• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ರಂಪ್ ಖುಷಿಪಡಿಸಲು ಬೈಕಿನ ಸುಂಕ ತಗ್ಗಿಸಲು ಮುಂದಾದ ಮೋದಿ?

|

ನವದೆಹಲಿ, ಫೆಬ್ರವರಿ 17: ಹಾರ್ಲೆ ಡೇವಿಡ್ಸನ್ ಬೈಕಿನ ಮೇಲೆ ಹೆಚ್ಚು ಆಮದು ಸುಂಕ ಹೇರಿರುವ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಿಡಿಕಾರಿದ್ದು ನೆನಪಿರಬಹುದು. ಎರಡು ವರ್ಷಗಳ ಹಿಂದೆ ಭಾರತದ ಸುಂಕ ನೀತಿಯ ಬಗ್ಗೆ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿದ್ದರು.

   Donald Trump worshiper in India

   ''ಸುಂಕ ಹೇರಿಕೆ ಬಗ್ಗೆ ನಾನು ಆಕ್ಷೇಪಿಸುತ್ತಿಲ್ಲ. ಕಸ್ಟಮ್ಸ್ ಸುಂಕ ತಗ್ಗಿಸಿರುವುದರಿಂದ ಟ್ರಯಾಂಪ್, ಹಾರ್ಲೆ ಬೆಲೆ ತಗ್ಗುವುದರಿಂದ ನಷ್ಟ. ಪರೋಕ್ಷ ತೆರಿಗೆ ವಿಧಿಸಬಹುದಾಗಿತ್ತು'' ಎಂದು ಟ್ರಂಪ್ ಹೇಳಿದ್ದರು. ಈಗ ಟ್ರಂಪ್ ಭಾರತಕ್ಕೆ ಬರುತ್ತಿದ್ದು, ಟ್ರಂಪ್ ಗೆ ಖುಷಿಪಡಿಸಲು ವಿದೇಶಗಳಿಂದ ಆಮದು ಮಾಡಿಕೊಳ್ಳುವ ದುಬಾರಿ ಬೆಲೆಯ ದ್ವಿಚಕ್ರವಾಹನಗಳ ಮೇಲಿನ ಅಬಕಾರಿ ಸುಂಕದಲ್ಲಿ ಬದಲಾವಣೆ ತರಲು ಮೋದಿ ಸರ್ಕಾರ ಮುಂದಾಗಿರುವ ಸುದ್ದಿ ಬಂದಿದೆ.

   ಆಘಾತ ನೀಡಿದ ಅಮೆರಿಕದ ನಡೆಯನ್ನು 'ದುರದೃಷ್ಟಕರ' ಎಂದ ಭಾರತ

   ಸಂಪೂರ್ಣವಾಗಿ ಬಿಲ್ಟ್ ಆಗಿರುವ ವಾಹನ(CBU)ಗಳ ಆಮದು ಸುಂಕವನ್ನು100% ನಿಂದ 50%ಗೆ ಇಳಿಸಲಾಗಿತ್ತು. 1600 ಸಿಸಿ ವಾಹನಗಳಲ್ಲದೆ ಎಲ್ಲಾ ಸಾಮರ್ಥ್ಯದ ವಾಹನಗಳ ಆಮದು ಕೂಡಾ ದುಬಾರಿಯಾಗುತ್ತಿತ್ತು. ಈಗ ಬೈಕಿನ ಮೇಲಿನ ಸುಂಕವನ್ನು ಒಂದಂಕಿಗೆ ತಗ್ಗಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

   ಭಾರತದಲ್ಲಿ 75 ಸಿಸಿ, 250 ಸಿಸಿ, 500 ಸಿಸಿ ಹಾಗೂ 800 ಸಿಸಿ ಪ್ಲಸ್ ಗೆ ಮಾನ್ಯತೆ ಇದೆ. 800 ಸಿಸಿ ಸಾಮರ್ಥ್ಯದ ತನಕದ ಬೈಕುಗಳ ಆಮದು ಮೇಲಿನ ಸುಂಕವನ್ನು ಶೇ 60ರಷ್ಟು ಹಾಗೂ 800 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯಗಳ ಬೈಕುಗಳ ಮೇಲೆ ಶೇ 75ರಷ್ಟು ಸುಂಕ ವಿಧಿಸಲಾಗಿತ್ತು. ಆದರೆ, ಎಲ್ಲಾ ಬಗೆಯ ಬೈಕುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇ 50ರಷ್ಟು ತಗ್ಗಿಸಲಾಗಿತ್ತು.

