ಕರ್ನಾಟಕ ಸೇರಿ 17 ರಾಜ್ಯಗಳಿಗೆ 9,871 ಕೋಟಿ ರೂ.ಆದಾಯ ಕೊರತೆ ಅನುದಾನ ಬಿಡುಗಡೆ

ನವದೆಹೆಲಿ, ಅಕ್ಟೋಬರ್ 11: ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಇಂದು, ಕರ್ನಾಟಕ ಸೇರಿದಂತೆ 17 ರಾಜ್ಯಗಳಿಗೆ 9,871.00 ಕೋಟಿ ರೂ. 7 ನೇ ಮಾಸಿಕ ಕಂತಿನ ವಿಕೇಂದ್ರೀಕರಣ ನಂತರದ ಆದಾಯ ಕೊರತೆಯ (ಪಿಡಿಆರ್‌ಡಿ) ಅನುದಾನವನ್ನು ಬಿಡುಗಡೆ ಮಾಡಿದೆ. ಈ ಕಂತಿನ ಬಿಡುಗಡೆಯೊಂದಿಗೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಪಿಡಿಆರ್‌ಡಿ ಅನುದಾನವಾಗಿ 69,097.00 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದಂತಾಗಿದೆ.

ಈ ತಿಂಗಳು ಬಿಡುಗಡೆಯಾದ ಅನುದಾನದ ರಾಜ್ಯವಾರು ವಿವರಗಳು ಮತ್ತು 2021-22 ರಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಒಟ್ಟು ಪಿಡಿಆರ್‌ಡಿ ಆದಾಯ ಕೊರತೆ ಅನುದಾನದ ಮೊತ್ತವನ್ನು ಅನುಬಂಧದಲ್ಲಿ ನೀಡಲಾಗಿದೆ.

ಸಂವಿಧಾನದ ಪರಿಚ್ಛೇದ 275 ರ ಅಡಿಯಲ್ಲಿ ರಾಜ್ಯಗಳಿಗೆ ಪಿಡಿಆರ್‌ಡಿ ಅನುದಾನವನ್ನು ಒದಗಿಸಲಾಗಿದೆ. ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಮಾಸಿಕ ಕಂತುಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2021-22ರ ಅವಧಿಯಲ್ಲಿ 17 ರಾಜ್ಯಗಳಿಗೆ ಆಯೋಗವು ಪಿಡಿಆರ್‌ಡಿ ಅನುದಾನವನ್ನು ಶಿಫಾರಸು ಮಾಡಿದೆ.

Revenue Deficit Grant of Rs.9,871 crore released to 17 States

ಈ ಅನುದಾನವನ್ನು ಪಡೆಯಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು ನಿರ್ಧರಿಸುತ್ತದೆ. 2021-22ರ ಆರ್ಥಿಕ ವರ್ಷದ ಮೌಲ್ಯಮಾಪನವನ್ನು ಪರಿಗಣಿಸಿದ ನಂತರ ರಾಜ್ಯದ ಆದಾಯ ಮತ್ತು ವೆಚ್ಚದ ಮೌಲ್ಯಮಾಪನದ ನಡುವಿನ ಅಂತರವನ್ನು ಆಧರಿಸಿ ಅನುದಾನ ಮೊತ್ತವನ್ನು ನಿರ್ಧರಿಸಲಾಗಿದೆ.

ಹದಿನೈದನೇ ಹಣಕಾಸು ಆಯೋಗವು ಪಿಡಿಆರ್‌ಡಿ ಅನುದಾನಕ್ಕೆ ಶಿಫಾರಸು ಮಾಡಿದ ರಾಜ್ಯಗಳು: ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.

