೋಗ್ಯ ರಕ್ಷಣೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು 5% ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ ಇರಿಸಬೇಕೆಂದು ವಿಮಾ ತಜ್ಞರು ಬಯಸಿದ್ದಾರೆ. ಇದೇ ವೇಳೆ ಜನಸಾಮಾನ್ಯರ ದಿನಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ದರ ಕಡಿತದ ನಿರೀಕ್ಷೆಯಲ್ಲಿದ್ದಾರೆ.

ಆಟೋಮೊಬೈಲ್ ವಲಯದ ನಿರೀಕ್ಷೆ
* ಆಟೋಮೊಬೈಲ್ ವಲಯವು ವಿದ್ಯುತ್ ಚಾಲಿತ ವಾಹನಗಳ ಪರವಾಗಿದ್ದು, ಕಡಿಮೆ ಬಡ್ಡಿದರದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಆಯ್ಕೆ ಮಾಡಲು ಹೆಚ್ಚಿನ ಜನರನ್ನು ಉತ್ತೇಜಿಸಬೇಕು. ವಾಹನಗಳ ಬಿಡಿಭಾಗಗಳ ಮೇಲಿನ ಜಿಎಸ್‌ಟಿ ದರ ಕಡಿತಕ್ಕೆ ಮನವಿ ಮಾಡಲಾಗಿದೆ.

ಹೋಟೆಲ್ ಉದ್ಯಮದ ನಿರೀಕ್ಷೆ
* ಕೊರೊನಾ ಲಾಕ್‌ಡೌನ್‌ನಿಂದಾಗಿ ಹೋಟೆಲ್ ಉದ್ಯಮ ತೀವ್ರ ನಷ್ಟಕ್ಕೆ ಸಿಲುಕಿದೆ. ಪದೇ ಪದೇ ಲಾಕ್‌ಡೌನ್ ಮತ್ತು ಕರ್ಫ್ಯೂನಿಂದಾಗಿ ಬಾಗಿಲು ಮುಚ್ಚಲಾಗಿತ್ತು. ಹೋಟೆಲ್ ಉದ್ಯಮಕ್ಕೂ ಈ ಬಾರಿಯ ಕೇಂದ್ರ ಬಜೆಟ್ ಮೇಲೆ ತೀವ್ರ ನಿರೀಕ್ಷೆ ಇದ್ದು, ಬಜೆಟ್ 2022ರಲ್ಲಿ ಮರುಸ್ಥಾಪಿಸಲಾದ ಜಿಎಸ್‌ಟಿ ಇನ್‌ಪುಟ್ ತೆರಿಗೆ ಕ್ರೆಡಿಟ್ ನೋಡುತ್ತಿದೆ. ಮತ್ತೊಂದು ಲಾಕ್‌ಡೌನ್‌ನಿಂದ ಹೋಟೆಲ್, ರೆಸ್ಟೋರೆಂಟ್ ವ್ಯವಹಾರವನ್ನು ಉಳಿಸುವ ವ್ಯವಸ್ಥೆಯನ್ನು ವಲಯವು ಬಯಸಿದೆ.

ಜನರ ಕೈಯಲ್ಲಿ ಹಣ ಚಲಾವಣೆ
* ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರ ಕೈಯಲ್ಲಿ ಹಣ ಚಲಾವಣೆ ಆಗುತ್ತಿರಬೇಕೇಂದು ಹೇಳುತ್ತಿರುತ್ತಾರೆ. ಈ ಸಂಬಂಧ ವಿತ್ತ ಸಚಿವಾಲಯಕ್ಕೆ ಸಲಹೆಗಳನ್ನು ಸಲ್ಲಿಸಲಾಗಿದೆ. ಈ ವಿಷಯದ ಬಗ್ಗೆ ವಿತ್ತ ಸಚಿವರು ವಿಶೇಷ ಗಮನ ನೀಡಲಿದ್ದಾರೆ ಎನ್ನಲಾಗಿದೆ.

ವಿಮಾನಯಾನದ ನಿರೀಕ್ಷೆ
* ದೇಶದ ವಿಮಾನಯಾನ ಉದ್ಯಮವು ಕನಿಷ್ಠ 2 ವರ್ಷಗಳವರೆಗೆ ತೆರಿಗೆ ವಿನಾಯಿತಿ ಮತ್ತು ಕನಿಷ್ಠ ಪರ್ಯಾಯ ತೆರಿಗೆಯ ವಿನಾಯಿತಿ ನೀಡಬಹುದು ಎಂದು ನಿರೀಕ್ಷಿಸುತ್ತಿದೆ. ಹಲವು ವಿಮಾನಯಾನ ಸಂಸ್ಥೆಗಳು ಕೊರೊನಾ ಸಮಸ್ಯೆಯಿಂದಾಗಿ ಬೇರೆ ದೇಶಗಳಿಗೆ ಸಂಚರಿಸುತ್ತಿಲ್ಲ. ಇದರಿಂದ ಸಂಕಷ್ಟದಲ್ಲಿ ಸಿಲುಕಿವೆ.

