7 ಸಾವಿರ ಕೋಟಿ ಕಳೆದುಕೊಂಡ ಟೆಕ್ ಮಹೀಂದ್ರಾ ಹೂಡಿಕೆದಾರರು
ನವದೆಹಲಿ, ಮೇ 29: ದೇಶದ ಐದನೇ ಅತಿ ದೊಡ್ಡ ಸಾಫ್ಟ್ ವೇರ್ ಸೇವಾ ಸಂಸ್ಥೆಯಾದ ಟೆಕ್ ಮಹೀಂದ್ರಾ ಕಂಪನಿಯ ಷೇರುಗಳು ಶೇ. 17ರಷ್ಟು ಕುಸಿಯಿತು.
ಸೋಮವಾರ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಈ ಮಟ್ಟಿಗಿನ ಇಳಿತ ಕಂಡಿದ್ದರಿಂದ, ಈ ಸಂಸ್ಥೆಯ ಹೂಡಿಕೆದಾರರರು ಸುಮಾರು 7 ಸಾವಿರ ಕೋಟಿ ರು.ಗಳನ್ನು ಕಳೆದುಕೊಂಡಿದ್ದಾರೆಂದು ಎನ್ ಡಿ ಟಿವಿ ಹೇಳಿದೆ.

ಟೆಕ್ ಮಹೀಂದ್ರಾ ಕಂಪನಿಯ ಲಾಭಾಂಶದಲ್ಲಿ, ಇದೇ ವರ್ಷ ಜನವರಿಯಿಂದ ಮಾರ್ಚ್ ವರೆಗೆ ಶೇ. 30ರಷ್ಟು ನಷ್ಟ ಅನುಭವಿಸಿದೆ. ಆದರೆ, ಕಂಪನಿಯು ತನ್ನ ವಹಿವಾಟಿನಲ್ಲಿ ಶೇ. 10ರಷ್ಟು ಏರಿಕೆ ಕಂಡಿರುವುದಾಗಿ ಹೇಳಿದ್ದರೂ, ಹೂಡಿಕೆದಾರರು ನಷ್ಟಅನುಭವಿಸಿರುವುದಂತೂ ಸತ್ಯ.












Click it and Unblock the Notifications