   ಲೇವಡಿ ಮಾಡಿದ್ದ ಟ್ರಂಪ್

   ಲೇವಡಿ ಮಾಡಿದ್ದ ಟ್ರಂಪ್

   "ಪ್ರಧಾನಿ ನರೇಂದ್ರ ಮೋದಿ ಸುಂದರವಾದ ಮನುಷ್ಯ. ಅವರು ಒಂದು ದಿನ ನನಗೆ ಕರೆ ಮಾಡಿ ಅಷ್ಟೇ ಸುಂದರವಾಗಿ ಹೇಳಿದರು. ಹಬಾರ್ಲಿ ಡೆವಿಡ್ಸನ್ ಬೈನಿಕ ಮೇಲೆ ಕೇವಲ ಶೇ.75 ಆಮದು ಸುಂಕವನ್ನು ನೀಡುತ್ತೇವೆ. ಕೆಲ ದಿನಗಳ ನಂತರ ಅವರೇ ಹೇಳಿದರು, ಶೇ.50 ಆಮದು ಸುಂಕವನ್ನಷ್ಟೇ ಕೊಡುತ್ತೇವೆ...ಎಂದು. ಇದಕ್ಕೆ ನಾನೇನು ಹೇಳಲಿ? ಭಾರತದಿಂದ ಮೋಟಾರ್ ಸೈಕಲ್ ವೊಂದನ್ನು ಆಮದು ಮಾಡಿಕೊಂಡರೆ ನಮಗೆ ಸಿಗುವುದು ಶೇ.0 ಲಾಭವಷ್ಟೇ!" ಎಂದು ಟ್ರಂಪ್ ಲೇವಡಿ ಮಾಡಿದ್ದರು.

   ಬೈಕ್ ಸುಂಕದ ಬಗ್ಗೆ ಮೋದಿ- ಟ್ರಂಪ್ ಚರ್ಚೆ

   ಬೈಕ್ ಸುಂಕದ ಬಗ್ಗೆ ಮೋದಿ- ಟ್ರಂಪ್ ಚರ್ಚೆ

   'ನಾವು ಹಾರ್ಲೆಯನ್ನು ಅಲ್ಲಿಗೆ ಕಳುಹಿಸಿದಾಗ ಅವರು ಶೇ 100ರಷ್ಟು ತೆರಿಗೆ ವಿಧಿಸುತ್ತಾರೆ. ಭಾರತದವರು ಸಾಕಷ್ಟು ಸಂಖ್ಯೆಯ ಮೋಟಾರ್ ಸೈಕಲ್ ತಯಾರಿಸಿ ನಮಗೆ ಕಳುಹಿಸಿದಾಗ ಯಾವುದೇ ತೆರಿಗೆ ಇಲ್ಲ. ನಾನು ಅವರಿಗೆ ಕರೆ ಮಾಡಿದ್ದೆ. ಇದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದಿದ್ದೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಭಾಷಣೆಯ ಕುರಿತು ತಿಳಿಸಿದ್ದರು.

   ಒಂದು ಫೋನ್ ಕರೆ ಬಳಿಕ

   ಒಂದು ಫೋನ್ ಕರೆ ಬಳಿಕ

   ಒಂದು ಫೋನ್ ಕರೆಯೊಂದಿಗೆ ಅವರು ತೆರಿಗೆ ಪ್ರಮಾಣವನ್ನು ಶೇ 50ಕ್ಕೆ ಇಳಿಸಿದ್ದಾರೆ. ಆದರೆ, ಈಗಲೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇದು ಶೇ 50 ವರ್ಸಸ್ ಶೂನ್ಯವಾಗುತ್ತದೆ. ಅವರು ಈ ವಿಚಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಅಮೆರಿಕದ ಮೋಟಾರ್‌ಸೈಕಲ್‌ಗಳ ಮೇಲಿನ ಆಮದು ಸುಂಕದ ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಇನ್ನೂ ಮಾತುಕತೆ ಮುಂದುವರಿಸಿವೆ ಎಂಬ ಸೂಚನೆ ನೀಡಿದ್ದಾರೆ.

   ಒಬಾಮಾ ಆಡಳಿತದ ವಿರುದ್ಧ ಪರೋಕ್ಷ ವಾಗ್ದಾಳಿ

   ಒಬಾಮಾ ಆಡಳಿತದ ವಿರುದ್ಧ ಪರೋಕ್ಷ ವಾಗ್ದಾಳಿ

   'ನಾನು ಇದನ್ನು ಮಾಡದೆ ಇದ್ದರೆ, ನಾವು ಈಗ ಹೊಂದಿರುವ ಶಕ್ತಿ ಹೊಂದಿರದೆ ಇದ್ದಿದ್ದರೆ ಮತ್ತು ನಾವು ಬ್ಯಾಂಕ್ ಆಗಿರದೆ ಇದ್ದಿದ್ದರೆ... ನಾವು ಬ್ಯಾಂಕ್ ಆಗಿರದೆ ಇದ್ದಿದ್ದರೆ ಇದರ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಏಕೆಂದರೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಎಲ್ಲರೂ ದರೋಡೆ ಮಾಡಲು ಬಯಸುವ ಬ್ಯಾಂಕ್ ನಾವಾಗಿದ್ದೇವೆ. ಸುದೀರ್ಘ ಕಾಲದಿಂದ ಅವರು ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಇತರೆ ದೇಶಗಳೊಂದಿಗೆ ನಾವು 800 ಬಿಲಿಯನ್ ಡಾಲರ್ ವ್ಯಾಪಾರ ಕೊರತೆ ಎದುರಿಸುತ್ತಿದ್ದೇವೆ. ಈಗ ಹೇಳಿ ಈ ಡೀಲ್‌ಗಳನ್ನೆಲ್ಲ ಯಾರು ಮಾಡಿದ್ದರೆಂದು' ಎಂದು ಹಿಂದಿನ ಒಬಾಮಾ ಆಡಳಿತದ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

   English summary
   Trump visit to India:India has proposed a new tariff classification for motorcycles with cylinder capacity exceeding 1,600 cc, imports of which will be taxed in single digits. The plan is part of ongoing trade talks with the US.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X