ಫೆಬ್ರವರಿ 25ರಂದು ಸಂಸದೀಯ ಸಮಿತಿ ಮುಂದೆ ಟ್ವಿಟ್ಟರ್ ಸಿಇಒ ಹಾಜರಾಗಲ್ಲ!

ನವದೆಹಲಿ, ಫೆಬ್ರವರಿ 22: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನ ಸಿಇಒ ಜಾಕ್ ಡೋರ್ಸೆ ಫೆಬ್ರವರಿ 25ಕ್ಕೆ ಸಂಸದೀಯ ಸಮಿತಿ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಆ ದಿನದಂದು ತಮಗೆ ಸಮಿತಿ ಮುಂದೆ ಟ್ವಿಟ್ಟರ್ ಸಿಇಒ ಹಾಜರಾಗುತ್ತಿಲ್ಲ.

ವೈಯಕ್ತಿಕ ಕಾರಣಗಳಿಂದ ಸಮಿತಿ ಮುಂದೆ ಬರಲು ಸಾಧ್ಯವಿಲ್ಲ, ಬದಲಿಗೆ ಟ್ವಿಟ್ಟರ್ ನ ಸಾರ್ವಜನಿಕ ನಿಯಮಾವಳಿ ವಿಭಾಗದ ಮುಖ್ಯಸ್ಥರಾದ ಕಾಲಿನ್ ಕ್ರೊವೆಲ್ ಅವರು ಸಮಿತಿ ಮುಂದೆ ಹಾಜರಾಗಲಿದ್ದಾರೆ ಎಂದು ಟ್ವಿಟ್ಟರ್ ಸಿಇಒ ಹೇಳಿದ್ದಾರೆ.

ಆದರೆ, ಟ್ವಿಟ್ಟರ್ ಸಿಇಒ ಬದಲಿಗೆ ಅವರ ಬದಲಿಗೆ ಬೇರೆ ಕೆಳ ಹಂತದ ಪ್ರತಿನಿಧಿಗಳ ವಾದವನ್ನು ಕೇಳಲು ಸಾಧ್ಯವಿಲ್ಲ. ಆದ್ದರಿಂದ ಸದನ ಸಮಿತಿ ಮುಂದೆ ಫೆ. 25ಕ್ಕೆ ಹಾಜರಾಗಬೇಕು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

Twitter CEO Jack Dorsey wont appear before Parliamentary panel on February 25

ಟ್ವಿಟ್ಟರ್ ನಲ್ಲಿ ಬಲಪಂಥೀಯ ವಿಚಾರಗಳ ವಿರುದ್ಧವಾದ ಧೋರಣೆ ಇದೆ ಎಂದು ದೂರುಗಳು ಬಂದಿದ್ದವು. ನಾಗರಿಕರ ಮಾಹಿತಿ ಭದ್ರತೆ, ಸಾಮಾಜಿಕ ಮಾಧ್ಯಮಗಳ ಪಾತ್ರ ಕುರಿತಂತೆ ಅನುರಾಗ್ ಠಾಕೂರ್ ನೇತೃತ್ವದ ಸದನ ಸಮಿತಿಯು ಜಾಕ್ ಡೋರ್ಸೆಗೆ ಈ ಬಗ್ಗೆ ಅಭಿಪ್ರಾಯ ಕೇಳಿತ್ತು.

ಯೂಥ್ ಫಾರ್ ಸೋಷಿಯಲ್ ಮೀಡಿಯಾ ಡೆಮಾಕ್ರಸಿ ಎಂಬ ಬಲಪಂಥೀಯ ಗುಂಪೊಂದು ಈಚೆಗೆ ಪ್ರತಿಭಟನೆ ನಡೆಸಿತ್ತು. ಆಡಳಿತಾರೂಢ ಬಿಜೆಪಿ ಹಾಗೂ ಸರಕಾರದ ಬಗ್ಗೆ ಅನುಕಂಪ ಇರುವವರ ಖಾತೆಯನ್ನು ಟ್ವಿಟ್ಟರ್ ಅಮಾನತು ಮಾಡುತ್ತಿದೆ ಎಂದು ಆರೋಪ ಮಾಡಿತ್ತು.

3.5 ಕೋಟಿಯಷ್ಟು ಟ್ವಿಟ್ಟರ್ ಬಳಕೆದಾರರು ಇದ್ದಾರೆ. ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಟ್ವಿಟ್ಟರ್ ಮುಖ್ಯ ವೇದಿಕೆಯಂತಾಗಿದೆ. ಚುನಾವಣೆ ಆಯೋಗ ಕೂಡ ಟ್ವಿಟ್ಟರ್ ನಲ್ಲಿನ ಪೋಸ್ಟ್ ಗಳ ಬಗ್ಗೆ ಮತ್ತು ಅದರ ಪರಿಣಾಮಗಳ ಬಗ್ಗೆ ನಿಗಾ ವಹಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+