ಕೋವಿಡ್ ನಂತರದ ಆದಾಯ ಕೊರತೆ ಅನುದಾನದ ರಾಜ್ಯವಾರು ಮಾಹಿತಿ, ಬಿಡುಗಡೆಯಾಗಿರುವ ಪಿಡಿಆರ್‌ಡಿ ಅನುದಾನದ ರಾಜ್ಯವಾರು ವಿವರ:

ಕೋವಿಡ್ ನಂತರದ ಆದಾಯ ಕೊರತೆ ಅನುದಾನದ ರಾಜ್ಯವಾರು ಮಾಹಿತಿ
ಕ್ರಮ ಸಂಖ್ಯೆ ರಾಜ್ಯಗಳ ಹೆಸರು ಅಕ್ಟೋಬರ್ 2021 ರಲ್ಲಿ ಬಿಡುಗಡೆಯಾದ ಮೊತ್ತ, (7 ನೇ ಕಂತು) (ಕೋಟಿ ರೂ.ಗಳಲ್ಲಿ) 2021-22ರ ಅವಧಿಯಲ್ಲಿ ಬಿಡುಗಡೆಯಾದ ಒಟ್ಟು ಮೊತ್ತ (ಕೋಟಿ ರೂ.ಗಳಲ್ಲಿ)
1 ಆಂಧ್ರಪ್ರದೇಶ 1438.08 10066.58
2 ಅಸ್ಸಾಂ 531.33 3719.33
3 ಹರ್ಯಾಣ 11.00 77.00
4 ಹಿಮಾಚಲ ಪ್ರದೇಶ 854.08 5978.58
5 ಕರ್ನಾಟಕ 135.92 951.42
6 ಕೇರಳ 1657.58 11603.08
7 ಮಣಿಪುರ 210.33 1472.33
8 ಮೇಘಾಲಯ 106.58 746.08
9 ಮಿಜೋರಾಂ 149.17 1044.17
10 ನಾಗಾಲ್ಯಾಂಡ್ 379.75 2658.25
11 ಪಂಜಾಬ್ 840.08 5880.58
12 ರಾಜಸ್ಥಾನ 823.17 5762.17
13 ಸಿಕ್ಕಿಂ 56.50 395.50
14 ತಮಿಳು ನಾಡು 183.67 1285.67
15 ತ್ರಿಪುರ 378.83 2651.83
16 ಉತ್ತರಾಖಂಡ 647.67 4533.67
17 ಪಶ್ಚಿಮ ಬಂಗಾಳ 1467.25 10270.75
--- ಒಟ್ಟು 9,871.00 69097.00

ಹದಿನೈದನೆಯ ಹಣಕಾಸು ಆಯೋಗವು 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ. ಪಿಡಿಆರ್‌ಡಿ ಅನುದಾನವನ್ನು ಶಿಫಾರಸು ಮಾಡಿದೆ. ಈ ಪೈಕಿ 69,097.00 ಕೋಟಿ ರೂ.ಗಳನ್ನು (ಶೇ.58.33) ಇದುವರೆಗೆ ಬಿಡುಗಡೆ ಮಾಡಲಾಗಿದೆ.

ಎನ್.ಕೆ. ಸಿಂಗ್ ನೇತೃತ್ವದ ಹದಿನೈದನೇ ಹಣಕಾಸು ಆಯೋಗವು 2021-22 ರಿಂದ 2025-26ನೇ ಸಾಲಿನ ತನ್ನ ವರದಿಯನ್ನು ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಸಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಹಾಗೂ ರಾಜ್ಯಗಳೊಳಗಿನ ತೆರಿಗೆ ಹಂಚಿಕೆ, ಸ್ಥಳೀಯ ಸರ್ಕಾರಗಳ ಅನುದಾನ, ವಿಪತ್ತು ನಿರ್ವಹಣಾ ಅನುದಾನದ ಹೊರತಾಗಿ, ವಿದ್ಯುತ್ ವಲಯ, ಡಿಬಿಟಿ ಅಳವಡಿಕೆ, ಘನತ್ಯಾಜ್ಯ ನಿರ್ವಹಣೆ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ರಾಜ್ಯಗಳಿಗೆ ಕಾರ್ಯಕ್ಷಮತೆ ಪ್ರೋತ್ಸಾಹಕ ಪರೀಕ್ಷೆ ಮತ್ತು ಶಿಫಾರಸುಗಳನ್ನು ಆಯೋಗದ ವರದಿ ಹೊಂದಿದೆ. ಕೇಂದ್ರ ಸರ್ಕಾರವು 2020 ಜನವರಿ 30ರಂದು ಸಂಸತ್ತಿನಲ್ಲಿ ಮಂಡಿಸಿ, ಅಂಗೀಕರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+