ಚಿನ್ನದ ಬೆಲೆ ಏರಿಕೆ: ಜೂನ್ 16ರ ದರ ಹೀಗಿದೆ
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಲೇ ಸಾಗಿದೆ. ಮಂಗಳವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 46,000 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 47,200 ರುಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 600 ರುಪಾಯಿ ಹೆಚ್ಚಾಗಿದ್ದು, 47,700 ರುಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
SBI ಚಿನ್ನದ ಮೇಲಿನ ಸಾಲ ಯೋಜನೆ: ಬಡ್ಡಿದರ, ಅರ್ಹತೆ, ಪಾವತಿ ಆಯ್ಕೆಯ ಕುರಿತು ಮಾಹಿತಿ ಇಲ್ಲಿದೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜೂನ್ 16: 44,600-48,700 (20 ರುಪಾಯಿ ಏರಿಕೆ)
ಜೂನ್ 15: 44,580-48,680
ಜೂನ್ 14: 44,860-48,960
ಜೂನ್ 13: 44,850-48,950
ದೆಹಲಿಯಲ್ಲಿ ಚಿನ್ನದ ಬೆಲೆ
ಜೂನ್ 16: 46,000-47,200 (ಬದಲಾವಣೆ ಇಲ್ಲ)
ಜೂನ್ 15: 46,000-47,200
ಜೂನ್ 14: 46,260-47,460
ಜೂನ್ 13:46,250-47,450
ಚೆನ್ನೈನಲ್ಲಿ ಚಿನ್ನದ ಬೆಲೆ
ಜೂನ್ 16: 45,530-49,670 (210 ರುಪಾಯಿ ಏರಿಕೆ)
ಜೂನ್ 15: 45,320-49,450
ಜೂನ್ 14: 45,530-49,660
ಜೂನ್ 13: 45,520-49,650
ಮುಂಬೈ ಚಿನ್ನದ ಬೆಲೆ
ಜೂನ್ 16: 46,100-47,100 (100 ರುಪಾಯಿ ಏರಿಕೆ)
ಜೂನ್ 15: 46,000-47,100
ಜೂನ್ 14: 46,010-47,010
ಜೂನ್ 13: 46,000-47,000
ಜೈಪುರ ಚಿನ್ನದ ಬೆಲೆ
ಜೂನ್ 16: 46,000-47,200 (ಬದಲಾವಣೆ ಇಲ್ಲ)
ಜೂನ್ 15: 46,000-47,200
ಜೂನ್ 14: 46,260-47,460
ಜೂನ್ 13: 46,250-47,450
ಚಂಡೀಗಡ ಚಿನ್ನದ ಬೆಲೆ
ಜೂನ್ 16: 46,000-47,000 (ಬದಲಾವಣೆ ಇಲ್ಲ)
ಜೂನ್ 15: 46,000-47,000
ಜೂನ್ 14: 46,010-47,010
ಜೂನ್ 13: 46,000-48,000
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.