ಈರುಳ್ಳಿ ಬೆಲೆ ಕೆಳಗೆ ಇಳಿಯಿತು, ಈಗ ಟೊಮೆಟೊ ಬೆಲೆ ಸಿಕ್ಕಾಪಟ್ಟೆ ಏರಿಕೆ

ನವದೆಹಲಿ, ಅಕ್ಟೋಬರ್ 9: ಈರುಳ್ಳಿ ಬೆಲೆ ಸಿಕ್ಕಾಪಟ್ಟೆ ಏರಿದ್ದನ್ನು ಕಂಡಿದ್ದು ಆಯಿತು. ಈಗ ಟೊಮೆಟೊ ಸರದಿ. ಕರ್ನಾಟಕ ಸೇರಿದ ಹಾಗೆ ಟೊಮೆಟೊ ಬೆಳೆಯುವ ಇತರೆಡೆಗಳಲ್ಲಿ ಭಾರೀ ಮಳೆಯ ಕಾರಣಕ್ಕೆ ಪೂರೈಕೆಗೆ ಹೊಡೆತ ಬಿದ್ದಿದೆ. ಆ ಹಿನ್ನೆಲೆಯಲ್ಲಿ ಬುಧವಾರ ನವದೆಹಲಿಯಲ್ಲಿ ಕೇಜಿ ಟೊಮೆಟೊ ಬೆಲೆ 80 ರುಪಾಯಿ ತಲುಪಿದೆ.

ಇನ್ನು ಈರುಳ್ಳಿ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕೇಜಿ ಈರುಳ್ಳಿ ಬೆಲೆ 60 ರುಪಾಯಿ ಸಮೀಪ ಇದೆ. ಇದು ದೆಹಲಿಯಲ್ಲಿನ ಬುಧವಾರದ ಬೆಲೆಯಾಗಿದೆ. ಪೂರೈಕೆ ಮೇಲೆ ಪರಿಣಾಮ ಬೀರಿರುವ ಕಾರಣಕ್ಕೆ ಹೀಗೆ ಕಳೆದ ಕೆಲವು ದಿನಗಳಿಂದ ಟೊಮೆಟೊ ಬೆಲೆಯಲ್ಲಿ ಏರಿಕೆ ಆಗಿದೆ.

ಮದರ್ ಡೇರಿಯ ಸಫಲ್ ಮಳಿಗೆಗಳಲ್ಲಿ ಟೊಮೆಟೊ ಕೇಜಿ ದರ 58 ರುಪಾಯಿ ಇದೆ. ಇನ್ನು ಸ್ಥಳೀಯ ಮಾರಾಟಗಾರರು ಬುಧವಾರ 60ರಿಂದ 80 ರುಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ಅದು ಕೂಡ ಗುಣಮಟ್ಟ ಹಾಗೂ ಯಾವ ಪ್ರದೇಶ ಎಂಬ ಆಧಾರದಲ್ಲಿ ಬೆಲೆ ನಿರ್ಧರಿಸುತ್ತಾರೆ.

Tomato Price Huge Raise In Delhi Reached 60 Rupees

ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ ವಾರ ಕೇಜಿಗೆ 45 ರುಪಾಯಿ ಇದ್ದ ಟೊಮೆಟೊ ಬೆಲೆ ಈ ವಾರ 60 ರುಪಾಯಿಗೆ ಏರಿಕೆಯಾಗಿದೆ. ಕರ್ನಾಟಕ, ತೆಲಂಗಾಣ ಸೇರಿದಂತೆ ಟೊಮೆಟೊ ಬೆಳೆಯುವ ವಿವಿಧ ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಆಗುತ್ತಿದ್ದು, ಬೆಳೆ ಹಾನಿಯಾಗಿದೆ. ಪೂರೈಕೆ ಕುಂಠಿತವಾಗಿದೆ. ದೆಹಲಿ ಮಾತ್ರ ಅಲ್ಲ. ಮುಂಬೈಯಲ್ಲಿ ಟೊಮೆಟೊ ಕೇಜಿಗೆ 54 ರು., ಚೆನ್ನೈನಲ್ಲಿ 40 ಹಾಗೂ ಕೋಲ್ಕತ್ತಾದಲ್ಲಿ 60 ರುಪಾಯಿ ದರ ಇದೆ.

ಈ ಮಧ್ಯೆ ಈರುಳ್ಳಿ ಬೆಲೆ ಕೇಜಿಗೆ ಅರವತ್ತಕ್ಕಿಂತ ಕೆಳಗೆ ಬಂದಿದೆ. ಸಹಕಾರ ವಲಯದಲ್ಲಿ ಈರುಳ್ಳಿ ಕೇಜಿಗೆ ರು. 23.90ರಂತೆ ಮಾರಾಟ ಮಾಡಲಾಗುತ್ತಿದೆ. ಒಟ್ಟು 56,700 ಟನ್ ಈರುಳ್ಳಿ ದಾಸ್ತಾನು ಮಾಡಲಾಗಿತ್ತು. ಅದರಲ್ಲಿ 18,000 ಟನ್ ದೆಹಲಿ ಸೇರಿದಂತೆ ವಿವಿಧ ಮಾರುಕಟ್ಟೆಗೆ ರವಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+