ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕ್‌ಗಳು
Personal Loan: ತಮ್ಮ ಅವಶ್ಯಕತೆಗಳನ್ನ ಈಡೇರಿಕೊಳ್ಳಲು ಬಹುತೇಕ ಮಂದಿ ಪರ್ಸನಲ್ ಲೋನ್‌ಗಳ ಮೊರೆ ಹೋಗುತ್ತಾರೆ. ಆದರೆ, ಅವರು ಯಾವ ಮಾರ್ಗದಲ್ಲಿ ಸಾಲ ಪಡೆಯುತ್ತಾರೆ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಹಾಗಾದ್ರೆ, ಕಡಿಮೆ ಬಡ್ಡಿ ದರದಲ್ಲಿ ಶೀಘ್ರವೇ ಸಾಲ ನೀಡುವ ಈ ಬ್ಯಾಂಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
ಹೌದು.. ಸಾಮಾನ್ಯವಾಗಿ ಲೋನ್‌ಗಳ ಮೊರೆ ಹೋಗುವವರೇ ಮದ್ಯಮ ವರ್ಗದ ಜನರು. ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಇವರು ಲೋನ್‌ಗಳ ಮೊರೆ ಹೋಗಲೇಬೇಕಾಗುತ್ತದೆ. ಇಂತಹವರಿಗಂತಲೇ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಬ್ಯಾಂಕ್‌ಗಳಿವೆ. ಹಾಗಾದ್ರೆ ಅವುಗಳು ಯಾವುವು ಹಾಗೂ ಬಡ್ಡಿ ಪ್ರಮಾಣ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೇರೆಡೆ ಯಾರ ಬಳಿಯಾದರೂ ಅಥವಾ ಕೆಲ ಬ್ಯಾಂಕ್‌ಗಳಿಂದ ಸಾಲ ಪಡೆದರೆ ಅವುಗಳ ಬಡ್ಡಿದರ ತುಸು ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಸರಿಯಾದ ಬ್ಯಾಂಕ್ ಆಯ್ಕೆ ಮಾಡುವುದು ಮುಖ್ಯವಾಗುತ್ತದೆ.
2025 ಜೂನ್‌ನಲ್ಲಿ ಆರ್‌ಬಿಐ ರೆಪೋ ರೇಟ್ 0.5% ಇಳಿಸಿದ ನಂತರ, ಹಲವು ಸಾಲಗಳ ಬಡ್ಡಿ ದರದಲ್ಲಿ ಬದಲಾವಣೆಯಾಗಿದೆ. ಪರ್ಸನಲ್ ಲೋನ್‌ಗಳಲ್ಲಿಯೂ ಇದನ್ನು ಕಾಣಬಹುದಾಗಿದೆ.
ಬಡ್ಡಿದರವು ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ ಹಾಗೂ ಅವಧಿಯ ಮೇಲೆ ಅವಲಂಬಿತ ಆಗಿರುತ್ತದೆ. ಆದ್ದರಿಂದ ಮೊದಲು ನೀವು ಸಾಲ ಪಡೆಯಲು ಬಯಸುವ ಬ್ಯಾಂಕ್‌ಗಳನ್ನ ಸಂಪರ್ಕಿಸಿ ನಿಮ್ಮ ಪ್ರೊಫೈಲ್‌ಗೆ ನೀಡುವ ದರ ತಿಳಿದುಕೊಳ್ಳುವುದು ಉತ್ತಮ. ಇನ್ನು 2025 ಆಗಸ್ಟ್‌ನಂತೆ ಭಾರತದ ಪ್ರಮುಖ ಬ್ಯಾಂಕ್‌ಗಳ ಪರ್ಸನಲ್ ಲೋನ್ ಬಡ್ಡಿದರ ಹಾಗೂ ಶುಲ್ಕಗಳ ವಿವರವನ್ನು ಇಲ್ಲಿ ಬೀಡಲಾಗಿದೆ ತಿಳಿಯಿರಿ.
ಬ್ಯಾಂಕ್‌ಗಳ ಪರ್ಸನಲ್ ಲೋನ್ ಬಡ್ಡಿದರ ಹಾಗೂ ಶುಲ್ಕಗಳು
* ಕ್ಯಾನರಾ ಬ್ಯಾಂಕ್: ಬಡ್ಡಿದರ ಶೇಕಡ 9.95ರಿಂದ ಶೇಕಡ 15.40ರ ವರೆಗೆ, ಪ್ರೊಸೆಸಿಂಗ್ ಶುಲ್ಕ ಶೇಕಡ 1ರಷ್ಟು ಇರುತ್ತದೆ.
* ಆಕ್ಸಿಸ್ ಬ್ಯಾಂಕ್: ಬಡ್ಡಿದರ ಶೇಕಡ 9.99ರಿಂದ ಶೇಕಡ 22.00ರವರೆಗೆ, ಪ್ರೊಸೆಸಿಂಗ್ ಶುಲ್ಕ ಶೇಕಡ 2ರ ವರೆಗೆ ಇರುತ್ತದೆ.