ಸ್ಟಾಕ್ ಮಾರ್ಕೆಟ್
* ಸ್ಟಾಕ್ ಮಾರ್ಕೆಟ್ ಪ್ಲಾಟ್‌ಫಾರ್ಮ್‌ಗಳು ಸಹ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಉತ್ತಮ ನಿರೀಕ್ಷೆಗಳನ್ನು ಹೊಂದಿವೆ. ಅವರು ಸೆಕ್ಯುರಿಟೀಸ್ ವಹಿವಾಟು ತೆರಿಗೆಯಲ್ಲಿ ಕಡಿತವನ್ನು ಬಯಸಿದ್ದು, ಹಣಕಾಸು ಸಚಿವರು ಭದ್ರತಾ ವಹಿವಾಟು ತೆರಿಗೆಯನ್ನು (ಎಸ್‌ಟಿಟಿ) ರದ್ದುಗೊಳಿಸಬೇಕು ಅಥವಾ ಕಡಿಮೆ ಮಾಡಬೇಕು ಎಂದು ಷೇರು ಮಾರುಕಟ್ಟೆಯ ತಜ್ಞರು ನಿರೀಕ್ಷಿಸುತ್ತಿದ್ದಾರೆ.

ಕ್ರಿಪ್ಟೋಕರೆನ್ಸಿ ಬಗ್ಗೆ ನಿರ್ಧಾರ
* ಕ್ರಿಪ್ಟೋಕರೆನ್ಸಿಗಳ ಕಡೆಗೆ ಜನರ ಆಕರ್ಷಣೆ ನಿರಂತರವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಕ್ರಿಪ್ಟೋ ಹೂಡಿಕೆದಾರರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರದಿಂದ ಕರಡು ಕ್ರಿಪ್ಟೋ ಮಸೂದೆಯನ್ನೂ ಸಿದ್ಧಪಡಿಸಲಾಗಿದೆ. ಈ ಸಂದರ್ಭದಲ್ಲಿ ದೇಶಿಯ ಕ್ರಿಪ್ಟೋ ಮತ್ತು ಬ್ಲಾಕ್‌ಚೈನ್ ಸ್ಟಾರ್ಟ್ಅಪ್ ತೆರಿಗೆ, ಕಾನೂನುಗಳು, ವಿನಾಯಿತಿಗಳು ಮತ್ತು ನಿಯಮಗಳಂತಹ ವಿಷಯಗಳ ಬಗ್ಗೆ ಜನರು ಸ್ಪಷ್ಟತೆಯ ನಿರೀಕ್ಷೆಯಲ್ಲಿದ್ದಾರೆ.

Recommended Video

KL Rahul ನಾಯಕತ್ವದ ಫೇಲ್ಯೂರ್ ಬಗ್ಗೆ Rahul Dravid ಹೇಳಿದ್ದೇನು? | Oneindia Kannada

ಸ್ಟಾರ್ಟಪ್ ಮತ್ತು ಸಣ್ಣ ಉದ್ಯಮದ ನಿರೀಕ್ಷೆ
* 2022-23ರ ಬಜೆಟ್‌ನಲ್ಲಿ ಮುಂದಿನ ಆರ್ಥಿಕ ವರ್ಷಕ್ಕೆ ಸಣ್ಣ ಉದ್ಯಮಗಳಿಗೆ ಹೆಚ್ಚಿನ ಬೆಂಬಲವನ್ನು ನೀಡುವ ಮೂಲಕ ಉದ್ಯಮಿಗಳನ್ನು ಉತ್ತೇಜಿಸುವ ಮತ್ತು ಸಬಲೀಕರಣಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಜೊತೆಗೆ ಹೆಚ್ಚುವರಿ ಸ್ಟಾರ್ಟಪ್ ಸ್ನೇಹಿ ನೀತಿಗಳು ಮತ್ತು ತೆರಿಗೆ ರಿಯಾಯಿತಿಗಳನ್ನು ಸರ್ಕಾರ ನೀಡಬೇಕೆಂದು ಸ್ಟಾರ್ಟಪ್‌ಗಳು ಒತ್ತಾಯಿಸುತ್ತಿವೆ.

ಕೃಷಿ ವಲಯ ಮತ್ತು ರೈತರ ನಿರೀಕ್ಷೆ
* ದೇಶದ ಕೃಷಿ ವಲಯದ ಆದ್ಯತೆ ಮತ್ತು ರೈತರ ಸಮಸ್ಯೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, 2022-23ರ ಬಜೆಟ್‌ನಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ರಸಗೊಬ್ಬರ, ರೈತರ ಆದಾಯ ದ್ವಿಗುಣ, ಕನಿಷ್ಠ ಬೆಂಬಲ ಬೆಲೆ, ನಿರ್ದಿಷ್ಟ ಬೆಲೆ, ಮಾರುಕಟ್ಟೆ, ನೀರಾವರಿ ಸೇರಿದಂತೆ ಹಲವು ನಿರೀಕ್ಷೆಗಳನ್ನು ಈ ಬಾರಿಯ ಬಜೆಟ್‌ ಮೇಲೆ ಇರಿಸಿಕೊಳ್ಳಲಾಗಿದೆ.

English summary
The Union Budget will presentation to come up on February 1 with India's next one year development outlook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X