ಟಿಕ್ ಟಾಕ್ ಬ್ಯಾನ್: ಬೈಟ್ ಡ್ಯಾನ್ಸ್ ಕಂಪನಿಗೆ 45,000 ಕೋಟಿ ನಷ್ಟ ಸಾಧ್ಯತೆ
ನವದೆಹಲಿ, ಜುಲೈ 2: ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ ಭಾರತ ಸರ್ಕಾರ ಜೂನ್ 29ರಂದು ಆದೇಶ ಹೊರಡಿಸಿದೆ. ಅಂತೆಯೇ ಈಗಾಗಲೇ ಈ ಆ್ಯಪ್‌ಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಭಾರತದಲ್ಲಿ ಭಾರೀ ಜನಪ್ರಿಯವಾಗಿದ್ದ ಟಿಕ್ ಟಾಕ್ ಒಂದೇ ಒಂದು ಆ್ಯಪ್ ಬ್ಯಾನ್‌ನಿಂದಾಗಿ ಎಷ್ಟು ನಷ್ಟ ಅನುಭವಿಸಬಹುದು ಎಂದು ನೀವು ಊಹಿಸಿರಲು ಸಾಧ್ಯವಿಲ್ಲ.
Recommended Video
ಹೌದು, 59 ಚೀನೀ ಆ್ಯಪ್‌ಗಳನ್ನು ನಿಷೇಧಿಸುವ ಭಾರತೀಯ ಸರ್ಕಾರದ ನಿರ್ಧಾರವು ಕೇವಲ ಚೀನಾ ಮಾಧ್ಯಮಗಳ ಹೆಡ್‌ಲೈನ್ ಅಷ್ಟೇ ಆಗಿಲ್ಲ. ವಿಶ್ವದ ಬಹುತೇಕ ರಾಷ್ಟ್ರಗಳ ಈ ಕುರಿತು ವ್ಯಾಪಕ ಪ್ರಚಾರ ಕೂಡ ಆಗಿದೆ.

ಟಿಕ್ ಟಾಕ್ ಬ್ಯಾನ್‌ನಿಂದ 45,000 ಕೋಟಿ ನಷ್ಟ ಸಾಧ್ಯತೆ
ಚೀನಾದ ಸರ್ಕಾರಿ ಮಾಧ್ಯಮ ದಿ ಗ್ಲೋಬಲ್ ಟೈಮ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಟಿಕ್‌ಟಾಕ್ ಮತ್ತು ಹೆಲೋ ಅಪ್ಲಿಕೇಶನ್‌ಗಳ ಮೂಲ(Parent) ಕಂಪನಿಯಾದ ಬೈಟ್‌ಡ್ಯಾನ್ಸ್ಗೆ ಈ ಆ್ಯಪ್‌ಗಳ ನಿಷೇಧದಿಂದಾಗಿ 6 ಬಿಲಿಯನ್ ಡಾಲರ್ (ಸುಮಾರು 45 ಸಾವಿರ ಕೋಟಿ) ವರೆಗೆ ನಷ್ಟವಾಗಬಹುದು.

ಮೇ ತಿಂಗಳಿನಲ್ಲಿ 112 ಮಿಲಿಯನ್ ಡೌನ್‌ಲೋಡ್
ಮೊಬೈಲ್ ಅಪ್ಲಿಕೇಶನ್ ವಿಶ್ಲೇಷಣಾ ಕಂಪನಿಯಾದ ಸೆನ್ಸಾರ್ ಟ್ವೊರ್ನ ಮಾಹಿತಿಯ ಪ್ರಕಾರ, ಮೇ ತಿಂಗಳಲ್ಲಿ ಟಿಕ್‌ಟಾಕ್ ಅನ್ನು 112 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ ಮತ್ತು ಭಾರತದಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿದ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ. ಇದರ ಅರ್ಥ ಭಾರತದಲ್ಲಿ ಟಿಕ್ ಟಾಕ್ ಕ್ರೇಜ್ ಎಷ್ಟರ ಮಟ್ಟಿಗೆ ಇತ್ತು ಎಂಬುದು ಈ ಮೂಲಕ ಸಾಭೀತಾಗಿದೆ. ಇನ್ನೊಂದು ಉದಾಹರಣೆಯೆಂದರೆ ಅಮೆರಿಕಾದಲ್ಲಿ ಡೌನ್‌ಲೋಡ್ ಮಾಡಿದ ಎರಡು ಪಟ್ಟು ಹೆಚ್ಚು ಎಂದು ವರದಿ ಹೇಳಿದೆ.

ಜೂನ್ 29ರಂದು 59 ಚೀನಿ ಆ್ಯಪ್‌ಗಳನ್ನು ನಿಷೇಧಿಸಿದ್ದ ಭಾರತ
ಹೌದು ಭಾರತ ಸರ್ಕಾರ ಸೋಮವಾರ ಟಿಕ್‌ಟಾಕ್, ಶೇರ್ ಇಟ್, ಯುಸಿ ಬ್ರೌಸರ್, ಬೈದು ನಕ್ಷೆ, ಹೆಲೋ, ಮಿ ಸಮುದಾಯ, ಕ್ಲಬ್ ಫ್ಯಾಕ್ಟರಿ, ವೀಚಾಟ್ ಮತ್ತು ಯುಸಿ ನ್ಯೂಸ್ ಸೇರಿದಂತೆ ಚೀನಾ ಲಿಂಕ್‌ಗಳೊಂದಿಗಿನ 59 ಆ್ಯಪ್‌ಗಳನ್ನು ನಿಷೇಧಿಸಿದೆ. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಅಡಿಯಲ್ಲಿ ಈ ಆ್ಯಪ್‌ಗಳನ್ನು ನಿಷೇಧ ಮಾಡಲಾಗಿದೆ.

ಭಾರತದ ನಿರ್ಧಾರವನ್ನು ಸ್ವಾಗತಿಸಿದ ಅಮೆರಿಕಾ
ಚೀನಾದ ಡಜನ್‌ಗಟ್ಟಲೆ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಬಳಿಕ ಭಾರತದ ನಿರ್ಧಾರವನ್ನು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಬುಧವಾರ ಸ್ವಾಗತಿಸಿದ್ದು, ಇದು "ಭಾರತದ ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications