ಆಭರಣ ಖರೀದಿಸುವವರ ಗಮನಕ್ಕೆ: ನಗರವಾರು 22 ಕ್ಯಾರಟ್ ಚಿನ್ನದ ಬೆಲೆ ಪಟ್ಟಿ ಇಲ್ಲಿದೆ

ಚಿನ್ನ ಮತ್ತು ಬೆಳ್ಳಿಯನ್ನ ಭಾರತೀಯರ ಬದುಕಿನ ಅವಿಭಾಜ್ಯ ಅಂಗ ಎಂದೇ ಹೇಳಬಹುದು. ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಆಭರಣ ಪ್ರಿಯರು ಚಿನ್ನ ಖರೀದಿಸಲು ಕಾತುರರಾಗಿರುತ್ತಾರೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳು ಹಾಗೂ MCX ಟ್ರೆಂಡ್‌ಗಳ ಆಧಾರದ ಮೇಲೆ ಪ್ರತಿದಿನ ಚಿನ್ನದ ದರದಲ್ಲಿ ಬದಲಾವಣೆಗಳಾಗುತ್ತಿರುತ್ತವೆ.

ಇಂದು ಕೂಡ ರಾಜ್ಯ ರಾಜಧಾನಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ನಿಖರವಾದ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Today s Gold and Silver Prices Sept 01 2026 Check City-wise 22K Rates and MCX Trend in Bengaluru

ಆಭರಣ ಖರೀದಿಸುವವರಿಗೆ ಹಾಗೂ ಹೂಡಿಕೆದಾರರಿಗೆ ಪ್ರಮುಖವಾಗಿ ಬೇಕಾಗಿರುವುದು ಸ್ಥಳೀಯ ಮಾರುಕಟ್ಟೆ ದರ ಅಲ್ಲವೇ? ಹಾಗೆ ನೋಡುವುದಾದ್ರೆ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಇಂದು ಕೊಂಚ ದುಬಾರಿಯಾಗಿದೆ. ಮಾರುಕಟ್ಟೆಯ ಅಧಿಕೃತ ಮೂಲಗಳ ಪ್ರಕಾರ, ಇಂದಿನ 22 ಕ್ಯಾರಟ್ ಆಭರಣ ಚಿನ್ನದ ಬೆಲೆಯು ಪ್ರತಿ 1 ಗ್ರಾಂಗೆ 14,385 ರೂಪಾಯಿ ಆಗಿದೆ.

ಹಾಗೆಯೇ 24 ಕ್ಯಾರಟ್ ಶುದ್ಧ ಚಿನ್ನದ ದರವು 1 ಗ್ರಾಂಗೆ 15,693 ರೂಪಾಯಿಗೆ ತಲುಪಿದೆ. ಇನ್ನು ಬೆಳ್ಳಿ ಮಾರುಕಟ್ಟೆಯತ್ತ ಗಮನ ಹರಿಸಿದರೆ, 1 ಗ್ರಾಂ ಬೆಳ್ಳಿಯ ಬೆಲೆ 267 ರೂಪಾಯಿ ಇದ್ದು, 10 ಗ್ರಾಂ ಬೆಳ್ಳಿಗೆ 2,669 ರೂಪಾಯಿ ಮತ್ತು 1 ಕೆಜಿ ಬೆಳ್ಳಿಗೆ ಬರೋಬ್ಬರಿ 2,66,900 ರೂಪಾಯಿ ನಿಗದಿಯಾಗಿದೆ.

ನಿನ್ನೆ ಮತ್ತು ಇಂದಿನ ಬೆಲೆಗಳ ಹೋಲಿಕೆ ಮಾಡಿ ನೋಡುವುದಾದರೆ, ನಿನ್ನೆ ಅಂದರೆ ಆಗಸ್ಟ್ 31ರಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,370 ರೂಪಾಯಿ ಇತ್ತು. ಆದರೆ ಇಂದು (ಸೆಪ್ಟೆಂಬರ್ 1) ಈ ಬೆಲೆಯಲ್ಲಿ 15 ರೂಪಾಯಿ ಏರಿಕೆಯಾಗಿದ್ದು, 14,385 ರೂಪಾಯಿಗೆ ತಲುಪಿದೆ.

ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆ ಕೂಡ ನಿನ್ನೆ 15,677 ರೂ. ಇತ್ತು, ಇಂದು 16 ರೂ. ಏರಿಕೆಯಾಗಿ 15,693 ರೂ. ಆಗಿದೆ.

ಇನ್ನೂ ಈ ಬೆಳ್ಳಿ ಬೆಲೆಯನ್ನ ಗಮನಿಸಿದರೆ, ನಿನ್ನೆ ಒಂದು ಕೆಜಿ ಬೆಳ್ಳಿಗೆ 2,66,900 ರೂಪಾಯಿ ಇತ್ತು. ಇಂದು ಕೂಡ ಅದೇ 2,66,900 ರೂಪಾಯಿ ಮುಂದುವರಿದಿದ್ದು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಮತ್ತು ಬೆಲೆ ಸ್ಥಿರವಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ ಹೀಗಿದೆ:

* ಬೆಂಗಳೂರು - 14,385 ರೂಪಾಯಿ

* ದೆಹಲಿ - 14,400 ರೂಪಾಯಿ

* ಚೆನ್ನೈ - 14,385 ರೂಪಾಯಿ

* ಮುಂಬೈ - 14,385 ರೂಪಾಯಿ

* ಹೈದರಾಬಾದ್ - 14,385 ರೂಪಾಯಿ

* ಅಹಮದಾಬಾದ್ - 14,390 ರೂಪಾಯಿ

* ಪುಣೆ - 14,385 ರೂಪಾಯಿ

* ಕೋಲ್ಕತ್ತಾ - 14,385 ರೂಪಾಯಿ

ಒಟ್ನಲ್ಲಿ , ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳು ಹಾಗೂ ಮುಂಬರುವ ಹಬ್ಬದ ಸೀಸನ್‌ ಕಾರಣದಿಂದಾಗಿ ಚಿನ್ನದ ಬೆಲೆಯಲ್ಲಿ ಸಣ್ಣ ಮಟ್ಟದ ಏರಿಕೆ ಕಂಡುಬಂದಿದೆ. ಆದರೆ ಬೆಳ್ಳಿಯ ಬೆಲೆ ನಿನ್ನೆಯಷ್ಟೇ ಇದ್ದು ಸ್ಥಿರತೆ ಕಾಯ್ದುಕೊಂಡಿದೆ. ಗ್ರಾಹಕರು ಹೂಡಿಕೆ ಮಾಡುವ ಮುನ್ನ ನಿಖರವಾದ ದರಗಳನ್ನು ಪರಿಶೀಲಿಸಿ ಮುಂದುವರಿಯುವುದು ಸೂಕ್ತ.

ಗಮನಿಸಿ: ಆಭರಣ ಖರೀದಿಸುವಾಗ ಚಿನ್ನದ ಅಂಗಡಿಗಳಲ್ಲಿ ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜ್‌ಗಳು ಪ್ರತ್ಯೇಕವಾಗಿರಲಿವೆ ಎಂಬುದನ್ನು ಗ್ರಾಹಕರು ಮರೆಯಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+