ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರಿಷ್ಠ ಮಟ್ಟ ತಲುಪಿದ ಜಾಗತಿಕ ಕಚ್ಚಾತೈಲ ದರ; ಭಾರತದಲ್ಲಿ ಇಂಧನ ಏರಿಕೆ ಸಾಧ್ಯತೆ!

|
Google Oneindia Kannada News

ನವದೆಹಲಿ, ಜನವರಿ 20: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಏಳು ವರ್ಷಗಳ ಗರಿಷ್ಠ ಮಟ್ಟದಲ್ಲಿರುವುದರಿಂದ ಬರೋಬ್ಬರಿ ಎರಡು ತಿಂಗಳುಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾರತದಲ್ಲಿ ಭಾರೀ ಏರಿಕೆ ಕಾಣುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ, ಜಾಗತಿಕ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್​ಗೆ 88 ಡಾಲರ್ ಆಗಿದೆ. ಬ್ರೆಂಟ್ ಕಚ್ಚಾ ಫ್ಯೂಚರ್ಸ್ 87 ಸೆಂಟ್ಸ್​ ಅಥವಾ ಶೇ.1ರಷ್ಟು ಮೇಲೇರಿ, 0543 GMTಯಲ್ಲಿ ಪ್ರತಿ ಬ್ಯಾರೆಲ್​ಗೆ 88.38 ಡಾಲರ್​ನಂತೆ ವ್ಯವಹಾರ ನಡೆಸುತ್ತಿತ್ತು. ಈ ಹಿಂದಿನ ಸೆಷನ್​ಗೆ ಹೋಲಿಸಿದರೆ ಶೇ.1.2ರಷ್ಟು ಹೆಚ್ಚಳ ಆಗಿತ್ತು.

ಸಾಮಾನ್ಯ ಹಣದುಬ್ಬರದ ಹಿನ್ನೆಲೆಯಿಂದಾಗಿ ಭಾರತದಲ್ಲಿ ತೈಲ ಬೆಲೆಗೆ ಇನ್ನಷ್ಟು ಉತ್ತೇಜನ ನೀಡಬಹುದು. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣ ಆಗುತ್ತದೆ. ಅಂದಹಾಗೆ ಕಳೆದ ವರ್ಷದ ನವೆಂಬರ್​ನಲ್ಲಿ ಸರ್ಕಾರದಿಂದ ತೈಲ ಬೆಲೆಯ ಅಬಕಾರಿ ಸುಂಕ ಇಳಿಕೆ ಮಾಡಿದ ಮೇಲೆ ಬೆಲೆ ಸ್ಥಿರವಾಗಿಯೇ ಇದೆ. ಆದರೆ ಹೊಸ ವರ್ಷದ ಶುರುವಿನಿಂದಲೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ. ಒಂದು ವರದಿಗಳ ಪ್ರಕಾರ, ಕಳೆದ ನಾಲ್ಕು ವಾರದಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ.

The Global Crude Oil Price Reached its Peak; Fuel Price Increase Possibility in India

ಡಿಸೆಂಬರ್ 1ನೇ ತಾರೀಕಿನಂದು ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ ದರವು 69 ಡಾಲರ್​ನಷ್ಟಿತ್ತು. ಕಳೆದ ನಾಲ್ಕು ವಾರಗಳಿಂದ ಬೆಲೆ ಏರಿಕೆ ಆಗುತ್ತಿದೆ. ಅಕ್ಟೋಬರ್​ ನಂತರದಲ್ಲಿ ಇದು ದೀರ್ಘಾವಧಿ ಏರಿಕೆ ಓಟ ಆಗಿದೆ. ಇರಾಕ್​ನಿಂದ ಟರ್ಕಿಗೆ ಪೈಪ್​ಲೈನ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಹೀಗಾಗಿದೆ ಎನ್ನಲಾಗುತ್ತಿದೆ.

ಈಗಾಗಲೇ ರಷ್ಯಾ, ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿನ ಜಾಗತಿಕ ರಾಜಕೀಯ ಬಿಕ್ಕಟ್ಟಿನ ಕಾರಣಕ್ಕೆ ತೈಲ ಪೂರೈಕೆಯಲ್ಲಿ ಬಿಗುವಿನ ವಾತಾವರಣ ಆತಂಕ ಇದ್ದೇ ಇದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೊಡ್ಡ ಮಟ್ಟದಲ್ಲಿ ಅವಲಂಬಿತವಾಗಿರುವುದು ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಆಧಾರದ ಮೇಲೆ.

ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳಲ್ಲೂ ಕಚ್ಚಾ ತೈಲ ದರದ ಮೇಲೇ ಪೆಟ್ರೋಲ್- ಡೀಸೆಲ್ ಬೆಲೆ ಲೆಕ್ಕಾಚಾರ ಆಗುತ್ತದೆ. ಏಕೆಂದರೆ ಪೆಟ್ರೋಲ್ ಹಾಗೂ ಡೀಸೆಲ್​ನ ಮುಖ್ಯ ಮೂಲ ಕಚ್ಚಾ ತೈಲ.

ಸರ್ಕಾರವು ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಹೊರತಾಗಿಯೂ ಭಾರತದಲ್ಲಿ ತೈಲ ಬೆಲೆ ಈಗಲೂ ದುಬಾರಿಯೇ. ದೆಹಲಿಯಲ್ಲಿ ಸದ್ಯಕ್ಕೆ ಪೆಟ್ರೋಲ್ ದರ ಲೀಟರ್​ಗೆ 95.41 ರೂಪಾಯಿ (ಗುರುವಾರ) ಇದ್ದರೆ, ಡೀಸೆಲ್ ಪ್ರತಿ ಲೀಟರ್​ಗೆ ರೂ. 86.67 ಇದೆ. ಸರ್ಕಾರದಿಂದ ಬೆಲೆ ಇಳಿಸುವ ಮೊದಲು, 2021ರ ನವೆಂಬರ್​ನಲ್ಲಿ ದೆಹಲಿಯಲ್ಲಿ ಪೆಟ್ರೋಲ್​ ಬೆಲೆ 100 ರೂಪಾಯಿ ಇತ್ತು.

ತೈಲ ಬೆಲೆ ಏರಿಕೆಯ ಕಾರಣದಿಂದಾಗಿಯೇ ಭಾರತದ ಆರ್ಥಿಕ ಸಮತೋಲನದ ಮೇಲೆ ಪ್ರತಿಕೂಲ ಪರಿಣಾಮ ಆಯಿತು. ಉದಾಹರಣೆಗೆ, ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತಿದ್ದಂತೆ ಪದಾರ್ಥಗಳ ಬೆಲೆ ಜಾಸ್ತಿ ಆಯಿತು. ಆ ಮೂಲಕ ಹಣದುಬ್ಬರ ಹೆಚ್ಚಾಯಿತು. ಈಗಾಗಲೇ ಸಾಮಾನ್ಯ ನಾಗರಿಕರಿಗೆ ಇಂಧನ ದರ ಏರಿಕೆ ಬಿಸಿ ತಗುಲಿದೆ. ಇದೀಗ ಕಚ್ಚಾ ತೈಲ ಬೆಲೆ ಹೆಚ್ಚಳವು ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆಗೆ ಕಾರಣವಾಗಲಿದೆ.

ಇದೇ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಆಗುತ್ತಿದ್ದು, ತೈಲ ದರದ ಮೇಲೆ ಪರಿಣಾಮ ಬೀರುವಂತಹ ಘೋಷಣೆ ಮಾಡಬಹುದು ಎಂದು ದೇಶದ ಜನರು ನಿರೀಕ್ಷಿಸುತ್ತಿದ್ದಾರೆ. ಆದರೆ ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಕೇಂದ್ರ ಸರ್ಕಾರವು ತೈಲ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಒಪೆಕ್ ಅಧಿಕಾರಿಗಳು ರಾಯಿಟರ್ಸ್​ ಸುದ್ದಿ ಸಂಸ್ಥೆಗೆ ತಿಳಿಸಿರುವಂತೆ, ತೈಲ ದರದ ಏರಿಕೆಯು ಮುಂದಿನ ಕೆಲ ತಿಂಗಳು ಮುಂದುವರಿಯಲಿದೆ. ಬೇಡಿಕೆಯಲ್ಲಿ ಚೇತರಿಕೆ ಹಾಗೂ ಒಪೆಕ್‌ನಲ್ಲಿನ ಸೀಮಿತ ಸಾಮರ್ಥ್ಯದ ಕಾರಣಕ್ಕೆ ದರವು ಪ್ರತಿ ಬ್ಯಾರೆಲ್​ಗೆ 100 ಡಾಲರ್​ ದಾಟಬಹುದು ಎಂದು ತಿಳಿಸಿದ್ದಾರೆ.

English summary
Petrol and diesel prices are likely to rise in India two months after the Global crude oil prices hit a seven-year high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X