ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋನ್ ಕಾಲ್ ಡ್ರಾಪ್ ಗ್ರಾಹಕರಿಗೆ 1 ರು ಪರಿಹಾರ?

By Mahesh
|
Google Oneindia Kannada News

ಬೆಂಗಳೂರು, ಅ.16 : ಫೋನ್ ಕರೆ ಮಾಡುವಾಗ ಅಕಸ್ಮಾತ್ ಸಂಪರ್ಕ ಕಡಿತ (ಕಾಲ್ ಡ್ರಾಪ್) ಗೊಂಡರೆ ನಿಮಗೆ ರು.1 ಪರಿಹಾರ ನಿಮ್ಮ ಸೇವಾ ಸಂಸ್ಥೆಯಿಂದ ಸಿಗಲಿದೆ. ಕಾಲ್ ಡ್ರಾಪ್ ಬಗ್ಗೆ ವಿವಿಧ ಟೆಲಿಕಾಂ ಸೇವಾ ಸಂಸ್ಥೆಗಳು ಯಾವುದೇ ಕ್ರಮಕೈಗೊಳ್ಳದ ಹಿನ್ನಲೆಯಲ್ಲಿ ಭಾರತೀಯ ಟೆಲಿಕಾಂ ನಿಯಂತ್ರಕ ಸಂಸ್ಥೆ (ಟ್ರಾಯ್) ಈ ಕ್ರಮಕ್ಕೆ ಮುಂದಾಗಿದೆ.

ಈ ಬಗ್ಗೆ ಮುನ್ಸೂಚನೆ ಪಡೆದುಕೊಂಡ ಭಾರತದ ಅಗ್ರಗಣ್ಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಇತ್ತೀಚೆಗೆ ಸಿಹಿ ಸುದ್ದಿ ನೀಡಿತ್ತು. 'ಪ್ರತಿ ಸೆಕೆಂಡುಗಳಿಗೆ ಶುಲ್ಕ' ಸೌಲಭ್ಯ ಜಾರಿಗೊಳಿಸಿದ್ದು, ಗ್ರಾಹಕರು ಈಗ ತಾವು ಕರೆ ಮಾಡಿದ ಅವಧಿಗೆ ಮಾತ್ರ ಶುಲ್ಕ ಕಟ್ಟುವ ಅವಕಾಶ ನೀಡಿತ್ತು. [ಏರ್ ಟೆಲ್ ಪ್ರೀಪೇಯ್ಡ್ ಗ್ರಾಹಕರಿಗೆ ಶುಭ ಸಂದೇಶ]

Trai

ಕಾಲ್‌ಡ್ರಾಪ್‌ಗಳಿಂದ ತೀವ್ರ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಇದರಿಂದ ಕಂಪನಿಗಳಿಗೆ ಯಾವುದಾದರೂ ಪ್ರಯೋಜನವಿದೆಯೇ ಅಥವಾ ಇದನ್ನು ತಪ್ಪಿಸಲು ಬೇರೆ ಯಾವುದಾದರೂ ಯೋಜನೆಗಳಿದೆಯೇ ಎಂಬುದನ್ನು ಪರಿಶೀಲಿಸಲು ದೂರವಾಣಿ ನಿಯಂತ್ರಕ ಸಂಸ್ಥೆ ಟ್ರಾಯ್ ಮುಂದಾಗಿದೆ.

ಕಾಲ್ ಡ್ರಾಪ್ ಬಗ್ಗೆ ಕಠಿಣ ಕ್ರಮ ಜರುಗಿಸಿದರೆ ಸೇವಾ ಸಂಸ್ಥೆಗಳು ಪ್ರತಿ ಕರೆಗೆ ಇಂತಿಷ್ಟು ದುಡ್ಡು ನೀಡಬೇಕಲ್ಲದೆ ಉಚಿತ ಟಾಕ್ ಟೈಂ ಕೂಡಾ ನೀಡಬೇಕಾಗುತ್ತದೆ ಎಂಬ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ. ಶುಕ್ರವಾರ ಈ ಬಗ್ಗೆ ಅಧಿಕೃತ ಘೋಷಣೆ ಸಾಧ್ಯತೆಯಿದೆ.

ಅದರೆ, ಕಾಲ್ ಡ್ರಾಪ್ ನಿಯಂತ್ರಣ ಸುಲಭಕ್ಕೆ ಸಾಧ್ಯವಿಲ್ಲ ಎಂದು ಟೆಲಿಕಾಂ ಸಂಸ್ಥೆಗಳಾದ ಏರ್ ಟೆಲ್, ಏರ್ ಸೆಲ್, ರಿಲಯನ್ಸ್ ..ಇತ್ಯಾದಿ ಈಗಾಗಲೇ ಹೇಳಿಕೆ ನೀಡಿವೆ. ಗ್ರಾಹಕರಿಗೆ ಹೊಸ ಯೋಜನೆ ನೀಡುವ ಮೂಲಕ 'ಕಾಲ್ ಡ್ರಾಪ್' ದಂಡ ತಪ್ಪಿಸಿಕೊಳ್ಳಲು ಸೇವಾ ಸಂಸ್ಥೆಗಳು ಮುಂದಾಗಿವೆ.

English summary
Telecom regulator TRAI is likely to soon come out with recommendations on compensating consumers for call drops.The operators said there are many things which are responsible for call drops and not all are under their control.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X