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಬಡ್ಡಿದರ ಶೇಕಡ 10.35ರಿಂದ ಶೇಕಡ 14.45ರ ವರೆಗೆ, ಪ್ರೊಸೆಸಿಂಗ್ ಶುಲ್ಕ ಶೇಕಡ 1ವರೆಗೆ ಇರುತ್ತದೆ.
* ಬ್ಯಾಂಕ್ ಆಫ್ ಬರೋಡಾ: ಬಡ್ಡಿದರ ಶೇಕಡ 10.40ರಿಂದ ಶೇಕಡ 18.20ರ ವರೆಗೆ, ಪ್ರೊಸೆಸಿಂಗ್ ಶುಲ್ಕ ₹1,000 ಅಥವಾ ಶೇಕಡ 1ವರೆಗೆ ಇರಲಿದೆ.
* ಐಸಿಐಸಿಐ ಬ್ಯಾಂಕ್: ಬಡ್ಡಿದರ ಶೇಕಡ 10.60ರ ವರೆಗೂ ಇರಲಿದೆ. ಪ್ರಾಸೆಸಿಂಗ್ ಶುಲ್ಕ ಶೇಕಡ 2ಕ್ಕೂ ಅಧಿಕ ತೆರಿಗೆ ಇರಲಿದೆ.
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಬಡ್ಡಿದರ ಶೇಕಡ 10.10ರಿಂದ ಶೇಕಡ 15.10ರಷ್ಟು ಇರಲಿದೆ, ಪ್ರೊಸೆಸಿಂಗ್ ಶುಲ್ಕ ಶೇಕಡ 1ರ ವರೆಗೆ ಇರಲಿದೆ.
* ಎಚ್‌ಡಿಎಫ್‌ಸಿ ಬ್ಯಾಂಕ್: ಬಡ್ಡಿದರ ಶೇಕಡ 10.90ರಿಂದ 24.00ರವರೆ ಇರಲಿದೆ. ಪ್ರೋಸೆಸಿಂಗ್ ಶುಲ್ಕ ₹6,500 ವರೆಗೆ ಇರಲಿದೆ.
* ಕೋಟಕ್ ಮಹೀಂದ್ರಾ ಬ್ಯಾಂಕ್: ಬಡ್ಡಿದರ ಶೇಕಡ 10.99ರಿಂದ ಆರಂಭ ಆಗಲಿದೆ. ಪ್ರಾಸೆಸಿಂಗ್ ಶುಲ್ಕ ಶೇಕಟ 2ರ ವರೆಗೆ ಇರಲಿದೆ.
ಗ್ರಾಹಕರು ಸಾಲ ಪಡೆಯುವ ಮುನ್ನ ಕೆಲವು ಜಾಗ್ರತೆಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ. ಯಾವಾಗಲೂ ಆರ್‌ಐಗೆ ರಿಜಿಸ್ಟರ್ ಆಗಿರುವ ಬ್ಯಾಂಕ್‌ಗಳು ಅಥವಾ ಪ್ರಸಿದ್ಧ ಎನ್‌ಬಿಎಫ್‌ಸಿಗಳಿಂದ ಮಾತ್ರ ಲೋನ್ ಪಡೆಯುವುದು ಉತ್ತಮ ಹಾಗೂ ಸುರಕ್ಷಿತ.
ಅಪರಿಚಿತ ಫಿನ್‌ಟೆಕ್ ಆ್ಯಪ್‌ಗಳು ಅಥವಾ ಹೊಸ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್ಲೈ ಮಾಡುವುದನ್ನು ತಪ್ಪಿಸಿ. ಸಾಲ ಒಪ್ಪಂದವನ್ನು ಸಂಪೂರ್ಣ ಓದಿ, ಇನ್ಸೂರೆನ್ಸ್ ಮುಂತಾದ ಹೆಚ್ಚುವರಿ ವೆಚ್ಚಗಳನ್ನು ಬ್ಯಾಂಕ್‌ಗಳು ಡೀಫಾಲ್ಟ್ ಆಗಿ ಸೇರಿಸಿರುವುದನ್ನು ಗಮನಿಸಿ. ಇಲ್ಲಿದಿದ್ದರೆ, ನಿಮ್ಮ ಮಾಸಿಕ ಇಎಂಐ ಹೆಚ್ಚಳ ಆಗಲಿದ್ದು, ಇದರಿಂದ ನಿಮಗೆ ತುಂಬಾ ನಷ್ಟ ಆಗಲಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸೂಕ್ಷ್ಮವಾಗಿ ಯೋಚಿಸಿ ಇಂತಹ ನಿರ್ಧಾರಗಳಿಗೆ ಕೈಹಾಕುವುದು ಉತ್ತಮ.












Click it and Unblock the Notifications