ತೆರಿಗೆದಾರರಿಗೆ ಶುಭ ಸುದ್ದಿ ನೀಡಲು ಮುಂದಾದ ನಿರ್ಮಲಾ ಸೀತಾರಾಮನ್

ನವದೆಹಲಿ, ಜನವರಿ 23: ಉದ್ಯೋಗಸ್ಥ ತೆರಿಗೆದಾರರಿಗೆ ಶುಭ ಸುದ್ದಿ ನೀಡಲು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಮುಂದಾಗಿದ್ದಾರೆ. ಫೆಬ್ರವರಿ 01ರಂದು ಬಜೆಟ್ ಮಂಡನೆ ವೇಳೆ ಮುಂದಿನ ಆರ್ಥಿಕ ವರ್ಷಕ್ಕೆ ಅನುಗುಣವಾಗಿ ಮೂಲ ಆದಾಯ ತೆರಿಗೆ ಮಿತಿಯನ್ನು ಬದಲಾಯಿಸಲು ಮುಂದಾಗಿದ್ದು, ಮಧ್ಯಮ ವರ್ಗದ ಕೈಲಿಗೆ ಹೆಚ್ಚಿನ ನಗದು ಸೇರಲಿದ್ದು, ಇದರಿಂದ ವ್ಯಾಪಾರ, ವಹಿವಾಟು, ಖರೀದಿ ಪ್ರಕ್ರಿಯೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂಬ ಎಣಿಕೆಯಿದೆ.

ವೇತನದಾರ ವರ್ಗಗಳ ಬೇಡಿಕೆಯನ್ನು ಪರಿಗಣಿಸಿರುವ ಮೋದಿ ಸರ್ಕಾರ ಹಾಲಿ 5 ಲಕ್ಷ ರುಗಳ ಮಿತಿ ಬದಲಾಗಿ 7 ಲಕ್ಷ ರು ಗಳ ತನಕ ಆದಾಯ ತೆರಿಗೆ ಅಗತ್ಯವಿಲ್ಲ ಎಂಬ ಹೊಸ ಸ್ಲ್ಯಾಬ್ ತರುವ ಸಾಧ್ಯತೆ ಹೆಚ್ಚಿದೆ. ಆದರೆ, ಆದರೆ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು ಬದಲಾಯಿಸುವ ಸಾಧ್ಯತೆ ಕಡಿಮೆ ಎಂಬ ಮಾಹಿತಿಯಿದೆ.

ಹೀಗಾಗಿ, ಇನ್ಮುಂದೆ 7-10 ಲಕ್ಷ ರೂ ವಾರ್ಷಿಕ ವರಮಾನದವರಿಗೆ 10% ಹಾಗೂ 10 ರಿಂದ 20 ಲಕ್ಷ ರು ವಾರ್ಷಿಕ ಗಳಿಕೆ ಉಳ್ಳವರಿಗೆ 20% ತೆರಿಗೆ ವಿಧಿಸಲಾಗುತ್ತದೆ. 20 ಲಕ್ಷ ರೂ.ಗಳಿಂದ 10 ಕೋಟಿ ರೂ.ಗಳ ವರೆಗೆ 30 ಪ್ರತಿಶತ ಹಾಗೂ 10 ಕೋಟಿ ರೂ.ಗಳಿಗಿಂತ ಮೇಲ್ಪಟ್ಟ ಆದಾಯದವರಿಗೆ 35 ಪ್ರತಿಶತದಷ್ಟು ಆದಾಯ ತೆರಿಗೆ ಅನ್ವಯವಾಗಲಿದೆ.

ಕಳೆದ ಬಜೆಟ್ ನಲ್ಲಿ ಏನಾಯಿತು?

ಕಳೆದ ಬಜೆಟ್ ನಲ್ಲಿ ಏನಾಯಿತು?

