ಮಲ್ಯ ಈಗಲೂ ಸಾವಿರಾರು ಕೋಟಿ ರು ಒಡೆಯ: ಟೈಮ್ಸ್ ನೌ

ವಿವಿಧ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ಇಂಗ್ಲೆಂಡ್ ಗೆ ತೆರಳಿರುವ ವಿಜಯ್ ಮಲ್ಯ ಅವರು ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡು ಮಂಕುಬೂದಿ ಹಾಕಿ, ಇಂಗ್ಲೆಂಡಿನಲಿ ಐಷಾರಾಮಿ ಜೀವನ ನಡೆಸಿರುವುದು ಖಚಿತವಾಗಿದೆ.

ಬೆಂಗಳೂರು, ಮೇ 09:ವಿವಿಧ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ಇಂಗ್ಲೆಂಡ್ ಗೆ ತೆರಳಿರುವ ವಿಜಯ್ ಮಲ್ಯ ಅವರು ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡು ಮಂಕುಬೂದಿ ಹಾಕಿ, ಇಂಗ್ಲೆಂಡಿನಲಿ ಐಷಾರಾಮಿ ಜೀವನ ನಡೆಸಿರುವುದು ಖಚಿತವಾಗಿದೆ.

ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆದುಕೊಂಡು ಬರುವುದು ಅಷ್ಟು ಸುಲಭದ ಕೆಲಸವಲ್ಲ. ಹಲವು ಪ್ರಕರಣಗಳ ವಿಚಾರಣೆಗಾಗಿ ಮಲ್ಯರನ್ನು ಭಾರತಕ್ಕೆ ಕಳಿಸಲು ಯುಕೆ ಸರ್ಕಾರ ಒಪ್ಪಿಗೆಯೋ ನೀಡಿದೆ. ಆದರೆ, ಕಾನೂನಿನ ತೊಡಕಿನಿಂದ ಭಾರತದ ಕೈಕಟ್ಟಿ ಹಾಕಿದೆ.[ಮಲ್ಯ ಭಾರತಕ್ಕೆ ಬರಲು ಕನಿಷ್ಠ 10 ವರ್ಷವಾದರೂ ಬೇಕು!]

ರೆಡ್ ಕಾರ್ನರ್ ನೋಟಿಸ್, ಸಮನ್ಸ್, ಘೋಷಿತ ಅಪರಾಧಿ, ಎಫ್ ಐಆರ್ ಯಾವುದಕ್ಕೂ ಬಗ್ಗದೆ ನಾನು ಬಂಡ ಅಲ್ಲ ಬಹದ್ದೂರ್ ಎನ್ನುತ್ತಿರುವ ಮಲ್ಯ ಅವರು ಇಂಗ್ಲೆಂಡಿನಲ್ಲಿ ಹೊಂದಿರುವ ಆಸ್ತಿ ವಿವರಗಳನ್ನು ಟೈಮ್ಸ್ ನೌ ಬಹಿರಂಗಪಡಿಸಿದೆ.

Times Now exposes Vijay Mallya's secret Loot

ಭಾರತ ಮತ್ತು ಇಂಗ್ಲೆಂಡ್ ನಡುವೆ 1992ರಲ್ಲಿ ಮಾಡಿಕೊಂಡ ಪರಸ್ಪರ ಕಾನೂನು ಸಹಕಾರ ಒಪ್ಪಂದ (ಎಂಎಲ್ ಎಟಿ) ದ ಪ್ರಕಾರ ತನಿಖೆ ಅಥವಾ ವಿಚಾರಣೆಗಳಲ್ಲಿ ಪರಸ್ಪರ ಸಾಕ್ಷಿ ಒದಗಿಸಲು ಕಸ್ಟಡಿಯಲ್ಲಿದ್ದರೂ ವ್ಯಕ್ತಿಯನ್ನು ಹಸ್ತಾಂತರಿಸಲು ಬದ್ಧರಾಗಿರುವುದೇ ಈ ಒಪ್ಪಂದದ ಪ್ರಮುಖ ಅಂಶ. ಆದರೆ ವಿಜಯ್ ಮಲ್ಯ ಇಂಗ್ಲೆಂಡ್ ನಲ್ಲಿ ಕಸ್ಟಡಿಯಲ್ಲಿ ಇಲ್ಲ ಎಂಬ ತೊಡಕು ಸಹ ಇದೆ.[ಚಿನ್ನಸ್ವಾಮಿ ಸ್ಟೇಡಿಯಂನಿಂದ ಲಂಡನ್ ನ ಕೋರ್ಟ್ ಬೆಂಚಿನವರೆಗೆ]

ಈ ನಡುವೆ ಟೈಮ್ಸ್ ನೌ ಪಡೆದಿರುವ ದಾಖಲೆಗಳ ಪ್ರಕಾರ, ಮಲ್ಯ ಅವರ ಆಸ್ತಿ ಮೌಲ್ಯ ಕುಗ್ಗಿಲ್ಲ. 9,000 ಕೋಟಿ ರು ಸಾಲ ತೀರಿಸುವುದು ಕಷ್ಟದ ಕೆಲಸವೇನಲ್ಲ. ಹಾಂಕಾಂಗ್ ಅಲ್ಲದೆ, ಲಂಡನ್ ನಲ್ಲಿ ಐದು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ.

* ಲಂಡನ್ನಿನ ರೆಜೆಂಟ್ ಪಾರ್ಕ್ ಕಾಮ್ ವಾಲ್ ನಲ್ಲಿರುವ 516 ಕೋಟಿ ರು ಮೌಲ್ಯದ ಬಂಗಲೆ
* ಲಂಡನ್ನಿನ ಹಾರ್ಟ್ ಫೋರ್ಡ್ ಶೈರ್ ಟ್ವೀನ್ ವಿಲೇಜ್ ನಲ್ಲಿರುವ ಕ್ವೀನ್ ಹೂ ಲ್ಯಾಂಡ್ ಲೇಡಿ ವಾಕ್ ಬಂಗಲೆ -405 ಕೋಟಿ ರು.[ಹಾಸ್ಯ: ಮಲ್ಯಗೆ ಸಿಕ್ತು ಬೇಲು, ಪತ್ತೇದಾರಿ ಪ್ರತಿಭಾಗೆ ಸೋಲು]
* ಸ್ಕಾಟ್ಲೆಂಡ್ ನಲ್ಲಿರುವ ಪರ್ತ್ ಶೈರ್ ವಿಲೇಜ್ ಕ್ಯಾಸಲ್- 433 ಕೋಟಿ ರು
* ಸ್ಟೋ ವಿಲೇಜ್ -ಕ್ಯಾಸಲ್- 600 ಕೋಟಿ ರು

ಇದಲ್ಲದೆ,
* ಬೆಂಗಳೂರಿನಲ್ಲಿರುವ ಟವರ್ ಫ್ಲಾಟ್ - 565 ಕೋಟಿ ರು
* ಯುಬಿ ಸಿಟಿ ಆಸ್ತಿ-600 ಕೋಟಿ ರು ಆಸ್ತಿ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+