ಮುಂದಿನ ತಿಂಗಳು ಟಿವಿಗಳ ಬೆಲೆ ಹೆಚ್ಚಳ ಸಾಧ್ಯತೆ: ಏಕೆ ಗೊತ್ತಾ?

ನವದೆಹಲಿ, ಸೆಪ್ಟೆಂಬರ್ 14: ಅಕ್ಟೋಬರ್‌ ತಿಂಗಳಿನಿಂದ ಟಿವಿಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೆ ಕೇಂದ್ರ ಸರ್ಕಾರವು ಈ ಹಿಂದೆ ನೀಡಿದ್ದ ಟಿವಿ ತಯಾರಿಕಾ ಉತ್ಪನ್ನಗಳ (ತೆರೆದ ಸೆಲ್ ಪ್ಯಾನಲ್) ಮೇಲಿನ ರಿಯಾಯಿತಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ.

ಕಳೆದ ವರ್ಷ ಕೇಂದ್ರ ಸರ್ಕಾರವು ತೆರೆದ ಸೆಲ್ ಪ್ಯಾನಲ್‌ಗಳಿಗೆ ಶೇಕಡಾ 5ರಷ್ಟು ಆಮದು ಸುಂಕವನ್ನು ನೀಡಿತ್ತು. ಆದರೆ ಈ ವಿನಾಯಿತಿ ಅವಧಿ ಸೆಪ್ಟೆಂಬರ್‌ ಅಂತ್ಯಕ್ಕೆ ಕೊನೆಗೊಳ್ಳಲಿದೆ.

ಆದಾಗ್ಯೂ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (Meity) ಟಿವಿ ಉತ್ಪಾದನೆಯಲ್ಲಿ ಹೂಡಿಕೆಗಳನ್ನು ತರಲು ಸಹಾಯ ಮಾಡಿದ ಆಮದು ಸುಂಕದ ರಿಯಾಯಿತಿಗಳನ್ನು ವಿಸ್ತರಿಸುವ ಪರವಾಗಿದೆ. ಏಕೆಂದರೆ ಸ್ಯಾಮ್‌ಸಂಗ್ ತನ್ನ ಉತ್ಪಾದನೆಯನ್ನು ವಿಯೆಟ್ನಾಂನಿಂದ ಭಾರತಕ್ಕೆ ವರ್ಗಾಯಿಸಿತು.

TV To Cost More From Next Month: Know More

ಈಗಾಗಲೇ ಟೆಲಿವಿಷನ್‌ ಕ್ಷೇತ್ರ ಭಾರಿ ಸಂಕಷ್ಟ ಎದುರಿಸುತ್ತಿದೆ. ಈಗ ಮತ್ತೆ ವಿನಾಯಿತಿ ಅಂತ್ಯಗೊಂಡರೆ ಬೆಲೆಗಳು ಪರಿಷ್ಕೃತಗೊಳ್ಳುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರನ್ನು ಸೆಳೆಯಲು ತುಸು ಕಷ್ಟವಾಗಬೇಕಾಗಬಹುದು ಎಂದು ಪರಿಣತರು ವಿಶ್ಲೇಷಿಸಿದ್ದಾರೆ.

ಎಲ್ಜಿ, ಪ್ಯಾನಾಸೋನಿಕ್, ಥಾಮ್ಸನ್ ಮತ್ತು ಸಾನ್ಸುಯಿ ಟಿವಿ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 32 ಇಂಚಿನ ಟಿವಿ ಶೇ 4 ಅಥವಾ ಕನಿಷ್ಠ 600 ರೂ ಮತ್ತು 42 ಇಂಚಿಗೆ 1,200-1,500 ರೂ. ಏರಿಕೆಯಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+