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಈಗಾಗಲೇ ಈಡೇರಿದೆ. ವೃತ್ತಿಪರರ ತೆರಿಗೆದಾರ, ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಯೋಜನೆ ಜಾರಿಗೊಳಿಸಲಿದೆ. ಕಳೆದ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಏರಿಕೆಯಾಗಿದೆ. ತೆರಿಗೆ ಪಾವತಿ, ಪಾವತಿ ವಿಧಾನ ಮಾತ್ರ ಬದಲಾವಣೆ ಘೋಷಣೆಯಾಗಿದೆ.

ಕಾರ್ಪೊರೇಟ್ ತೆರಿಗೆ ಕಡಿತದಿಂದಾಗಿ ಕೇಂದ್ರಕ್ಕೆ 1.45 ಲಕ್ಷ ಕೋಟಿ ರು ಹೊರೆ ಬೀಳಲಿದೆ. ಆರ್ಥಿಕ ಬಿಕ್ಕಟ್ಟು, ಹಿಂಜರಿತ, ಕುಸಿತವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಳೆದ ಬಜೆಟ್ ನಲ್ಲಿ ತೆರಿಗೆ ಕುರಿತ ಮುಖ್ಯಾಂಶ-1

ಕಳೆದ ಬಜೆಟ್ ನಲ್ಲಿ ತೆರಿಗೆ ಕುರಿತ ಮುಖ್ಯಾಂಶ-1

* ಆದಾಯ ತೆರಿಗೆ ಪಾವತಿ ಮಾಡಲಿ ಆಧಾರ್, ಪ್ಯಾನ್ ಕಾರ್ಡ್ ಎರಡರಲ್ಲಿ ಒಂದು ಹೊಂದಿದ್ದರೆ ಸಾಕು, ಎರಡು ಕಡ್ಡಾಯ ಎಂಬ ಸಡಿಲಗೊಳಿಸಲಾಗಿದೆ.
* ಒಂದು ಬ್ಯಾಂಕಿನ ಒಂದು ಖಾತೆಯಿಂದ ವಾರ್ಷಿಕ 1 ಕೋಟಿ ರು ವಿಥ್ ಡ್ರಾ ಮಾಡಿದರೆ ಶೇ 2ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ. * ಕೈಗೆಟುಕುವ ದರದ ಮನೆ ಮೇಲಿನ ಸಾಲದಲ್ಲಿ 1.5 ಲಕ್ಷ ಕಡಿತ ಘೋಷಿಸಲಾಗಿದ್ದು, 2020ರ ಮಾರ್ಚ್ ತನಕ ಅನ್ವಯವಾಗಲಿದೆ.
* ವಾರ್ಷಿಕ 2 ಕೋಟಿ ರು ನಿಂದ 5 ಕೋಟಿ ರು ಆದಾಯ ಹೊಂದಿದವರಿಗೆ ತೆರಿಗೆ ಶೇ 3ರಷ್ಟು ಹೆಚ್ಚಳ.
* ವಾರ್ಷಿಕ 5 ಕೋಟಿ ರುಗೂ ಅಧಿಕ ಆದಾಯ ಹೊಂದಿದವರಿಗೆ ಶೇ 7ರಷ್ಟು ತೆರಿಗೆ
* ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್ಟಿ ದರವನ್ನು ಶೇಕಡಾ 12ರಿಂದ ಶೇಕಡ 5ಕ್ಕೆ ಇಳಿಕೆ ಮಾಡಲಾಗಿದೆ.

