ಟಿಸಿಎಸ್ 3ನೇ ತ್ರೈಮಾಸಿಕ ವರದಿ: ಸಂಸ್ಥೆಗೆ ಶೇ 24 ರಷ್ಟು ನಿವ್ವಳ ಲಾಭ

ಮುಂಬೈ, ಜನವರಿ 10: ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಇಂದು(ಜ.10) ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ.

ಡಿಸೆಂಬರ್ 2018ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸಂಸ್ಥೆ ಶೇ24.1ರಷ್ಟು ಪ್ರಗತಿ ಕಂಡಿದ್ದು, 8,105 ಕೋಟಿ ರು ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಸ್ಥೆಯು 6,531 ಕೋಟಿ ರು ಗಳಿಸಿತ್ತು.

ಈ ತ್ರೈಮಾಸಿಕದ ಅಂತ್ಯಕ್ಕೆ ಸಂಸ್ಥೆಯ ಒಟ್ಟು ಆದಾಯ ಶೇ 20.8ರಷ್ಟು ಏರಿಕೆಯಾಗಿದ್ದು, 37,338 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 30,904 ಕೋಟಿ ರು ಗಳಿಸಿತ್ತು.

TCS Q3 net grows 24.1 pc to Rs 8,105 cr

ಅಕ್ಟೋಬರ್ -ಡಿಸೆಂಬರ್ 2018 ತ್ರೈಮಾಸಿಕದಲ್ಲಿ ಟಿಸಿಎಸ್ 6,827 ಹೊಸ ನೇಮಕಾತಿ ಮಾಡಿಕೊಂಡಿದೆ. ಒಟ್ಟಾರೆ ಉದ್ಯೋಗಿಗಳ ಸಂಖ್ಯೆ 4,17,929ಕ್ಕೇರಿದೆ. ಕಳೆದ 12 ತಿಂಗಳಿನಲ್ಲಿ ಸಂಸ್ಥೆಯ ಆಟ್ರಿಷನ್ ದರ ಶೇ 11.2ರಷ್ಟಿತ್ತು. ಪ್ರತಿ ಈಕ್ವಿಟಿ ಷೇರಿನ ಮೇಲೆ 4ರು ನಂತೆ ಮೂರನೇ ಮಧ್ಯಂತರ ಡಿವಿಡೆಂಡ್ ಘೋಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+