ಷೇರು ಮಾರುಕಟ್ಟೆಯಲ್ಲಿ 'ರಕ್ತಪಾತ' 6 ವರ್ಷಗಳಲ್ಲೇ ಗರಿಷ್ಠ ಕುಸಿತ
ಮುಂಬೈ, ಫೆಬ್ರವರಿ 06: ಮಂಗಳವಾರ ಮುಂಜಾನೆ ಷೇರು ವಹಿವಾಟು ಆರಂಭವಾಗುತ್ತದ್ದಂತೆ ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ಕಳೆದ ಕೆಲವು ದಿನಗಳಿಂದಲೂ ಕುಸಿತದ ಹಾದಿಯಲ್ಲೇ ಇದ್ದ ಮಾರುಕಟ್ಟೆ ಇಂದು ಆರು ವರ್ಷಗಳಲ್ಲೇ ಅತ್ಯಂತ ಕಡಿಮೆ ಅಂಕಕ್ಕೆ ಕುಸಿದಿದೆ.
ಷೇರು ಮಾರುಕಟ್ಟೆ 1213 ಅಂಕಿ ಕುಸಿದಿದ್ದು ಇದರಿಂದ ಕನಿಷ್ಟ 6 ಲಕ್ಷ ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದೆ. 4.6 ಪ್ರತಿಶತ ಕುಸಿತ ಕಂಡಿದೆ. 376 ನಿಫ್ಟಿ ಅಂಕಗಳು ಕುಸಿತಗೊಂಡಿವೆ.
ಏಷ್ಯಾದ ಇತರ ಷೇರು ಮಾರುಕಟ್ಟೆಯಲ್ಲೂ ಕುಸಿತ ಉಂಟಾಗಿದ್ದು, ಅಮೆರಿಕದ ವಾಲ್‌ಸ್ಟ್ರೀಟ್‌ನಲ್ಲಿಯೂ ಕುಸಿತವಾಗಿದೆ. ಹೀಗಾಗಿ ಇದನ್ನು ರಕ್ತಪಾತ (ಬ್ಲಡ್ ಬಾತ್) ಎಂದು ಕರೆಯಲಾಗುತ್ತಿದೆ.

ಕೇಂದ್ರ ಬಜೆಟ್ ಆದಾಗಿನಿಂದಲೂ ಷೇರು ಮಾರುಕಟ್ಟೆ ಕುಸಿತದಲ್ಲೇ ಇದ್ದು, ಸುಧಾರಣೆ ಕಾಣಲೇ ಇಲ್ಲ. ಈ ಕೂಡಲೇ ಹಣಕಾಸು ಸಚಿವ ಜೇಟ್ಲಿ ಅವರು ಬಂಡವಾಳ ಹೂಡಿಕೆದಾರರಿಗೆ ಭರವಸೆ ನೀಡದಿದ್ದಲ್ಲಿ ಮಾರುಕಟ್ಟೆಯು ಇನ್ನಷ್ಟು ಕುಸಿಯುವ ಭೀತಿ ಇದೆ ಎನ್ನಲಾಗುತ್ತಿದೆ.












Click it and Unblock the Notifications