ಕಳೆದ ಬಜೆಟ್ ನಲ್ಲಿ ತೆರಿಗೆ ಕುರಿತ ಮುಖ್ಯಾಂಶ-2

ಕಳೆದ ಬಜೆಟ್ ನಲ್ಲಿ ತೆರಿಗೆ ಕುರಿತ ಮುಖ್ಯಾಂಶ-2

* ಐಟಿ ರಿಟರ್ನ್ಸ್ ಎಲ್ಲಾ ವಿಧಾನಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ(AI)ಬಳಸಿಕೊಂಡು ತೆರಿಗೆ ಪಾವತಿ ವ್ಯವಸ್ಥೆಯನ್ನು ಅಧಿಕಾರಿಗಳು ರಹಿತ, ಆನ್ ಲೈನ್ ವ್ಯವಸ್ಥೆಯಾಗಿ ಬದಲಾಯಿಸಲಾಗುತ್ತದೆ.
* 5 ಲಕ್ಷ ರು ತನಕ ತೆರಿಗೆ ಪಾವತಿಸಬೇಕಾಗಿಲ್ಲ.
* ಭವಿಷ್ಯ ನಿಧಿ ಹಾಗೂ ವಿಮೆ ಯಲ್ಲಿ ಹೂಡಿಕೆ ಮಾಡಿದರೆ 6.25 ಲಕ್ಷ ರು ತನಕ ತೆರಿಗೆ ವಿನಾಯಿತಿ ಇರುತ್ತದೆ.
* TDS ಅಡಿಯಲ್ಲಿ ಗೃಹಸಾಲದ ಮಿತಿ 1.5 ಲಕ್ಷರು ನಿಂದ 2 ಲಕ್ಷ ರುಗೆ ಏರಿಕೆ.
* ಸ್ಟಾಡರ್ಡ್ ಡಿಡಕ್ಷನ್ 40 ಸಾವಿರ ರು ನಿಂದ 50 ಸಾವಿರ ರು ಗೆ ಏರಿಕೆ. 2019-20ನೇ ಸಾಲಿನ ಬಜೆಟ್ ನಲ್ಲೂ ಈ ಎಲ್ಲಾ ಅಂಶಗಳನ್ನು ಮುಂದುವರೆಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮೂಲ ತೆರಿಗೆ ಪಾವತಿ ಮಿತಿ ಎಷ್ಟಿದೆ?

ಮೂಲ ತೆರಿಗೆ ಪಾವತಿ ಮಿತಿ ಎಷ್ಟಿದೆ?

ಮೂಲ ತೆರಿಗೆ ಪಾವತಿ ಮಿತಿ : 5 ಲಕ್ಷ ರು ತನಕ ತೆರಿಗೆ ಪಾವತಿಸುವಂತಿಲ್ಲ, ಇನ್ನೊಂದಿಷ್ಟು ಉಳಿತಾಯ ತೋರಿಸಿದರೆ 9 ಲಕ್ಷ ರು ತನಕ ತೆರಿಗೆ ಕಟ್ಟದೆ ಇರಬಹುದು ಎಂದು ಸಂಬಳದಾರರಿಗೆ ಮೋದಿ ಸರ್ಕಾರ ಸಿಹಿ ಸುದ್ದಿಯನ್ನು ನೀಡಿತ್ತು. ಆದರೆ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು 2014ರಿಂದ ಇಲ್ಲಿ ತನಕ ಬದಲಾಯಿಸಿಲ್ಲ. ಪ್ರಸ್ತುತ ಬಜೆಟ್ ನಲ್ಲಿ ಈ ಮಿತಿಯನ್ನು 3 ಲಕ್ಷ ರುಗಳಿಗೆ ಏರಿಸಲು ಬೇಡಿಕೆ ಬಂದಿತ್ತು. ಆದರೆ, ಈಗಾಗಲೇ ವೈಯಕ್ತಿಕ ಆದಾಯ 5 ಲಕ್ಷರು ತನಕ ಹೊಂದಿರುವವರು ಸೆಕ್ಷನ್ 87ಎ ಅಡಿಯಲ್ಲಿ ಪೂರ್ತಿ ತೆರಿಗೆ ರಿಬೇಟ್ ಪಡೆಯಬಹುದಾಗಿದೆ. ಹೀಗಾಗಿ, ಮೂಲ ಮಿತಿಯನ್ನು ಬದಲಾಯಿಸುವ ಸಾಧ್ಯತೆ ಕಡಿಮೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+