ಜನವರಿಯಲ್ಲಿ ಟಿವಿ, ಫ್ರಿಡ್ಜ್‌ , ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಹೆಚ್ಚಳ ಸಾಧ್ಯತೆ

ನವದೆಹಲಿ,

ಡಿಸೆಂಬರ್
28:
ಹೊಸ
ವರ್ಷದಲ್ಲಿ
ಎಲೆಕ್ಟ್ರಾನಿಕ್
ಉಪಕರಣಗಳ
ಖರೀದಿ
ಮಾಡಬೇಕು
ಎಂದುಕೊಂಡಿದ್ದವರಿಗೆ
ನಿರಾಸೆಯಾಗಬಹುದು.
ಏಕೆಂದರೆ
ಜನವರಿ,
2021ರಿಂದ
ಟಿವಿ,
ಫ್ರಿಡ್ಜ್‌,
ವಾಶಿಂಗ್
ಮೆಷಿನ್
ಸೇರಿದಂತೆ
ಗೃಹೋಪಯೋಗಿ
ಎಲೆಕ್ಟ್ರಾನಿಕ್
ಉಪಕರಣಗಳ
ಬೆಲೆ
ಶೇಕಡಾ
10ರಷ್ಟು
ಹೆಚ್ಚಳವಾಗುವ
ಸಾಧ್ಯತೆ
ಇದೆ.

id="toptextpromo">
id='are-slot-1'
class='oiad
oi-axt
oiadv'>

ಹೀಗಾಗಿ

ನೀವು
ಟಿವಿ,
ಫ್ರಿಜ್,
ವಾಷಿಂಗ್
ಮೆಷಿನ್
ಅಥವಾ
ಇತರ
ಗೃಹೋಪಯೋಗಿ
ಉಪಕರಣಗಳನ್ನು
ಖರೀದಿಸಲು
ಯೋಜಿಸುತ್ತಿದ್ದರೆ,
ಶೀಘ್ರದಲ್ಲೇ
ಖರೀದಿಸಿದರೆ
ಉತ್ತಮ.

id='are-slot-2'
class='oiad
oi-axt
oiadv'>

ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಶೇಕಡಾ 10ರಷ್ಟು ಹೆಚ್ಚಳ?

ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಶೇಕಡಾ 10ರಷ್ಟು ಹೆಚ್ಚಳ?

ಎಲ್ಇಡಿ ಟಿವಿ ಮತ್ತು ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಮುಂತಾದ ಉಪಕರಣಗಳು ಮುಂದಿನ ವರ್ಷದ ಜನವರಿಯಿಂದ ಶೇಕಡಾ 10 ರಷ್ಟು ಹೆಚ್ಚು ದುಬಾರಿಯಾಗಲಿವೆ ಎನ್ನಲಾಗಿದೆ. ಪ್ರಮುಖ ಇನ್ಪುಟ್ ವಸ್ತುಗಳಾದ ತಾಮ್ರ, ಅಲ್ಯೂಮಿನಿಯಂ ಮತ್ತು ಉಕ್ಕಿನ ಬೆಲೆ ಏರಿಕೆ ಮತ್ತು ಸಮುದ್ರ ಮತ್ತು ವಾಯು ಸರಕುಗಳ ಹೆಚ್ಚಳ ಇದಕ್ಕೆ ಕಾರಣ.

ಜಾಗತಿಕ ಮಾರಾಟಗಾರರಿಂದ ಕಡಿಮೆ ಪೂರೈಕೆಯಿಂದಾಗಿ ಟಿವಿ ಪ್ಯಾನೆಲ್‌ಗಳ (ಓಪನ್‌ಸೇಲ್) ಬೆಲೆಗಳು ಶೇಕಡಾ 200ರಷ್ಟು ಹೆಚ್ಚಾಗಿದೆ ಎಂದು ತಯಾರಕರು ಹೇಳುತ್ತಾರೆ. ಕಚ್ಚಾ ಬೆಲೆ ಹೆಚ್ಚಳದಿಂದಾಗಿ ಪ್ಲಾಸ್ಟಿಕ್ ಕೂಡ ದುಬಾರಿಯಾಗಿದೆ.

ವಾಶಿಂಗ್ ಮೆಷಿನ್ , ಎಸಿ ಬೆಲೆ ಹೆಚ್ಚಳ ಸಾಧ್ಯತೆ

ವಾಶಿಂಗ್ ಮೆಷಿನ್ , ಎಸಿ ಬೆಲೆ ಹೆಚ್ಚಳ ಸಾಧ್ಯತೆ

ವಾಶಿಂಗ್ ಮೆಷಿನ್‌ ಮತ್ತು ಹವಾ ನಿಯತ್ರಣ(ಎಸಿ) ಬೆಲೆಗಳು ಶೇಕಡಾ 8 ರಿಂದ 10ರಷ್ಟು ಏರಿಕೆಯಾಗಬಹುದು. ಇನ್ನು ರೆಫ್ರಿಜರೇಟರ್‌ಗಳ ದರವು ಶೇಕಡಾ 12ರವರೆಗೆ ಏರಿಕೆಯಾಗಬಹುದು.

ಫ್ರಿಡ್ಜ್‌ , ಫ್ರೀಜರ್‌ಗಳು

ಫ್ರಿಡ್ಜ್‌ , ಫ್ರೀಜರ್‌ಗಳು

ರೆಫ್ರಿಜರೇಟರ್, ಫ್ರೀಜರ್‌ಗಳಲ್ಲಿ ಫೋಮ್‌ಗಳ ತಯಾರಿಕೆಯಲ್ಲಿ ಬಳಸುವ ಎಂಡಿಐ ಎಂಬ ರಾಸಾಯನಿಕ ಬೆಲೆ ಶೇಕಡಾ 200 ರಷ್ಟು ಏರಿಕೆಯಾಗಿದೆ. ಹೀಗಾಗಿ ಉತ್ಪಾದನಾ ವೆಚ್ಚದಲ್ಲಿ ಬೆಲೆ ಏರಿಕೆ ಸಾಧ್ಯತೆ ಇದ್ದು, ಮುಂದಿನ ತಿಂಗಳ ಆರಂಭದಿಂದ ಗೃಹೋಪಯೋಗಿ ಸರಕುಗಳ ಬೆಲೆ ಹೆಚ್ಚುವ ಸಾಧ್ಯತೆ ಇದೆ.

ಹಲವಾರು ವರ್ಷಗಳ ಬಳಿಕ ಒಂದೇ ಸಮಯದಲ್ಲಿ ಬೆಲೆ ಏರಿಕೆ

ಹಲವಾರು ವರ್ಷಗಳ ಬಳಿಕ ಒಂದೇ ಸಮಯದಲ್ಲಿ ಬೆಲೆ ಏರಿಕೆ

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಹಲವಾರು ವರ್ಷಗಳ ಬಳಿಕ ಒಂದೇ ಸಮಯದಲ್ಲಿ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬೆಲೆ ಏರಿಕೆಯಾಗುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯು ಎಲ್ಲಾ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+