ಭಾರತದಲ್ಲಿ ಜೂನ್ 2021ಕ್ಕೆ ಟೆಸ್ಲಾ ಮಾಡೆಲ್ 3 ಕಾರುಗಳು ಬಿಡುಗಡೆ
ಟೆಸ್ಲಾ ಬಹಳ ಸಮಯದಿಂದ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು, ಸಾಧ್ಯವಾಗಿರಲಿಲ್ಲ. ಆದರೆ ಈಗ ಸಮಯ ಕೂಡಿಬಂದಿದ್ದು ಸದ್ಯದಲ್ಲೇ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.
ಎಕನಾಮಿಕ್ ಟೈಮ್ಸ್ ಆಟೋ ವರದಿಯ ಪ್ರಕಾರ, ಟೆಸ್ಲಾ ತನ್ನ ಮೊದಲ ಕಾರನ್ನು ಜೂನ್ 2021 ರೊಳಗೆ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದು ಕಂಪನಿಯ ಅಗ್ಗದ ಕಾರು ಮಾಡೆಲ್ 3 ಆಗಿರಬಹುದು ಎಂದು ಅಂದಾಜಿಸಲಾಗಿದ್ದು, ಟೆಸ್ಲಾ ತನ್ನ ಬುಕಿಂಗ್ ಅನ್ನು ಜನವರಿ 2021 ರಿಂದ ಪ್ರಾರಂಭಿಸಬಹುದು.
ಟೆಸ್ಲಾ ಈ ಹಿಂದೆ 2016ರಲ್ಲಿ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಪ್ರಯತ್ನಿಸಿತು. ಆದರೆ ಎಲೆಕ್ಟ್ರಿಕ್ ವಾಹನಗಳ ನೀತಿಯ ಅನಿಶ್ಚಿತತೆಯಿಂದಾಗಿ ಕಂಪನಿಯು ಕಾರುಗಳ ಬಿಡುಗಡೆಯನ್ನು ಮುಂದೂಡಿತು. ಆದರೆ ಈಗ ಮತ್ತೆ ನಾಲ್ಕು ವರ್ಷಗಳ ನಂತರ ಕಂಪನಿಯು ತನ್ನ ಬುಕಿಂಗ್ ಪ್ರಾರಂಭಿಸಲಿದೆ.

ಟೆಸ್ಲಾ ಮಾಡೆಲ್ 3 ರ ಬುಕಿಂಗ್ ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಕಾರನ್ನು ಸಿಬಿಯು ವರ್ಗದ ಮೂಲಕ ದೇಶದಲ್ಲಿ ಪರಿಚಯಿಸಲಾಗುವುದು. ಇದರ ಅಡಿಯಲ್ಲಿ ದೇಶದಲ್ಲಿ ಆರಂಭಿಕವಾಗಿ 2500 ಘಟಕಗಳನ್ನು ತೆರೆಯಬಹುದು.
ಟೆಸ್ಲಾ ಮಾಡೆಲ್ 3 ಕಾರುಗಳು ಪರ್ಫಾರ್ಮೆನ್ಸ್, ಲಾಂಗ್ ರೇಂಜ್ ಮತ್ತು ಸ್ಟ್ಯಾಂಡರ್ಡ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ರಿಯರ್ ವೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಬ್ಯಾಟರಿ ಗಾತ್ರವು 50 kWh ನಿಂದ 75 kWh ವರೆಗೆ ಇರಲಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 381 ಕಿ.ಮೀ ನಿಂದ 580 ಕಿ.ಮೀವರೆಗೆ ಚಲಿಸುತ್ತದೆ.
ಪ್ರಸ್ತುತ ಭಾರತದಲ್ಲೇ ಟೆಸ್ಲಾ ಕಾರುಗಳನ್ನು ಉತ್ಪಾದಿಸುವ ಕುರಿತು ಯಾವುದೇ ವರದಿಯಿಲ್ಲ, ಆದರೆ ಭವಿಷ್ಯದಲ್ಲಿ ಕಾರುಗಳನ್ನು ಇಲ್ಲಿಯೇ ಉತ್ಪಾದಿಸಬಹುದು.












Click it and Unblock the Notifications