ಉಚಿತವಾಗಿ ಉಬರ್‌ನಲ್ಲಿ ತೆರಳಿ ಟಾಟಾ ಮನೆ ನೋಡ್ಕಂಡ್ ಬನ್ನಿ

ಬೆಂಗಳೂರು, ಸೆಪ್ಟೆಂಬರ್. 10: ಟಾಟಾ ನಿವೇಶನ ನೋಡಲು ಹೋಗಬೇಕು, ಮನೆ ಖರೀದಿ ಮಾಡಬೇಕು ಆದರೆ ಸ್ವಂತ ವಾಹನವಿಲ್ಲ, ಹೇಗೆ ತೆರಳುವುದು, ಸಮಯ ವ್ಯರ್ಥವಾಗುತ್ತದೆಯಲ್ಲ ಎಂದು ಇನ್ನು ಮುಂದೆ ಯೋಚನೆ ಮಾಡಬೇಕಾಗಿಲ್ಲ. ಇದಕ್ಕೆ ಪ್ರಖ್ಯಾತ ಎರಡು ಕಂಪನಿಗಳೆ ಉಚಿತ ಸೌಲಭ್ಯದ ಉತ್ತರ ನೀಡಿವೆ.

ಟಾಟಾ ವ್ಯಾಲ್ಯೂ ಹೋಮ್ಸ್ ಮತ್ತು ಉಬರ್ ಒಂದಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಜ್ಜೆ ಇಡಲು ಮುಂದಾಗಿವೆ. ಬೆಂಗಳೂರು, ಅಹಮದಾಬಾದ್, ಚೆನ್ನೈ, ನವದೆಹಲಿ, ಮುಂಬೈ ಮತ್ತು ಪುಣೆ ಮಹಾನಗರದ ಜನರಿಗೆ ವಿಶೇಷ ಸೌಲಭ್ಯ ಲಭ್ಯವಾಗಲಿದೆ.

Tata Value Homes and Uber Come Together to Enrich Home Buying

ಉಬರ್ ನ ಹೊಸ ಬಳಕೆದಾರರು ಟಾಟಾ ವ್ಯಾಲ್ಯೂ ಹೋಮ್ಸ್ ಕಡೆ ಪ್ರಯಾಣ ಬೆಳೆಸಿದರೆ 500 ರು, ಮೌಲ್ಯದ ಉಚಿತ ಸಂಚಾರದ ಕೊಡುಗೆಯನ್ನು ಪಡೆದುಕೊಳ್ಳಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಟಾಟಾ ಹೌಸಿಂಗ್ ನ ಎಂಡಿ ಬೋರ್ಟನ್ ಬ್ಯಾನರ್ಜಿ, ನಮಗೆ ಗ್ರಾಹಕರ ಹಿತವೇ ಮುಖ್ಯ, ಟಾಟಾ ಕಂಪನಿಯ ನಿವೇಶನಗಳ ವೀಕ್ಷಣೆಯನ್ನು ಉಚಿತವಾಗಿ ವೀಕ್ಷಿಸಲು ಈ ಹೊಸ ಸವಲತ್ತು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ನಿಮ್ಮ ಹೊಸ ನಿವೇಶನ, ಮನೆ ಕನಸನ್ನು ನನಸು ಮಾಡಿಕೊಳ್ಳಲು ಇದೊಂದು ಸದಾವಕಾಶ. ಸ್ವಂತ ವಾಹನದಲ್ಲಿ ತೆರಳಿ ಸಮಸ್ಯೆಗೆ ಸಿಲಕ್ಕಿಹಾಕಿಕೊಳ್ಳುವ ಬದಲು ವಿಶೇಷ ಸೇವೆ ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

2010 ರಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿರುವ ಟಾಟಾ ಗ್ರಾಹಕರಿಗೆ ಮನಮೆಚ್ಚುವ ದರದಲ್ಲಿ ನಿವೇಶನ ಮತ್ತು ಮನೆ ಕಲ್ಪಿಸುತ್ತಿದೆ. ಉಬರ್ ಸಹ ಅತ್ಯುತ್ತಮ ಸೇವೆಗೆ ಹೆಸರಾಗಿದ್ದು ಎಲ್ಲ ನಗರದ ಜನರಿಗೆ ಹತ್ತಿರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+